‘ಟಿ20 ಕ್ರಿಕೆಟ್ನಲ್ಲಿ ಎಷ್ಟು ಚೆನ್ನಾಗಿ ಆಡಿದ್ರೂ ಅವಕಾಶ ಸಿಗಲಿಲ್ಲ’
‘ಕಳೆದ ಐಪಿಎಲ್ ಸೀಸನ್ನಲ್ಲಿ ನನಗೆ ಯಾರು ಚಾನ್ಸ್ ನೀಡಲಿಲ್ಲ’
ಗಳಗಳನೆ ಕಣ್ಣೀರಿಟ್ಟ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್..!
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್ಗಳ ಗೆಲುವು ಸಾಧಿಸಿತ್ತು. ಮೈಸೂರು ತಂಡದ ಪರ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕರುಣ್ ನಾಯರ್ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್ ಚಚ್ಚಿದ್ರು. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ ನಡೆಯಲಿರೋ ಹೊತ್ತಲ್ಲೇ ಕನ್ನಡಿಗ ಕರುಣ್ ನಾಯರ್ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಈ ಮಧ್ಯೆ ಕರುಣ್ ನಾಯರ್ ತನ್ನ ನೋವು ತೋಡಿಕೊಂಡಿದ್ದಾರೆ.
ಕರುಣ್ ನಾಯರ್ ಏನಂದ್ರು?
ನನಗೆ 30 ವರ್ಷ. ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ20 ನಂತರ, ನಾನು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರ ರಣಜಿ ಟ್ರೋಫಿ ಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀ ಹೆಚ್ಚು ರನ್ ಗಳಿಸಿದ್ದೆ. ಆದ್ರೂ ನನಗೆ ಐಪಿಎಲ್ನಲ್ಲಿ ಅವಕಾಶ ಸಿಗಲಿಲ್ಲ ಎಂದು ಕಣ್ಣೀರಿಟ್ಟರು.
ನನಗೆ ಅವಕಾಶ ಸಿಗುತ್ತದೆಯೇ ಎಂದು ಕನ್ಫರ್ಮ್ ಮಾಡಿಕೊಳ್ಳುತ್ತೇನೆ. ಎಲ್ಲೇ ಅವಕಾಶ ಸಿಕ್ಕರೂ ಬಳಸಿಕೊಳ್ಳುತ್ತೇನೆ. ನಾನು ಒಂದು ವರ್ಷದಿಂದ ಮನೆಯಲ್ಲೇ ಇದ್ದೆ, ಅವಕಾಶಗಳನ್ನು ಕಳೆದುಕೊಂಡಿದ್ದೇನೆ. ಏನೂ ಕೆಲಸ ಮಾಡದಿದ್ದಾಗ, ಏನು ಮಾಡಬಹುದು ಎಂದು ನನ್ನನ್ನ ನಾನೇ ಕೇಳಿಕೊಂಡೆ. ಅವಕಾಶ ಸಿಕ್ಕಾಗ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಯ್ತು ಎಂದರು.
ಕಠಿಣ ವರ್ಷಗಳು ನನಗೆ ಹೆಚ್ಚು ಪ್ರೇರಣೆ ನೀಡಿವೆ. ಈಗ ಆಡುತ್ತಿರುವ ಆಟವೇ ನನಗೆ ಮುಖ್ಯ. ಅದು ಲೀಗ್ ಪಂದ್ಯವಾಗಲಿ ಅಥವಾ ದೇಶೀಯ ಪಂದ್ಯವಾಗಲಿ ಎಂದು ಗಳಗಳನೇ ಅತ್ತರು.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ RCB ಕೋಚ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ