ಸಚಿನ್ ತೆಂಡೂಲ್ಕರ್ ತವರಲ್ಲಿ 49ನೇ ಶತಕ ಸಿಡಿಸ್ತಾರಾ ವಿರಾಟ್ ಕೊಹ್ಲಿ?
ಸಿಂಹಳೀಯರ ಬೇಟೆ ಆಡೋದು ಎಂದರೆ ವಿರಾಟ್ ಕೊಹ್ಲಿಗೆ ಫೇವರಿಟ್
ಅಜರುದ್ದೀನ್, ತೆಂಡೂಲ್ಕರ್ ಬಿಟ್ರೆ ವಾಂಖೆಡೆಗೆ ಕಿಂಗ್ ಅಂದ್ರೆ ಕೊಹ್ಲಿನೇ
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮುಂಬೈ ಹೋಮ್ಗ್ರೌಂಡ್ ಆಗಿರಬಹುದು. ಆದ್ರೆ, ಇಲ್ಲಿ ನಡೆದಿರೋದು ಎಲ್ಲ ಕಿಂಗ್ ಕೊಹ್ಲಿ ದರ್ಬಾರ್. ಇಂದೂ ಲಂಕನ್ ಲಯನ್ಸ್ ಬೇಟೆಯಾಡೋದು ವಿರಾಟನೇ. ವಾಂಖೆಡೆಯ ಅಸಲಿ ರಾಜ, ಸಿಂಹಳೀಯರನ್ನ ಸಿಂಹಸ್ವಪ್ನವಾಗಿ ಕಾಡುವ ಕೊಹ್ಲಿ.
ಇಂಡೋ-ಲಂಕಾ ವಿಶ್ವಕಪ್ ಫೈಟ್ಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್ ಮಹಾ ಸಮರದಲ್ಲಿ ಅಜೇಯ ಓಟ ಓಡ್ತಿರೋ ಟೀಮ್ ಇಂಡಿಯಾ, ಮತ್ತೊಂದು ಭರ್ಜರಿ ಗೆಲುವನ್ನ ಎದುರು ನೋಡ್ತಿದೆ. ಮುಂಬೈನ ವಾಂಖೆಡೆಯಲ್ಲಿ ಇಂದು ನಡೆಯೋ ಯುದ್ಧದಲ್ಲಿ ಗೆದ್ದು ಸೆಮೀಸ್ಗೆ ಎಂಟ್ರಿ ಕೊಡೋದು ರೋಹಿತ್ ಪಡೆಯ ಲೆಕ್ಕಾಚಾರ.
ಮುಂಬೈನಲ್ಲಿ ಲಂಕಾ ದಹನಕ್ಕೆ ಕಿಂಗ್ ಕೊಹ್ಲಿ ರೆಡಿ.!
ಕಳೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕೌಟ್ ಆಗಿ ನಿರ್ಗಮಿಸಿದ್ರು ನಿಜ. ಆದ್ರೆ, ಟೂರ್ನಿಯಲ್ಲಿ ನೀಡಿರೋ ಕನ್ಸಿಸ್ಟೆಂಟ್ ಪ್ರದರ್ಶನವನ್ನ ಮರೆಯೋಕೆ ಮಾಡೋಕಾಗುತ್ತಾ.? form is temporary class is permanent ಅನ್ನೋ ಮಾತನ್ನ ಅಕ್ಷರಶಃ ನಿಜವಾಗಿಸಿದ ಪ್ಲೇಯರ್ ಕಿಂಗ್ ಕೊಹ್ಲಿ. ಹೀಗಾಗಿಯೇ ಇಂದಿನ ಪಂದ್ಯದಲ್ಲೂ ಫ್ಯಾನ್ಸ್ ಕಣ್ಣು, ಕೊಹ್ಲಿಯ ಮೇಲೇ ಇದೆ.
ವಾಂಖೆಡೆ ಅಂಗಳದಲ್ಲಿ ಕೊಹ್ಲಿಯೇ ಕಿಂಗ್..!
ವಾಂಖೆಡೆ ಮೈದಾನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೋಮ್ಗ್ರೌಂಡ್ ಆಗಿದ್ರೂ, ಇಲ್ಲಿ ದರ್ಬಾರ್ ನಡೆಸಿರೋದು ಮಾತ್ರ ಕಿಂಗ್ ಕೊಹ್ಲಿ. ಸಚಿನ್, ಅಜರುದ್ದೀನ್ ಬಿಟ್ರೆ ವಾಂಖೆಡೆ ಅಂಗಳಕ್ಕೆ ಕೊಹ್ಲಿಯೇ ರಾಜ. ಏಕದಿನ ಫಾರ್ಮೆಟ್ಸ್ನಲ್ಲಿ ಕೊಹ್ಲಿ ಮಾಡಿರುವ ಸಾಧನೆ ಈ ಮಾತನ್ನ ಸಾರಿ ಸಾರಿ ಹೇಳ್ತಿದೆ.
ವಾಂಖೆಡೆಯಲ್ಲಿ ಕೊಹ್ಲಿಯೇ ಕಿಂಗ್
ವಾಂಖೆಡೆ ಮೈದಾನದಲ್ಲಿ ಈವರೆಗೆ 6 ಏಕದಿನ ಪಂದ್ಯ ಆಡಿರುವ ಕೊಹ್ಲಿ, 269 ರನ್ ಗಳಿಸಿದ್ದಾರೆ. ಬರೋಬ್ಬರಿ 53.80ರ ಸರಾಸರಿಯಲ್ಲಿ ರನ್ಗಳಿಸಿದ್ದು, 1 ಸೆಂಚುರಿ, 1 ಹಾಫ್ ಸೆಂಚುರಿ ಸಿಡಿಸಿದ್ದಾರೆ.
ಕೊಹ್ಲಿ ಅಂದ್ರೆ ಬೆಚ್ಚಿ ಬೀಳ್ತಾರೆ ಲಂಕನ್ ಲಯನ್ಸ್.!
ವಿರಾಟ್ ಕೊಹ್ಲಿ ಅನ್ನೋ ಹೆಸರು ಕೇಳಿದ್ರೆ ಸಾಕು ಲಂಕಾ ಪಡೆ ಬೆಚ್ಚಿ ಬೀಳುತ್ತೆ. ಕರಿಯರ್ ಆರಂಭದಿಂದ ಹಿಡಿದು ಈವರೆಗೂ ಸಿಂಹಳೀಯರ ಬೇಟೆಯಾಡೋದು ಕಿಂಗ್ ಕೊಹ್ಲಿಗೆ ಫೇವರಿಟ್. ಕ್ರಿಸ್ ಕಚ್ಚಿ ನಿಂತ್ರೆ ಲಂಕಾ ಕಥೆ ಮುಗಿದೇ ಹೋಯ್ತು. ಕೊಹ್ಲಿಯನ್ನ ಕಟ್ಟಿ ಹಾಕೋಕೆ ಸಾಧ್ಯ ಇಲ್ಲ. ಈ ಹಿಂದಿನ ಅಂಕಿ-ಅಂಶಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಆಗಿವೆ.
ಶ್ರೀಲಂಕಾ ವಿರುದ್ಧ ಕೊಹ್ಲಿ ಏಕದಿನ ಸಾಧನೆ
ಶ್ರೀಲಂಕಾ ವಿರುದ್ಧ ಈವರೆಗೆ 52 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ, 2,506 ರನ್ ಗಳಿಸಿದ್ದಾರೆ. 62.65ರ ಸರಾಸರಿಯಲ್ಲಿ ರನ್ ಗಳಿಸಿರೋ ವಿರಾಟ್, 10 ಸೆಂಚುರಿ, 11 ಹಾಫ್ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ.
49ನೇ ಶತಕ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರ.!
ಸದ್ಯ ವಿಶ್ವಕಪ್ ಕ್ರಿಕೆಟ್ ಲೋಕ ಕೊಹ್ಲಿಯ 49ನೇ ಶತಕದ ಕನವರಿಕೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ರೆ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನ ಸರಿಗಟ್ಟಲಿದ್ದಾರೆ. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಲಿದ್ದಾರೆ. ಈ ಅಪರೂಪದ ದಾಖಲೆಯನ್ನ ಕಣ್ತುಂಬಿಕೊಳ್ಳೋ ಕಾತರ ಅಭಿಮಾನಿಗಳದ್ದಾಗಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಹೊರತು ಪಡಿಸಿದ್ರೆ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೊಹ್ಲಿಗೆ ಕ್ರಿಕೆಟ್ ದೇವರ ದಾಖಲೆ ಮುರಿಯೋದು ಅಸಾಧ್ಯದ ವಿಚಾರವೇನಲ್ಲ. ಸಚಿನ್ ಹೋಮ್ ಗ್ರೌಂಡ್ನಲ್ಲಿ ಸಚಿನ್ ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟುತ್ತಾರಾ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ