ಬಲಿಷ್ಠ ಭಾರತ.. ಏಕದಿನ ವಿಶ್ವಕಪ್ ಗೆಲ್ಲೋದು ಫಿಕ್ಸ್
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್
ಪಾಸಿಟಿವ್ ಟೀಮ್ ಇಂಡಿಯಾಗೆ ಕಾಡುತ್ತಾ ಆ ಸಮಸ್ಯೆ?
ವಿಶ್ವಕಪ್ನ ಸೋಲಿಲ್ಲದ ಸರದಾರ ಟೀಮ್ ಇಂಡಿಯಾ. ಸದ್ಯ ಅಜೇಯವಾಗಿ ಫೈನಲ್ಗೆ ಎಂಟ್ರಿ ನೀಡಿರುವ ರೋಹಿತ್ ಪಡೆ, ಇವತ್ತಿನ ಒಂದೇ ಒಂದು ಮ್ಯಾಚ್ ಗೆದ್ದರೆ ಸಾಕು. 12 ವರ್ಷಗಳ ಕನಸಿನ ಜೊತೆಗೆ ಕೋಟ್ಯಾಂತರ ಅಭಿಮಾನಿಗಳ ಮಹಾದಾಸೆಯೂ ಈಡೇರುತ್ತೆ. ಇಂಥ ಅನ್ಬೀಟಬಲ್ ಇಂಡಿಯಾದಲ್ಲಿ ಒಂದಿಷ್ಟು ಸಮಸ್ಯೆ ಇದೆ. ಅದೇ ಈಗ ಥ್ರೆಟ್ ಆಗುತ್ತಾ ಎಂಬ ಅನುಮಾನ ಹುಟ್ಟಿಹಾಕಿದೆ.
ಜೈಹೋ ಇಂಡಿಯಾ.. ಪ್ರತಿಯೊಬ್ಬ ಭಾರತೀಯನ ಮನದ ಮಾತು. ಟೀಮ್ ಇಂಡಿಯಾ ಅಜೇಯ ಓಟ ಮುಂದುವರಿಸಲಿ, 3 ಬಾರಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಡಲಿ ಅನ್ನೋದೇ ಪ್ರತಿಯೊಬ್ಬರ ಆಶಯ. ಅಭಿಮಾನಿಗಳ ಆಶಯದಂತೆಯೇ ಟೀಮ್ ಇಂಡಿಯಾ ಪ್ರದರ್ಶನವೂ ಇದೆ. ಟೀಮ್ ಇಂಡಿಯಾದ ವಿಶ್ವಕಪ್ ಜರ್ನಿಯಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನ ಮೆಲುಕು ಹಾಕಿದ್ರೆ ಸಾಕು, ಭಾರತ ಗೆಲ್ಲೋದು ಫಿಕ್ಸ್ ಅನ್ನೋದನ್ನ ಯಾರು ಬೇಕಾದ್ರು. ಹೇಳ್ತಾರೆ. ಇದಕ್ಕೆಲ್ಲ ರೀಸನ್.. ಟೀಮ್ ಇಂಡಿಯಾದ ಬಲ.
ಮೆಗಾ ಟೂರ್ನಿಯಲ್ಲಿ ಇದುವರೆಗೆ ಟೀಮ್ ಇಂಡಿಯಾ ನೀಡಿದ ಪ್ರದರ್ಶನವೇ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ಸ್ ಆಗಿಸಿದೆ. ಕ್ರಿಕೆಟ್ ದಿಗ್ಗಜರು, ಕ್ರಿಕೆಟ್ ವಿಶ್ಲೇಷಕರು, ಮಾಜಿ ಆಟಗಾರರು ಕೂಡ ಟೀಮ್ ಇಂಡಿಯಾನೇ ಗೆಲ್ಲೋ ಟೀಮ್ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಇಂಥ ಫೇವರಿಟ್ಸ್ಗೆ ಸ್ಟ್ರೆಂಥ್ ಜೊತೆಗೆ ಕೆಲ ಸಮಸ್ಯೆಗಳೂ ಇನ್ನಿಲ್ಲದೆ ಕಾಡ್ತಿದೆ. ಟೀಮ್ ಇಂಡಿಯಾದ ಸ್ಟ್ರೆಂಥ್ ಏನು?
ಸೆನ್ಸೇಷನ್ ರೋಹಿತ್ರ ಸೆಲ್ಪ್ಲೆಸ್ ಬ್ಯಾಟಿಂಗ್..!
ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸಕ್ಸಸ್ ಸಿಕ್ರೇಟ್ ರೋಹಿತ್ರ ಬ್ಯಾಟಿಂಗ್ ಅಪ್ರೋಚ್. ವೈಯಕ್ತಿಕ ದಾಖಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಹಿಟ್ಮ್ಯಾನ್, ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಾಲಿಡ್ ಓಪನಿಂಗ್ ನೀಡ್ತಿದ್ಧಾರೆ. ಇದು ಎದುರಾಳಿ ಸ್ಟ್ರಾಟರ್ಜಿಯನ್ನ ಬುಡಮೇಲು ಮಾಡ್ತಿದೆ. ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡ್ತಿರುವ ರೋಹಿತ್, ನಂತರದ ಬ್ಯಾಟ್ಸ್ಮನ್ಗಳು ಬಿಗ್ ಟಾರ್ಗೆಟ್ ಸೆಟ್ ಮಾಡೋಕೆ ಹೆಲ್ಪ್ ಮಾಡ್ತಿದ್ದಾರೆ.
ಕಿಂಗ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್ ರನ್..!
ರೆಟ್ ಹಾಟ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ರೆಕಾರ್ಡ್ ಬ್ರೇಕಿಂಗ್ ರನ್ ಗಳಿಸಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್, ಪರಿಸ್ಥಿತಿಗೆ ತಕ್ಕ ಆಟವಾಡ್ತಿದ್ದಾರೆ. ಅಷ್ಟೇ ಅಲ್ಲ.! ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ರಕ್ಷಕನಾಗಿ ನಿಲ್ಲುತ್ತಿರುವ ವಿರಾಟ್, ಟೀಮ್ ಇಂಡಿಯಾ ಪಾಲಿಗೆ ಆಧಾರವಾಗ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಆಸ್ಟ್ರೇಲಿಯಾ ಎದುರು ರಾಹುಲ್ ಜೊತೆ ಕಟ್ಟಿದ 200 ರನ್ಗಳ ಜೊತೆಯಾಟ ಅನ್ನೊದನ್ನ ಬಿಡಿಸಿ ಹೇಳಬೇಕಿಲ್ಲ.
ರೋಲ್ ಬಗ್ಗೆ ಪಕ್ಕ ಕ್ಲಾರಿಟಿ.. ಅಗ್ರೇಸ್ಸಿವ್ ಇಂಟೆಂಟ್
ಟೀಮ್ ಇಂಡಿಯಾ ಗೆಲುವಿಗೆ ಕಾರಣವೇ ಆಟಗಾರರ ರೋಲ್. ತಮ್ಮ ತಮ್ಮ ರೋಲ್ ಬಗ್ಗೆ ಪಕ್ಕ ಕ್ಲಾರಿಟಿ ಹೊಂದಿರುವ ಆಟಗಾರರು, ಪರಿಸ್ಥಿತಿಗೆ ತಕ್ಕಂತೆ ಆಡ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಕೊಹ್ಲಿ ಇನ್ನಿಂಗ್ಸ್ ಬಿಲ್ಡ್ ಮಾಡ್ತಿದ್ರೆ. ಅತ್ತ ಮಿಡಲ್ ಮಿಡಲ್ ಆರ್ಡರ್ನಲ್ಲಿ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಈ ಬಳಿಕ ಬಂದ ರಾಹುಲ್, ಕೊನೆಯಲ್ಲಿ ಫಿನಿಷಿಂಗ್ ಟಚ್ ನೀಡಿದರು. ಇದೆಲ್ಲವೂ ಆಟಗಾರರ ರೋಲ್ ಹಾಗೂ ಅಗ್ರೇಸ್ಸಿವ್ ಅಪ್ರೋಷ್ ಸಾಕ್ಷಿ ಅನ್ನೋದು ಬಿಡಿಸಿ ಹೇಳಬೇಕಿಲ್ಲ.
ಪವರ್ಫುಲ್ ಬೌಲಿಂಗ್.. ಶಮಿ ತೂಫಾನ್..
ಪ್ರಸಕ್ತ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ನಿಜಕ್ಕೂ ನೆಕ್ಸ್ಟ್ ಲೆವೆಲ್. ಇತರೆ 9 ತಂಡಗಳ ಬೌಲಿಂಗ್ನದ್ದೇ ಒಂದು ಲೆಕ್ಕವಾದ್ರೆ. ಭಾರತೀಯ ಬೌಲರ್ಗಳದ್ದೇ ಒಂದು ಲೆಕ್ಕ. ಅದು ಯಾವ ಮಟ್ಟಕ್ಕಂದ್ರೆ 10 ಪಂದ್ಯಗಳ ಪೈಕಿ ಟೀಮ್ ಇಂಡಿಯಾ ಬೌಲರ್ಗಳು, ಸೆಮಿಫೈನಲ್ ಹೊರತು ಪಡೆಸಿದ್ರೆ, ಉಳಿದ್ಯಾವ ಎದುರಾಳಿ 300 ರನ್ ಕ್ರಾಸ್ ಮಾಡಲು ಬಿಟ್ಟಿಲ್ಲ. 2 ತಂಡಗಳನ್ನ ನೂರರೊಳಗೆ ಆಲೌಟ್ ಮಾಡಿದೆ. ಇದು ಇಂಡಿಯನ್ ಬೌಲರ್ಗಳ ಪರಾಕ್ರಮಕ್ಕೆ ಹಿಡಿದ ಕೈಗನ್ನಡಿ. ಈ ಪೈಕಿ ಶಮಿಗೆ ಸೆನ್ಸೇಷನ್ ಸ್ಪೆಲ್ ಬಗ್ಗೆ ಮರೆಯುವಂತೇ ಇಲ್ಲ.
ಆಡಿದ 6 ಪಂದ್ಯಗಳಿಂದ 23 ವಿಕೆಟ್ ಬೇಟೆಯಾಡಿರುವ ಮೊಹಮ್ಮದ್ ಶಮಿ, 3 ಬಾರಿ 5 ವಿಕೆಟ್ ಉರುಳಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಸೆಮಿಸ್ನ ಹೈವೋಲ್ಟೇಜ್ ಮ್ಯಾಚ್ನಲ್ಲಿ ಬರೋಬ್ಬರಿ 7 ವಿಕೆಟ್ ಉರುಳಿಸಿದ್ದಾರೆ. ಇದು ನಿಜಕ್ಕೂ ಅದ್ಭುತ. ಇವರ ಜೊತೆಗೆ ಮಿಡಲ್ ಓವರ್ಗಳಲ್ಲಿ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾರ ಬ್ರೇಕ್ ಥ್ರೂ ನಿಜಕ್ಕೂ ಮರೆಯುವಂತಿಲ್ಲ. ಇಷ್ಟೇ ಅಲ್ಲ.. ಬಲ ಹೊಂದಿರುವ ಟೀಮ್ ಇಂಡಿಯಾಗೆ ವಿಕ್ನೇಸ್ ಕೂಡ ಕಾಡ್ತಿದೆ.
ಬಲಿಷ್ಠ ಭಾರತಕ್ಕೆ ಕಾಡ್ತಿದೆ ಆ ಮೂರು ಸಮಸ್ಯೆಗಳು..!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಎಷ್ಟೇ ಅದ್ಭುತ ಪ್ರದರ್ಶನ ನೀಡಿದ್ರು. ಟೀಮ್ ಇಂಡಿಯಾ ಕೆಲ ವಿಭಾಗಗಳಲ್ಲಿ ಎಡವುತ್ತಿದೆ. ಆ ವಿಭಾಗಗಳು ಇಂದೆನಾದ್ರೂ ಕೈಕೊಟ್ರೆ, ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾಗೆ ಸಂಕಷ್ಟ ತಪ್ಪಿದ್ದಲ್ಲ.
ವಿಕ್ನೇಸ್ ನಂ.1: ಮೊಹಮ್ಮದ್ ಸಿರಾಜ್ ಇನ್ಕನ್ಸಿಸ್ಟೆಂನ್ಸಿ ಪರ್ಫಾಮೆನ್ಸ್
ಒಂದ್ಕಡೆ ಸಾಲಿಡ್ ಪರ್ಫಾಮೆನ್ಸ್ ನೀಡ್ತುರುವ ಟೀಮ್ ಇಂಡಿಯಾಗೆ ತಲೆನೋವೇ ಮೊಹಮ್ಮದ್ ಸಿರಾಜ್.. ಲಂಕಾ ಎದುರಿನ ಮ್ಯಾಚ್ಗೆ ಮಾತ್ರವೇ ಸಿಮೀತವಾಯ್ತು. ಸೆಮಿಸ್ನಲ್ಲಿ ದುಬಾರಿ ಆಗಿದ್ದ ಸಿರಾಜ್, ಇವತ್ತು ಕಮ್ಬ್ಯಾಕ್ ಮಾಡಬೇಕು.
ವಿಕ್ನೇಸ್ ನಂ.2: ಒತ್ತಡದ ಪರಿಸ್ಥಿತಿ ನಿಭಾಯಿಸಿಲ್ಲ ಲೋವರ್ ಆರ್ಡರ್
ಟೀಮ್ ಇಂಡಿಯಾ ಬ್ಯಾಟಿಂಗ್ ಅದ್ಭುತವಾಗಿದೆ ನಿಜ. ಇದೇ ಲೋವರ್ ಆರ್ಡರ್ ಬ್ಯಾಟಿಂಗ್, ಇದುವರೆಗೆ ಒತ್ತಡದ ಪರಿಸ್ಥಿತಿಗಳನ್ನ ಎದುರಿಸಿಲ್ಲ. 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಿರುವ ಸೂರ್ಯ 6 ಪಂದ್ಯಗಳಿಂದ 77 ಎಸೆತಗಳನ್ನ ಎದುರಿಸಿದ್ರೆ. ಜಡೇಜಾ 96 ಎಸೆತಗಳನ್ನಷ್ಟೇ ಎದುರಿಸಿದ್ದಾರೆ. ಹೀಗಾಗಿ ಇಂದಿನ ಹೈಫ್ರೆಷರ್ ಗೇಮ್ನಲ್ಲಿ ಎಲ್ಲಕ್ಕೂ ಇವರು ರೆಡಿ ಇರಬೇಕು.
ವಿಕ್ನೇಸ್ ನಂ.3: ಟೀಮ್ ಇಂಡಿಯಾದ ಬ್ಯಾಟಿಂಗ್ ಡೆಪ್ತ್ ಇಲ್ಲ..!
ಟೀಮ್ ಇಂಡಿಯಾಗೆ ಬಹುಕಾಲದಿಂದ ಕಾಡ್ತಿರೋ ಸಮಸ್ಯೆಯೇ ಇದು. ಜಡೇಜಾ ಬಳಿಕ ಯಾವೊಬ್ಬ ಬಾಲಂಗೋಚಿ ಕೂಡ ಇನ್ನಿಂಗ್ ಬಿಲ್ಡ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ಆದ್ರೆ, ಇದೇ ಆಸ್ಟ್ರೇಲಿಯನ್ ತಂಡಕ್ಕೆ ಹೋಲಿಸಿದ್ರೆ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಮಾಡಬಲ್ಲ ತಾಕತ್ತು ಹೊಂದಿದ್ದಾರೆ. ಈ ವಿಚಾರದಲ್ಲಿ ಟೀಮ್ ಇಂಡಿಯಾ ಪರಿಸ್ಥಿತಿ ವಿಭಿನ್ನ. ಹೀಗಾಗಿ ಇಂದಿನ ಫೈನಲ್ ಕದನ ಟೀಮ್ ಇಂಡಿಯಾ ಗೆಲ್ಲಬೇಕಾದ್ರೆ. ಈ ಪ್ರಾಬ್ಲಂಸ್ಗೆ ಒಳಗಾಗದಂತೆ ನೋಡಿಕೊಳ್ಳಬೇಕಿದೆ. ಅದೇನೇ ಆಗಲಿ.! ಇಂದಿನ ಫೈನಲ್ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಲಿ, ವಿಶ್ವ ಕಿರೀಟಕ್ಕೆ ಮುತ್ತಿಡಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್