newsfirstkannada.com

×

ಸ್ಟಾರ್​​​ ಪ್ಲೇಯರ್​ ಭರ್ಜರಿ ಕಮ್​ಬ್ಯಾಕ್​​​; ಟೀಮ್​ ಇಂಡಿಯಾ ಕದ ತಟ್ಟಿದ ಪವರ್​​ ಹಿಟ್ಟರ್​​!

Share :

Published October 1, 2024 at 6:20pm

    ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು!

    ಸದ್ಯದಲ್ಲೇ ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿ ಆಡಲಿರೋ ಭಾರತ

    ಈ ಮುನ್ನವೇ ಬಿಸಿಸಿಐಗೆ ದೊಡ್ಡ ಮೆಸೇಜ್​​ ಕೊಟ್ಟ ಸ್ಟಾರ್​ ಪ್ಲೇಯರ್​​​

ಕಳೆದ ಸಲ ಟೀಮ್​​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದಾಗ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಆಗಿದ್ದರು. ಆಸ್ಟ್ರೇಲಿಯಾ, ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸೀರೀಸ್​ನಲ್ಲಿ ಕೇವಲ 1 ಪಂದ್ಯ ಆಡಿ ಕೊಹ್ಲಿ ಟೀಮ್​ ಇಂಡಿಯಾದಿಂದ ಹೊರ ನಡೆದಿದ್ದರು. ಆಗ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಜವಾಬ್ದಾರಿ ಹೊತ್ತಿದ್ದು ಸ್ಟಾರ್​​ ಪ್ಲೇಯರ್​​​​ ಅಜಿಂಕ್ಯ ರಹಾನೆ. ಕೊಹ್ಲಿ ನೇತೃತ್ವದಲ್ಲಿ ಟೀಮ್​ ಇಂಡಿಯಾ ಒಂದು ಪಂದ್ಯ ಸೋತ್ರೂ ರಹಾನೆ ಕ್ಯಾಪ್ಟನ್ಸಿಯಲ್ಲಿ ಮಿಂಚಿತು.

ಇದಾದ ಬಳಿಕ ಭಾರತ ಟೆಸ್ಟ್​ ತಂಡದ ಪರ್ಮನೆಂಟ್​ ಮೆಂಬರ್​ ಆಗಿದ್ರು ರಹಾನೆ. ಆದರೀಗ, ಬರೋಬ್ಬರಿ ಒಂದೂವರೆ ವರ್ಷದಿಂದ ಟೀಮ್​ ಇಂಡಿಯಾದಿಂದ ದೂರ ಉಳಿದಿದ್ದಾರೆ. ಸಿಕ್ಕ ಅವಕಾಶ ಬಳಸಿಕೊಂಡು ಎಷ್ಟೇ ಪ್ರಯತ್ನ ಮಾಡಿದ್ರೂ ಮತ್ತೆ ಟೀಮ್​ ಇಂಡಿಯಾ ಸೇರುವ ಕನಸು ಈಡೇರುತ್ತಿಲ್ಲ. ಇದರ ಮಧ್ಯೆ ರಹಾನೆ ಮತ್ತೆ ಬಿಸಿಸಿಐ ಕದ ತಟ್ಟಿದ್ದಾರೆ.

ಅಜಿಂಕ್ಯಾ ರಹಾನೆ ಭರ್ಜರಿ ಕಮ್​ಬ್ಯಾಕ್​​

ಇತ್ತೀಚೆಗೆ ನಡೆದ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಿಂದ ರಹಾನೆ ಅವರನ್ನು ಬಿಸಿಸಿಐ ಸೆಲೆಕ್ಷನ್​ ಕಮಿಟಿ ಕೈ ಬಿಟ್ಟಿತ್ತು. ಇಷ್ಟಾದ್ರೂ ಮತ್ತೆ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಬಾಗಿಲು ರಹಾನೆ ತಟ್ಟಿದ್ದಾರೆ. ಸದ್ಯದಲ್ಲೇ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ. ಈ ಸೀರೀಸ್​ಗೆ ಇನ್ನೂ ಟೀಮ್​​ ಇಂಡಿಯಾ ಪ್ರಕಟ ಆಗಿಲ್ಲ. ಇದಕ್ಕೂ ಮುನ್ನವೇ ಅಜಿಂಕ್ಯ ರಹಾನೆ ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ಸಂದೇಶ ಕಳಿಸಿದ್ದಾರೆ.

ಇರಾನಿ ಕಪ್‌ನಲ್ಲಿ ಅಮೋಘ ಬ್ಯಾಟಿಂಗ್

ಇರಾನಿ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಟಾಸ್ ಸೋತ್ರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ದಿನದ ಅಂತ್ಯಕ್ಕೆ 4 ವಿಕೆಟ್‌ಗೆ 237 ರನ್‌ ಕಲೆ ಹಾಕಿದೆ. ತಂಡದ ನಾಯಕ ರಹಾನೆ ಅಮೋಘ ಬ್ಯಾಟಿಂಗ್​ ಮಾಡಿ ಗಮನ ಸೆಳೆದ್ರು. ತಾನು ಎದುರಿಸಿದ 197 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 86 ರನ್‌ ಸಿಡಿಸಿ ಅಬ್ಬರಿಸಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಕುಂದಾಪುರ; ಕಿಚ್ಚನಿಂದ ಕ್ಲಾಸ್​ ಪಕ್ಕಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​​​ ಪ್ಲೇಯರ್​ ಭರ್ಜರಿ ಕಮ್​ಬ್ಯಾಕ್​​​; ಟೀಮ್​ ಇಂಡಿಯಾ ಕದ ತಟ್ಟಿದ ಪವರ್​​ ಹಿಟ್ಟರ್​​!

https://newsfirstlive.com/wp-content/uploads/2024/09/TEAM-INDIA-1.jpg

Load More