ಟೀಮ್ ಇಂಡಿಯಾಗೆ ರಿಂಕು ಮ್ಯಾಚ್ ಫಿನಿಷರ್ ಆಗುವುದು ಪಕ್ಕಾ
ಜಿತೇಶ್ ಶರ್ಮಾಗೆ ಸ್ಫೋಟಕ ಬ್ಯಾಟಿಂಗ್ ಮಾಡುವ ತಾಕತ್ ಇದೆ
ಟೀಮ್ಗೆ ತಿಲಕ್ ಆಯ್ಕೆ ಆಗೋದೆ ಕುತೂಹಲ, ಪ್ರಭ್ ಸಿಮ್ರನ್ ಕಥೆ?
ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಈಗಾಗಲೇ ಟೆಸ್ಟ್ ಹಾಗೂ ಏಕದಿನ ತಂಡವನ್ನ ಪ್ರಕಟಿಸಿರೋ ಬಿಸಿಸಿಐ, ಇನ್ನಷ್ಟೇ ಟಿ20 ತಂಡ ಪ್ರಕಟಿಸಲಿದೆ. ಏಕದಿನ, ಟೆಸ್ಟ್ನಂತೆ ಟಿ20ಯಲ್ಲಿ ಬದಲಾವಣೆಗೆ ನಾಂದಿ ಹಾಡೋ ಲೆಕ್ಕಚಾರದಲ್ಲಿರೋ ಸೆಲೆಕ್ಷನ್ ಕಮಿಟಿ, ಕೆಲ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದೆ. ಹಾಗಾದ್ರೆ, ಚೊಚ್ಚಲ ಕರೆಯ ನಿರೀಕ್ಷೆಯಲ್ಲಿರೋ ಆ ಎಮರ್ಜಿಂಗ್ ಪ್ಲೇಯರ್ಸ್ ಯಾರು..?
ವೆಸ್ಟ್ ಇಂಡೀಸ್ ಟೂರ್ನ್ಗೆ ಟೆಸ್ಟ್ ಹಾಗೂ ಏಕದಿನ ತಂಡವನ್ನ ಪ್ರಕಟಿಸಿದ್ದಾಯ್ತು. ಇದೀಗ 5 ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸುವ ಸರದಿ. ಈ ಟಿ20 ಸರಣಿಗೆ ಯಂಗ್ ಇಂಡಿಯಾ ಕಳುಹಿಸೋ ಲೆಕ್ಕಚಾರದಲ್ಲಿರೋ ಬಿಸಿಸಿಐ, ಸೀನಿಯರ್ಗಳಿಗೆ ರೆಸ್ಟ್ ನೀಡಿ ಹೊಸ ಮುಖಗಳಿಗೆ ಮಣೆಹಾಕಲು ಮುಂದಾಗಿದೆ. ಆಯ್ಕೆಯಾಗೋ ರೇಸ್ನಲ್ಲಿ ಆಟಗಾರರ ದಂಡೇ ಇದ್ದು, ಹೀಗಾಗಿಯೇ ತಂಡವನ್ನ ಪ್ರಕಟಿಸಲು ಸೆಲೆಕ್ಷನ್ ಕಮಿಟಿ ಹೆಚ್ಚು ಸಮಯ ತೆಗೆದುಕೊಂಡಿದೆ.
ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ರಿಂಕು ಸಿಂಗ್..!
ಟಿ20 ಸರಣಿಗೆ ಆಯ್ಕೆಯಾಗೋ ಆಟಗಾರರ ರೇಸ್ನಲ್ಲಿರೋ ಫ್ರಂಟ್ ಲೈನ್ ರನ್ನರ್ ರಿಂಕು ಸಿಂಗ್..! ಐಪಿಎಲ್ನಲ್ಲಿ ಕೊಲ್ಕತ್ತಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಈ ಯಂಗ್ ಡೈನಾಮಿಕ್, ಇಂಡೀಸ್ ಟೂರ್ಗೆ ಆಯ್ಕೆಯಾಗೋದು ಬಹುತೇಕ ಕನ್ಫರ್ಮ್. ಯಾಕಂದ್ರೆ, ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಕಲೆ ಮೈಗೂಡಿಸಿಕೊಂಡಿರೋ ರಿಂಕು, ಮ್ಯಾಚ್ ಫಿನಿಷರ್ ಕೂಡ ಹೌದು. ಸದ್ಯ ಮ್ಯಾಚ್ ಫಿನಿಷರ್ ಇಲ್ಲದೆ ಸೊರಗ್ತಿರೋ ಟೀಮ್ ಇಂಡಿಯಾಗೆ ಈತನ ಎಂಟ್ರಿ ಬಲ ನೀಡಲಿದೆ.
ಜಿತೇಶ್ ಶರ್ಮಾಗೆ ಸಿಗಲಿದೆಯಾ ಟಿಕೆಟ್..?
ಲಂಕಾ ಸರಣಿ ವೇಳೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ತಂಡ ಸೇರಿದ್ದ ಜಿತೇಶ್ ಶರ್ಮಾಗೆ, ಇಂಡೀಸ್ ಟೂರ್ನ್ನಲ್ಲಿ ಮತ್ತೆ ಸೆಲೆಕ್ಷನ್ ಕಮಿಟಿ ಮಣೆ ಹಾಕುವ ಸಾಧ್ಯತೆಯಿದೆ. 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಜಿತೇಶ್ಗೆ, ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ತಾಕತ್ತಿದೆ. ಸದ್ಯ ದೀಪಕ್ ಹೂಡಾ ಫ್ಲಾಪ್ ಶೋ ನೀಡ್ತಿದ್ದು, ಇದ್ರಿಂದ ಜಿತೇಶ್ಗೆ ಅದೃಷ್ಟದ ಬಾಗಿಲು ಓಪನ್ ಆಗೋ ಸಾಧ್ಯತೆಯಿದೆ.
ತಿಲಕ್ ವರ್ಮಾಗೆ ತೆರೆಯುತ್ತಾ ಅದೃಷ್ಟದ ಬಾಗಿಲು..?
ತಿಲಕ್ ವರ್ಮಾ ಐಪಿಎಲ್ನ ಸೆನ್ಸೇಷನಲ್ ಸ್ಟಾರ್. ಮುಂಬೈ ಇಂಡಿಯನ್ಸ್ ಪರ ಹಲ್ಚಲ್ ಎಬ್ಬಿಸಿದ್ದ ತಿಲಕ್, ನಿರ್ಭೀತ ಬ್ಯಾಟಿಂಗ್ ಮಾಡೋದ್ರಲ್ಲಿ ನಿಸ್ಸೀಮ. ಬಿಗ್ ಶಾಟ್ಸ್ ಪ್ಲೇ ಮಾಡೋ ಯಂಗ್ಗನ್ಗೆ ಮ್ಯಾಚ್ ಫಿನಿಶ್ ಮಾಡಬಲ್ಲ ತಾಕತ್ತಿದೆ. ಹೀಗಾಗಿ ಈತನಿಗೆ ಇಂಡಿಯಾಗೆ ಆಯ್ಕೆಯಾಗೋ ರೇಸ್ನಲ್ಲಿದ್ದಾರೆ. ಆದ್ರೆ, 3 ಹಾಗೂ 4ನೇ ಕ್ರಮಾಂಕದಲ್ಲಿ ಆಡೋಕೆ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಇರೋದ್ರಿಂದ ಸ್ಥಾನ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಕಾಯಬೇಕಾಗುತ್ತಾ ಸಾಯಿ ಸುದರ್ಶನ್-ಪ್ರಭ್ ಸಿಮ್ರನ್..?
ಸಾಯಿ ಸುದರ್ಶನ, ಪ್ರಭ್ ಸಿಮ್ರನ್ ಸಿಂಗ್ ಕೂಡ ಟೀಮ್ಗೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಆಯ್ಕೆಗೆ ಇವರಿಬ್ಬರು, ಮತ್ತಷ್ಟು ದಿನ ಕಾಯಬೇಕಾದ ಅನಿವಾರ್ಯತೆ ಇದೆ. ಸಾಯಿ ಸುದರ್ಶನ್, ದೇಶಿ ಕ್ರಿಕೆಟ್, ಐಪಿಎಲ್, ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಿದ್ದಾರೆ. ಡೊಮೆಸ್ಟಿಕ್ ಸೇರಿದಂತೆ, ಐಪಿಎಲ್ನಲ್ಲಿ ಪ್ರಭ್ ಸಿಮ್ರನ್ ಬ್ಯಾಟಿಂಗ್ ಸೂಪರ್ ಆಗಿದೆ. ಸದ್ಯ ತಂಡದಲ್ಲಿ ಆರಂಭಿಕರ ಸ್ಲಾಟ್ ಖಾಲಿ ಇಲ್ಲ. ಹೀಗಾಗಿ ಆಯ್ಕೆಗೆ ಕಾಯಲೇಬೇಕು.
ಈ ಐವರು ಯುವ ಆಟಗಾರರಲ್ಲಿ ಮೂವರಂತೂ ಆಯ್ಕೆ ರೇಸ್ನಲ್ಲಿರೋ ಟಫ್ ಕಾಂಪಿಟೇಟರ್ಗಳಾಗಿದ್ದಾರೆ. ಯಾರಿಗೆ ಅದೃಷ್ಟದ ಬಾಗಿಲು ತೆರೆಯುತ್ತೆ ಅನ್ನೋದೇ ಸದ್ಯದ ಸಸ್ಪೆನ್ಸ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ