newsfirstkannada.com

ಬಿಸಿಸಿಐನಿಂದ ಮಹಾ ಮೋಸ; ನಿವೃತ್ತಿ ಘೋಷಿಸಿ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!

Share :

Published August 24, 2024 at 6:33pm

    ಶುಭ್ಮನ್​ ಗಿಲ್​ಗಾಗಿ ಸ್ಟಾರ್​ ಆಟಗಾರನನ್ನೇ ಕೂರಿಸಿದ ಬಿಸಿಸಿಐ

    ಬಿಸಿಸಿಐ ವಿರುದ್ಧ ಟೀಮ್​ ಇಂಡಿಯಾ ಫ್ಯಾನ್ಸ್​ ಭಾರೀ ಆಕ್ರೋಶ!

    ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಖ್ಯಾತ ಕ್ರಿಕೆಟರ್​​​

ಹಲವು ವರ್ಷಗಳಿಂದ ಭಾರತ ಕ್ರಿಕೆಟ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಸ್ಟಾರ್‌ ಕ್ರಿಕೆಟರ್​​ ಶಿಖರ್​ ಧವನ್​​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಇಂದು ಭಾವನಾತ್ಮಕ ವಿಡಿಯೋ ಪೋಸ್ಟ್‌ ಮಾಡಿದ ಶಿಖರ್​​ ಧವನ್​​​​ ನಿವೃತ್ತಿ ಘೋಷಿಸಿದ್ರು. ಕೇವಲ ಅಂತಾರಾಷ್ಟ್ರೀಯ ಮಾತ್ರವಲ್ಲ ದೇಶೀಯ ಕ್ರಿಕೆಟ್​ಗೂ ಗುಡ್​ ಬೈ ಹೇಳಿದ್ರು.

2010ರಲ್ಲಿ ಶಿಖರ್‌ ಧವನ್‌ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ರು. ಮೊದಲು ಏಕದಿನ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದ ಗಬ್ಬರ್‌ ನಂತರ ಟಿ20 ಹಾಗೂ ಟೆಸ್ಟ್‌ ತಂಡ ಸೇರಿದರು. ಇವರು ಜಗತ್ತಿನ ಶ್ರೇಷ್ಠ ಓಪನಿಂಗ್​ ಬ್ಯಾಟರ್​ ಎಂದೇ ಕರೆಯಲಾಗುತ್ತಿತ್ತು. ಆದರೆ, ಶುಭ್ಮನ್​ ಗಿಲ್​ ಬಂದ ನಂತರ ಧವನ್​ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಹಾಗಾಗಿ ಇವರು 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.

ಬಿಸಿಸಿಐ ವಿರುದ್ಧ ಫ್ಯಾನ್ಸ್​ ಆಕ್ರೋಶ

ಶುಭ್ಮನ್​ ಗಿಲ್​ ಬಂದ ಬಳಿಕ ಶಿಖರ್​ ಧವನ್​ ಕಡೆ ಗಮನ ಹರಿಸಲಿಲ್ಲ. ಎಷ್ಟೋ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಪರ ಗಬ್ಬರ್​ ಬ್ಯಾಟ್​ ಬೀಸಿ ಗೆಲ್ಲಿಸಿದ್ರು. ಐಸಿಸಿ ಮೆಗಾ ಟೂರ್ನಿಗಳಲ್ಲಿ ಮ್ಯಾನ್ ಆಫ್​ ದಿ ಸೀರೀಸ್​ ತೆಗೆದುಕೊಂಡರು. ಇಷ್ಟಾದ್ರೂ ಕಳೆದ 2 ವರ್ಷಗಳಿಂದ ಶಿಖರ್​ ಧವನ್​ಗೆ ಆಡಲು ಚಾನ್ಸ್​ ನೀಡಲಿಲ್ಲ. ಹಾಗಾಗಿ ಶಿಖರ್​ ಧವನ್​ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ರು ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ರು.

ಶಿಖರ್‌ ಸಾಧನೆ

ಶಿಖರ್‌ ಧವನ್ 34 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 7 ಶತಕ, 5 ಅರ್ಧಶತಕ ಸೇರಿ 2315 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 167 ಪಂದ್ಯಗಳನ್ನು ಆಡಿದ್ದು, 6793 ರನ್‌ ಸಿಡಿಸಿದ್ದಾರೆ. ಈ ಪೈಕಿ 17 ಶತಕ ಮತ್ತು 39 ಅರ್ಧಶತಕ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 68 ಪಂದ್ಯಗಳು ಆಡಿದ್ದು, 11 ಅರ್ಧಶತಕ ಜತೆಗೆ ಸುಮಾರು 1759 ರನ್‌ ಚಚ್ಚಿದ್ದಾರೆ.

ಇದನ್ನೂ ಓದಿ: ನಂಬಿಸಿ ವಂಚಿಸಿದ್ದ ಪತ್ನಿ.. ವೈಯಕ್ತಿಕ ಜೀವನದ ಉದ್ವಿಗ್ನತೆಯಲ್ಲೂ ಕುಗ್ಗಿರಲಿಲ್ಲ; ಧವನ್ ನಿವೃತ್ತಿಗೆ ಕಾರಣ ಏನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಿಸಿಸಿಐನಿಂದ ಮಹಾ ಮೋಸ; ನಿವೃತ್ತಿ ಘೋಷಿಸಿ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!

https://newsfirstlive.com/wp-content/uploads/2024/08/Team-India-1.jpg

Load More