newsfirstkannada.com

ವೆಸ್ಟ್​ ಇಂಡೀಸ್​ ಟೂರ್ನಿಯಲ್ಲಿ ಗೆಲ್ಲೋದು ಕೊಹ್ಲಿನಾ, ಕ್ಯಾಪ್ಟನ್​ ರೋಹಿತ್​ ಶರ್ಮಾನಾ? ಏನಿದು ಹೊಸ ಸವಾಲು?

Share :

28-06-2023

    ಈ ಇಬ್ಬರು ಸ್ಟಾರ್ಸ್​ ಆಡಬೇಕು.. ಇಲ್ಲ ಖಾಲಿ ಮಾಡಬೇಕು ಜಾಗ

    ವೆಸ್ಟ್​ ಇಂಡೀಸ್​ ವಿರುದ್ಧ ಮ್ಯಾಚ್​ ಇವರಿಗೆ ಡು ಆರ್​ ಡೈ ಮ್ಯಾಚ್​.!

    ರೋಹಿತ್​ ಶರ್ಮಾ, ಕೊಹ್ಲಿಗೆ ಈ ಸರಣಿ ಹೇಗೆ ಮುಖ್ಯ ಆಗುತ್ತೆ ಗೊತ್ತಾ?

ಓರ್ವ ವಿಶ್ವ ಕ್ರಿಕೆಟ್​ನ ಕಿಂಗ್, ಮತ್ತೊರ್ವ ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್. ಒಟ್ಟಾಗಿ ಹೇಳಬೇಕಾದ್ರೆ, ಇವರಿಬ್ಬರೇ ಟೀಮ್ ಇಂಡಿಯಾದ ಜೋಡೆತ್ತು. ಆದ್ರೀಗ ಇವರಲ್ಲಿ ಟೀಮ್ ಅಲ್ಲಿ ಇರೋರು ಯಾರು? ಹೊರಗೆ ಹೋಗೋದ್ಯಾರು? ಎಂಬ ಚರ್ಚೆ ನಡೆಯುತ್ತಿದೆ.

1 ಸರಣಿ.. ಇಬ್ಬರು ಸೂಪರ್ ಸ್ಟಾರ್ಸ್​ಗೆ ಅಗ್ನಿಪರೀಕ್ಷೆ

ಜಸ್ಟ್​ 14 ದಿನ ವೆಸ್ಟ್ ಇಂಡೀಸ್ ಟೆಸ್ಟ್​ ಸರಣಿ ಆರಂಭಕ್ಕೆ. ಈ ಒಂದು ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಎರಡೇ 2 ಟೆಸ್ಟ್​ ಸರಣಿಗಳನ್ನೇ ಆಡಿದ್ರೂ, ಇಬ್ಬರು ಸೂಪರ್ ಸ್ಟಾರ್​ಗಳ ಪಾಲಿಗೆ ಡು ಆರ್​ ಡೈ ಸಿರೀಸ್. ಅಂದ್ಹಾಗೆ ಅದು ಬೇಱರಿಗೂ ಅಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಆ್ಯಂಡ್ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿಗೆ.

ಇನ್ನೆರೆಡು ದಿನಗಳಲ್ಲಿ ವೆಸ್ಟ್​ ಇಂಡೀಸ್ ಪ್ಲೈಟ್​​ ಏರಲಿರೋ ಈ ಜೋಡೆತ್ತುಗಳಿಗೆ ಇದು ಮೋಸ್ಟ್​ ಇಂಪಾರ್ಟೆಂಟ್​ ಟೂರ್. ಈ ಒಂದು ಟೆಸ್ಟ್ ಸರಣಿಯಲ್ಲಿ ಇವರಿಬ್ಬರ ಆಟ ನಡೆಯದಿದ್ರೆ, ಟೀಮ್ ಇಂಡಿಯಾದಿಂದ ಗೇಟ್​ಪಾಸ್​​​ ಗ್ಯಾರಂಟಿ.

ವೆಸ್ಟ್ ಇಂಡೀಸ್ ಟೆಸ್ಟ್​ ಸರಣಿ ಇಬ್ಬರಿಗೂ ಚಾಲೆಂಜ್..!

​ವಿರಾಟ್​ ಆ್ಯಂಡ್ ರೋಹಿತ್ ಈ ಇಬ್ಬರು ಜೊತೆ ಜೊತೆಯಾಗಿ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ ನಿಜ. ಆದ್ರೆ, ಈ ಸೂಪರ್ ಸ್ಟಾರ್ಸ್​ಗೆ ವೆಸ್ಟ್​ ಇಂಡೀಸ್ ನಿಜಕ್ಕೂ ಚಾಲೆಂಜಿಂಗ್ ಆಗಿದೆ. ಇದಕ್ಕೆ ಕಾರಣ ಕೆರಿಬಿಯನ್ ನೆಲದಲ್ಲಿ ಇವರಿಬ್ಬರು ನೀಡಿರುವ ಪ್ರದರ್ಶನ.

ವೆಸ್ಟ್​ ಇಂಡೀಸ್​​ ನೆಲದಲ್ಲಿ ರೋಹಿತ್

ಇಂಡೀಸ್ ನೆಲದಲ್ಲಿ 2 ಟೆಸ್ಟ್​ ಪಂದ್ಯಗಳನ್ನಾಡಿರುವ ರೋಹಿತ್, ಜಸ್ಟ್​ 50 ರನ್ ಗಳಿಸಿದ್ದಾರೆ. 25ರ ಸರಾಸರಿಯಲ್ಲಿ ಕಲೆಹಾಕಿರುವ ರೋಹಿತ್, ಇಂಡೀಸ್​ ನೆಲದಲ್ಲಿ ಸಿಡಿಸಿರುವ ಗರಿಷ್ಠ ರನ್​​ 41.

ರೋಹಿತ್​ ಶರ್ಮಾ ಮಾತ್ರವಲ್ಲ, ಕಿಂಗ್ ಕೊಹ್ಲಿಯೂ ವೆಸ್ಟ್ ಇಂಡೀಸ್ ನೆಲದಲ್ಲಿ ರನ್​ಗಳಿಸೋದ್ರಲ್ಲಿ ಹಿಂದೆ ಬಿದ್ದಿದ್ದಾರೆ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದ್ರೆ, ಕೆರಬಿಯನ್​ ನಾಡಲ್ಲಿ ರನ್​ಗಳಿಸಲು ಫೇಲ್​ ಆಗಿದ್ದಾರೆ.

ವೆಸ್ಟ್​ ಇಂಡೀಸ್​​ ನೆಲದಲ್ಲಿ ಕೊಹ್ಲಿ

ಕೆರಿಬಿಯನ್​ ನಾಡಲ್ಲಿ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ, 463 ರನ್ ಗಳಿಸಿದ್ದಾರೆ. 35.61ರ ಬ್ಯಾಟಿಂಗ್ ಸರಾಸರಿ ಹೊಂದಿರುವ ವಿರಾಟ್​ ಒಂದು ಡಬಲ್ ಸೆಂಚೂರಿ ಹಾಗೂ 2 ಅರ್ಧಶತಕಗಳನ್ನ ದಾಖಲಿಸಿದ್ದಾರೆ.

ಟೆಸ್ಟ್​ನಲ್ಲಿ ಸ್ಥಿರ ಪ್ರದರ್ಶನ ನೀಡದ ಈ ಇಬ್ಬರಿಗೂ, ವೆಸ್ಟ್ ಇಂಡೀಸ್ ಟೂರ್ ಅಗ್ನಿಪರೀಕ್ಷೆಯ ಕಣವಾಗಿದೆ. ಈಗಾಗಲೇ ಭವಿಷ್ಯದ ದೃಷ್ಟಿಯಿಂದ ಇವರನ್ನ ಡ್ರಾಪ್​ ಮಾಡಬೇಕೆಂಬ ಕೂಗು ಇದೆ. ಇದಿಷ್ಟೇ ಅಲ್ಲ. ಮತ್ತಷ್ಟು ಕಾರಣಗಳು ಮ್ಯಾನೇಜ್​ಮೆಂಟ್​ ಮುಂದಿವೆ.

ಸ್ಥಾನ ತುಂಬಲು ರೆಡಿಯಾಗಿದ್ದಾರೆ ಯಂಗ್ ಸ್ಟರ್ಸ್..!

ಸದ್ಯ ಇಂಡಿಯಾದಲ್ಲಿ ಯಾರೊಬ್ಬರ ಜಾಗವೂ ಸೇಫ್ ಇಲ್ಲ. ಅದರಲ್ಲೂ ಹಿರಿಯರ ಪ್ಲೇಸ್​​ಗೆ ಗ್ಯಾರಂಟಿನೇ ಇಲ್ಲ. ಯಾಕಂದ್ರೆ, ಈಗಾಗಲೇ ಡೊಮೆಸ್ಟಿಕ್​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿರುವ ಆಟಗಾರರು, ಇವರ ಸ್ಥಾನ ತುಂಬಲು ಕಾದು ಕುಳಿತಿದ್ದಾರೆ. ಒಂದೇ ಒಂದು ಚಾನ್ಸ್​ ಸಿಕ್ಕರೆ ಬಾಚಿಕೊಳ್ಳಲು ರೆಡಿಯಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಹಾಗೂ ಕೊಹ್ಲಿ ಆಡಲೇಬೇಕು. ಇಲ್ಲ ಟೀಮ್ ಇಂಡಿಯಾದಿಂದ ಎತ್ತಂಗಡಿಯಾಗೋದು ಖಾಯಂ.

ಟೀಮ್ ಇಂಡಿಯಾ ಪಾಲಿನ ಮ್ಯಾಚ್​ ವಿನ್ನರ್​​ಗಳಾಗಿದ್ದ ಈ ಸೂಪರ್​​ ಸ್ಟಾರ್ಸ್​ಗೆ, ಇಂಡೀಸ್ ಸರಣಿ ವೃತ್ತಿ ಜೀವನದ ರಿಯಲ್ ಟೆಸ್ಟ್​ ಆಗಿದೆ. ಹೀಗಾಗಿ ಈ ಚಾಲೆಂಜ್​ನಲ್ಲಿ ಇಬ್ಬರೂ ಗೆಲ್ತಾರಾ, ಇಲ್ವಾ? ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವೆಸ್ಟ್​ ಇಂಡೀಸ್​ ಟೂರ್ನಿಯಲ್ಲಿ ಗೆಲ್ಲೋದು ಕೊಹ್ಲಿನಾ, ಕ್ಯಾಪ್ಟನ್​ ರೋಹಿತ್​ ಶರ್ಮಾನಾ? ಏನಿದು ಹೊಸ ಸವಾಲು?

https://newsfirstlive.com/wp-content/uploads/2023/06/VIRAT_KOHLI_ROHIT_SHARMA.jpg

Load More