newsfirstkannada.com

×

ನ್ಯೂಜಿಲೆಂಡ್​​ ವಿರುದ್ಧ ಮಹತ್ವದ ಟೆಸ್ಟ್ ಪಂದ್ಯ​​; ಟೀಮ್​​ ಇಂಡಿಯಾದಿಂದ ರಿಷಬ್​ ಪಂತ್​ ಔಟ್​

Share :

Published October 28, 2024 at 9:13pm

Update October 28, 2024 at 9:14pm

    ನ. 1ರಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 3ನೇ ಟೆಸ್ಟ್​

    ಪಂದ್ಯ ಆರಂಭಕ್ಕೂ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಪಂತ್​​

    3ನೇ ಟೆಸ್ಟ್ ಪಂದ್ಯದಿಂದಲೇ ಸ್ಟಾರ್​ ವಿಕೆಟ್​ ಕೀಪರ್​ ಪಂತ್​ ಔಟ್​​

ಇತ್ತೀಚೆಗೆ ನಡೆದ ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿತು. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ.

ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಫಸ್ಟ್​ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್​​ 259 ರನ್​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 156 ರನ್​ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್​ 255 ರನ್​​ ಕಲೆ ಹಾಕಿ ಆಲೌಟ್​ ಆಗಿತ್ತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್​ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.

ಇನ್ನು, 3ನೇ ಟೆಸ್ಟ್​​ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ನವೆಂಬರ್​​ 1ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 5ರ ವರೆಗೆ ನಡೆಯಲಿದೆ. ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್‌ ಫೈನಲ್ ತಲುಪಲು ಈ ಪಂದ್ಯ ಗೆಲ್ಲಲೇಬೇಕಿದೆ. ಇದಕ್ಕೂ ಮುನ್ನ ಟೀಮ್​​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಕೈ ಕೊಟ್ಟಿದ್ದಾರೆ.

3ನೇ ಟೆಸ್ಟ್​​ನಿಂದ ಪಂತ್​ ಔಟ್​​

ನ್ಯೂಜಿಲೆಂಡ್​​ ವಿರುದ್ಧದ 3ನೇ ಟೆಸ್ಟ್​​ನಿಂದ ಟೀಮ್​​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಬ್​ ಪಂತ್​ ಔಟ್​ ಆಗೋ ಸಾಧ್ಯತೆ ಇದೆ. ಮೊದಲ ಟೆಸ್ಟ್‌ನಲ್ಲಿ ಪಂತ್ ಕೀಪಿಂಗ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದರು. ಮೊಣಕಾಲಿಗೆ ಎಲ್ಲಿ ಸರ್ಜರಿ ಆಗಿತ್ತೋ ಅದೇ ಜಾಗಕ್ಕೆ ಗಾಯ ಆಗಿತ್ತು. ಬಾಲ್​​ ಬಲವಾಗಿ ಬಿದ್ದ ಕಾರಣ ಪಂತ್ ನೋವಿನಿಂದ ಕುಸಿದು ಬಿದ್ದಿದ್ದರು. ಬಳಿಕ ಮೈದಾನದಿಂದ ಹೊರ ನಡೆದಿದ್ದು, ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ರೆಸ್ಟ್​ ಮಾಡಿದ ನಂತರ 2ನೇ ಟೆಸ್ಟ್​ನಲ್ಲಿ ಬ್ಯಾಟಿಂಗ್​ ಮಾಡಿದ್ರು. ಆದರೆ, ರನ್ನಿಂಗ್​ ವೇಳೆ ಮತ್ತೆ ಅದೇ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

ಪಂತ್​ ಬದಲಿಗೆ ಕೆ.ಎಲ್​ ರಾಹುಲ್​ಗೆ ಸ್ಥಾನ

ಮೊದಲ ಟೆಸ್ಟ್ ಪಂದ್ಯ ಸೋಲಿನ ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನು ಬೆಂಚ್​​ ಕಾಯಿಸಲಾಗಿತ್ತು. ಈಗ ಪಂತ್​​ಗೆ ಇಂಜೂರಿ ಆಗಿರೋ ಕಾರಣ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಜಿಲೆಂಡ್​​ ವಿರುದ್ಧ ಮಹತ್ವದ ಟೆಸ್ಟ್ ಪಂದ್ಯ​​; ಟೀಮ್​​ ಇಂಡಿಯಾದಿಂದ ರಿಷಬ್​ ಪಂತ್​ ಔಟ್​

https://newsfirstlive.com/wp-content/uploads/2024/10/Rishabh_Pant-1.jpg

Load More