newsfirstkannada.com

ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾಗೆ ಈ 3 ಅಂಶಗಳು ನೆನಪಿರಬೇಕು..!

Share :

Published June 22, 2024 at 1:47pm

    ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಇಂದು ಬಾಂಗ್ಲಾ ಸವಾಲ್

    ಇಂದು ಗೆದ್ದರೆ ಸೆಮಿಫೈನಲ್ ಹಾದಿ ಬಹುತೇಕ ಖಚಿತ

    ಟೀಂ ಇಂಡಿಯಾಗೆ ತಲೆ ನೋವು ಜಾಸ್ತಿ ಆಗಿದೆ 3 ವಿಚಾರಗಳು

T20 ವಿಶ್ವಕಪ್​​ನಲ್ಲಿ ಭಾರತ ತಂಡವು ಇಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಅಪ್ಘಾನ್ ಸೋಲಿಸಿರುವ ರೋಹಿತ್ ಪಡೆ ಇವತ್ತು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇವತ್ತು ಗೆದ್ದರೆ ಟೀಂ ಇಂಡಿಯಾ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಆದರೆ ಟೀಂ ಇಂಡಿಯಾ ಮುಂದೆ ಮೂರು ಸವಾಲ್​ಗಳಿದ್ದು, ಅದನ್ನು ಎದುರಿಸಬೇಕಾಗಿದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಆರಂಭಿಕರಾಗಿ ಆಡ್ತಿದ್ದಾರೆ. ಇಲ್ಲಿ ಕೊಹ್ಲಿ ಯಶಸ್ವಿ ಆಗಲಿಲ್ಲ. ಇದು ಭಾರತವನ್ನು ಸೆಮಿಫೈನಲ್‌ನಿಂದ ದೂರವಿಡುವ ಮೊದಲ ಅಂಶವಾಗಿದೆ. ಮುಂದಿನ ಪಂದ್ಯಗಳಲ್ಲಿ ಕೊಹ್ಲಿಗೆ ರನ್ ಗಳಿಸಲು ಸಾಧ್ಯವಾಗದಿದ್ದರೆ ವಿಶ್ವಕಪ್ ಕನಸಿನ ಹಾದಿ ಮತ್ತಷ್ಟು ಕಷ್ಟವಾಗಲಿದೆ. ಐರ್ಲೆಂಡ್ ವಿರುದ್ಧ 1, ಪಾಕಿಸ್ತಾನ ವಿರುದ್ಧ 4, ಯುಎಸ್ಎ ವಿರುದ್ಧ ಸೊನ್ನೆ, ಅಫ್ಘಾನಿಸ್ತಾನ ಮೇಲೆ 24 ರನ್ ಗಳಿಸಿದ್ದಾರೆ.

ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ಪೇಚಿಗೆ ಸಿಲುಕಿದ ಕರ್ನಾಟಕ ಪೊಲೀಸರು.. ಅಸಲಿಗೆ ಆಗಿದ್ದು ಏನು..?

ಕೆಟ್ಟ ಆರಂಭ ಟೀಂ ಇಂಡಿಯಾಗೆ ತಲೆನೋವು
ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್​​ಮನ್ ಫೇಲ್ ಆಗ್ತಿರೋದು ಆತಂಕಕಾರಿ ವಿಷಯ. ರೋಹಿತ್ ಬ್ಯಾಟ್ ಕೂಡ ಸೌಂಡ್ ಮಾಡಲಿಲ್ಲ. ಐರ್ಲೆಂಡ್ ವಿರುದ್ಧ ಅಜೇಯ ಅರ್ಧಶತಕ ಗಳಿಸಿದರು. ಇದಾದ ಬಳಿಕ ಪಾಕಿಸ್ತಾನ ವಿರುದ್ಧ 13 ರನ್ ಗಳಿಸಿ ಔಟಾದರು. ಯುಎಸ್ಎ ವಿರುದ್ಧ 3 ರನ್ ಮತ್ತು ಅಫ್ಘಾನಿಸ್ತಾನ ವಿರುದ್ಧ 8 ರನ್ ಗಳಿಸಿ ಪೆವಿಲಿಯನ್​​ಗೆ ಮರಳಿದ್ದರು.

ಇದನ್ನೂ ಓದಿ:ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..

ಜಡೇಜಾ ಕೆಟ್ಟ ಫಾರ್ಮ್‌
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಜಡೇಜಾ ಕೆಟ್ಟ ಫಾರ್ಮ್​​ನಲ್ಲಿದ್ದಾರೆ. ಪ್ಲೇಯಿಂಗ್ 11ನಲ್ಲಿ ಸ್ಥಾನ ಗಿಟ್ಟಿಸಿಕೊಳ್ತಿರುವ ಜಡ್ಡು, ವಿಶೇಷ ಸಾಧನೆ ಮಾಡಿಲ್ಲ. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡರಲ್ಲೂ ಸೋತಿದ್ದಾರೆ. ಪಾಕಿಸ್ತಾನ ವಿರುದ್ಧ ಶೂನ್ಯಕ್ಕೆ ಔಟಾದ್ರೆ ಅಫ್ಘಾನಿಸ್ತಾನ ಮೇಲೆ 7 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾಗೆ ಈ 3 ಅಂಶಗಳು ನೆನಪಿರಬೇಕು..!

https://newsfirstlive.com/wp-content/uploads/2024/06/DUBE-SURYA.jpg

Load More