ಕ್ಯಾಪ್ಟನ್ ರೋಹಿತ್ ಶರ್ಮಾಗೆ ಶುರುವಾಯ್ತು ಭೀತಿ
ರಾಹುಲ್ ಫಿಟ್ ಆಗಲಿಲ್ಲ ಅಂದ್ರೆ ಯಾರು ಗತಿ?
ಶ್ರೇಯಸ್ ಅಯ್ಯರ್ ಆಡೋದು ಅನುಮಾನ
ಆಟಗಾರರು ಬರ್ತಿದ್ದಾರೆ.. ಹೋಗ್ತಿದ್ದಾರೆ.. ಕೋಚ್ ಕೂಡ ಬದಲಾಗಿದ್ದು ಆಯ್ತು.. ಆದ್ರೆ, ಟೀಮ್ ಇಂಡಿಯಾದ ಈ ಸಮಸ್ಯೆಗೆ ಮಾತ್ರ ಪರಿಹಾರ ಸಿಗ್ತಿಲ್ಲ. ಇದೀಗ ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿರೋ ಈ ಟೈಮ್ನಲ್ಲಿ ಮತ್ತೆ ಇದೇ ಸಮಸ್ಯೆ ಟೀಮ್ ಮ್ಯಾನೇಜ್ಮೆಂಟ್ಗೆ ತಲೆ ನೋವಾಗಿದೆ. ಅಷ್ಟಕ್ಕೂ ಆ ಸಮಸ್ಯೆ ಏನು?
ವಿಶ್ವಕಪ್ ಮೆಗಾ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ. 12 ವರ್ಷಗಳ ಬಳಿಕ ತವರಿನಲ್ಲಿ ನಡೀತಿರೋ ಪ್ರತಿಷ್ಟೆಯ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ಅಭಿಮಾನಿಗಳ ಮಹದಾಸೆಯಾಗಿದೆ. ಟೀಮ್ ಇಂಡಿಯಾ ಆಟಗಾರರು ಹಾಗೂ ಮ್ಯಾನೇಜ್ಮೆಂಟ್ನ ಉದ್ದೇಶ ಕೂಡ ಇದೆ. ಟೀಮ್ ಇಂಡಿಯಾದ ಗುರಿ ಏನೋ ಸ್ಪಷ್ಟವಾಗಿದೆ. ಆದ್ರೆ ಏನ್ ಮಾಡೋದು ಗ್ರಹಚಾರನೇ ಕೆಟ್ಟಂತಾಗಿದೆ.
ವಿಶ್ವಕಪ್ಗೂ ಮುನ್ನ ಕಾಡ್ತಿದೆ ನಂ.4ರ ಕಂಟಕ.!
ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಫಿಟ್ನೆಸ್ ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ. ಶ್ರೇಯಸ್ ಟೂರ್ನಿಗೆ ಬಹುತೇಕ ಡೌಟ್ ಎನ್ನಲಾಗ್ತಿದ್ದು, ರಾಹುಲ್ ಲಭ್ಯತೆ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಒಂದು ವೇಳೆ ಫುಲ್ ಫಿಟ್ ಆಗಿ ಆಯ್ಕೆಗೆ ಲಭ್ಯರಾದ್ರೂ, ಮತ್ತೆ ಇಂಜುರಿಗೆ ಒಳಗಾಗೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಟೀಮ್ ಇಂಡಿಯಾಗೆ ಮತ್ತೆ 4ನೇ ಕ್ರಮಾಂಕದ ತಲೆನೋವು ಶುರುವಾಗಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕಾಡ್ತಿದೆ ಭೀತಿ
ಈ ಬಾರಿ ವಿಶ್ವಕಪ್ ಗೆದ್ದೆ ಗೆಲ್ತೀವಿ ಅಂತಿದ್ದ ರೋಹಿತ್ ಆತ್ಮವಿಶ್ವಾಸ ಇತ್ತೀಚೆಗೆ ಯಾಕೂ ಕುಂದಿದಂತೆ ಕಾಣ್ತಿದೆ. ರೋಹಿತ್ ಮೊನ್ನೆ ನೀಡಿದ ಫಿಂಗರ್ ಕ್ರಾಸ್ಡ್ ಅನ್ನೋ ಸ್ಟೇಟ್ಮೆಂಟ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇದೀಗ ಮತ್ತೆ ಮಾತನಾಡಿರೋ ರೋಹಿತ್, 4ನೇ ಕ್ರಮಾಂಕದ ಸೆಲೆಕ್ಷನ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯುವರಾಜ್ ಸಿಂಗ್ ಬಳಿಕ ನಮಗೆ 4ನೇ ಕ್ರಮಾಂಕಕ್ಕೆ ಬೆಸ್ಟ್ ಬ್ಯಾಟ್ಸ್ಮನ್ ಸಿಗಲೇ ಇಲ್ಲ ಎಂದಿರೋ ಹಿಟ್ಮ್ಯಾನ್, ತಮಗಿರೋ ಭೀತಿಯನ್ನ ಹೊರ ಹಾಕಿದ್ದಾರೆ. ರೋಹಿತ್ ಶರ್ಮಾ ಭೀತಿಗೆ ಕಾರಣವಿದೆ. ಯುವರಾಜ್ ಸಿಂಗ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬಳಿಕ 4ನೇ ಕ್ರಮಾಂಕಕ್ಕೆ ಅತಿ ಹೆಚ್ಚು ಪ್ರಯೋಗಗಳು ನಡೆದ್ವು. ಅದ್ರಲ್ಲಿ ಸಕ್ಸಸ್ಗಿಂತ, ಫೇಲ್ಯೂರ್ನ ರಿಸಲ್ಟ್ ಸಿಕ್ಕಿದ್ದೇ ಹೆಚ್ಚು. ಈಗ ಇರೋದ್ರಲ್ಲಿ ಒಕೆ ಅಂದವರೂ ಕೂಡ ವಿಶ್ವಕಪ್ ಆಡೋದು ಅನುಮಾನವಾಗಿದೆ.
2019ರ ವಿಶ್ವಕಪ್ ಬಳಿಕ 4ನೇ ಕ್ರಮಾಂಕ
2019ರ ವಿಶ್ವಕಪ್ ಬಳಿಕ ಏಕದಿನ ಮಾದರಿಯಲ್ಲಿ 4 ಕ್ರಮಾಂಕದಲ್ಲಿ 4 ಇನ್ನಿಂಗ್ಸ್ಗಳನ್ನಾಡಿರುವ ರಾಹುಲ್ ಬರೋಬ್ಬರಿ 63ರ ಸರಾಸರಿಯಲ್ಲಿ 189 ರನ್ಗಳಿಸಿದ್ದಾರೆ. ಶ್ರೇಯಸ್ ಆಡಿದ 20 ಇನ್ನಿಂಗ್ಸ್ಗಳಲ್ಲಿ 47.85ರ ಸರಾಸರಿಯಲ್ಲಿ 805 ರನ್ಗಳಿಸಿದ್ದಾರೆ. ವಿಶ್ವಕಪ್ಗೆ ಇವರಿಬ್ಬರ ಲಭ್ಯತೆ ಬಗ್ಗೆ ಸ್ಪಷ್ಟತೆಯಿಲ್ಲ. 11 ಇನ್ನಿಂಗ್ಸ್ಗಳಲ್ಲಿ 36ರ ಸರಾಸರಿಯಲ್ಲಿ 360 ರನ್ಗಳಿಸಿ ಓಕೆ ಓಕೆ ಅನಿಸಿದ್ದ ರಿಷಭ್ ಪಂತ್ ಕೂಡ ವಿಶ್ವಕಪ್ ಆಡಲ್ಲ.. ಇದೇ ನೋಡಿ ರೋಹಿತ್ ಟೆನ್ಶನ್ ಹೆಚ್ಚಿಸಿರೋದು..
ಸಂಜು vs ಇಶಾನ್, ಯಾರು ಬೆಸ್ಟ್.?
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈಗಾಗಲೇ ಸಂಭಾವ್ಯ ತಂಡವನ್ನು ಫೈನಲ್ ಮಾಡಿದೆ. ಅದರ ಪ್ರಕಾರ ಬ್ಯಾಕ್ ಅಪ್ ಆಟಗಾರರನ್ನಾಗಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ಗೆ ಮಣೆ ಹಾಕೋ ಲೆಕ್ಕಾಚಾರವಿದೆ. ಒಂದು ವೇಳೆ ರಾಹುಲ್ ಫಿಟ್ ಆಗ್ಲಿಲ್ಲ ಅಂದ್ರೆ ಮೇನ್ ಸ್ಕ್ಯಾಡ್ಗೆ ಎಂಟ್ರಿ ಕೊಡೋಕೆ ಇವರಿಬ್ಬರ ನಡುವೆ ಪೈಪೋಟಿಯಿದೆ.
ಇಶಾನ್ ಕಿಶನ್ಗೆ ಖುಲಾಯಿಸುತ್ತಾ ಅದೃಷ್ಟ.?
ಕಳಪೆ ಫಾರ್ಮ್ನಲ್ಲಿರೋ ಸಂಜು ಸ್ಯಾಮ್ಸನ್ಗಿಂತ, ಸ್ಫೋಟಕ ಆಟವಾಡ್ತಿರೋ ಇಶಾನ್ ಕಿಶನ್ ಆಯ್ಕೆ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. 4ನೇ ಕ್ರಮಾಂಕದಲ್ಲಿ ಆಡಿದ ಅನುಭವ ಇಶಾನ್ ಕಿಶನ್ಗಿದೆ. ಜೊತೆಗೆ ಕಿಶನ್ 4TH SLOTನಲ್ಲಿ ಕಣಕ್ಕಿಳಿದ್ರೆ, ಪ್ಲೇಯಿಂಗ್ ಇಲೆವೆನ್ಗೆ ಪರ್ಫೆಕ್ಟ್ ಬ್ಯಾಲೆನ್ಸ್ ಕೂಡ ಸಿಗಲಿದೆ. ಹೀಗಾಗಿ ಕಿಶನ್ಗೆ ಅದೃಷ್ಟ ಖುಲಾಯಿಸೋ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್