newsfirstkannada.com

×

ಟೀಮ್​ ಇಂಡಿಯಾದ ಈ ದಿಗ್ಗಜರ ದಾಖಲೆ ಮುರಿಯಲಿದ್ದಾರೆ ಆರ್​​. ಅಶ್ವಿನ್​​​; ಏನದು?

Share :

Published September 16, 2024 at 8:48pm

    ಸೆಪ್ಟೆಂಬರ್ 19 ರಿಂದ ಭಾರತ, ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್

    ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರೋ ಮ್ಯಾಚ್​​​

    ಅನಿಲ್​ ಕುಂಬ್ಳೆ ದಾಖಲೆ ಮುರಿಯುವ ಬಗ್ಗೆ ಆರ್​​. ಅಶ್ವಿನ್​ ಮಾತು..!

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಪಂದ್ಯ ಕಾನ್ಪುರದ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮುನ್ನವೇ ಟೀಮ್​ ಇಂಡಿಯಾದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್, ಕುಂಬ್ಳೆ ದಾಖಲೆ ಮುರಿಯುವ ಕುರಿತು ಮಾತಾಡಿದ್ದಾರೆ.

ಅಶ್ವಿನ್​​ ಹೇಳಿದ್ದೇನು?

ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದವರ ಪೈಕಿ 2ನೇ ಸ್ಥಾನದಲ್ಲಿರೋರು ಅಶ್ವಿನ್​. ಇವರು ಕುಂಬ್ಳೆ ದಾಖಲೆ ಬಗ್ಗೆ ಮಾತಾಡಿದ್ದು, ​ನಾನು ನನಗಾಗಿ ಯಾವುದೇ ಗುರಿ ಇಟ್ಟುಕೊಂಡಿಲ್ಲ. ಅನಿಲ್ ಕುಂಬ್ಳೆ ಅವರ ದಾಖಲೆ ಮುರಿಯಬೇಕು ಅಂದುಕೊಂಡಿದ್ದೇನೆ. ಆದರೆ ನಾನು ದಿನದಿಂದ ದಿನಕ್ಕೆ ಸಂತೋಷವಾಗಿದ್ದೇನೆ. ಕೇವಲ ಗುರಿ ಕಡೆಗೆ ಮಾತ್ರ ಫೋಕಸ್​ ಮಾಡಿ, ಆಟದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದರು.

ಈ ಮುನ್ನ ಅಶ್ವಿನ್ ಅವರಿಗೆ 40 ವರ್ಷಗಳ ಕಾಲ ಕ್ರಿಕೆಟ್ ಆಡಬಹುದೇ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಉತ್ತರ ನೀಡಿದ ಅಶ್ವಿನ್​​ ಅವರು, ನನ್ನ ಮನಸ್ಸಿನಲ್ಲಿ ಅಂತಹದ್ದೇನೂ ಇಲ್ಲ. ನಾನು ಒಂದು ದಿನ ನಿವೃತ್ತಿ ಘೋಷಿಸುತ್ತೇನೆ. ಕಾರಣ ವಯಸ್ಸಾದಾಗ ಉತ್ತಮ ಪ್ರದರ್ಶನ ನೀಡಲು ಹೆಚ್ಚು ಪ್ರಯತ್ನ ಪಡಬೇಕು. ಕಳೆದ 3-4 ವರ್ಷಗಳಲ್ಲಿ ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ನನ್ನನ್ನು ಸುಧಾರಿಸಲು ಆಗುವುದಿಲ್ಲ ಎನ್ನುವ ದಿನ ನಾನು ಆಟ ಬಿಡುತ್ತೇನೆ ಎಂದಿದ್ದರು.

ಇದನ್ನೂ ಓದಿ: ಶಿಖರ್​ ಧವನ್​ ಬೆನ್ನಲ್ಲೇ ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಸ್ಟಾರ್​ ಪ್ಲೇಯರ್​​​; ಸದ್ಯದಲ್ಲೇ ಕ್ರಿಕೆಟ್​ಗೆ ಗುಡ್​ ಬೈ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾದ ಈ ದಿಗ್ಗಜರ ದಾಖಲೆ ಮುರಿಯಲಿದ್ದಾರೆ ಆರ್​​. ಅಶ್ವಿನ್​​​; ಏನದು?

https://newsfirstlive.com/wp-content/uploads/2024/02/ASHWIN_TEST_500.jpg

Load More