newsfirstkannada.com

×

Worldcup 2023: ಬರೀ 99 ದಿನಗಳಷ್ಟೇ ಬಾಕಿ.. ಆದ್ರೆ ಟೀಂ ಇಂಡಿಯಾಗೆ ಕಾಡುತ್ತಿದೆ ಅದೊಂದು ಭೀತಿ

Share :

Published June 29, 2023 at 10:33am

    11 ನಗರಗಳಲ್ಲಿ 11 ಪಂದ್ಯ ಆಡಲಿದ ರೋಹಿತ್ ಪಡೆ

    38 ದಿನದಲ್ಲಿ 12,125 Km ಪ್ರಯಾಣಿಸಲಿದೆ ಟೀಂ ಇಂಡಿಯಾ

    ಮ್ಯಾರಥಾನ್ ಟ್ರಾವೆಲ್​ನಿಂದ ಭಾರತಕ್ಕೆ ಕಾಡುತ್ತಿದೆ ಇಂಜುರಿ ಭೀತಿ

ಒನ್​ಡೇ ವಿಶ್ವಕಪ್​​​​​ ವೇಳಾಪಟ್ಟಿ ಅನೌನ್ಸ್​ ಆಗಿದೆ. ತವರಿನಲ್ಲಿ ಟೂರ್ನಿ ನಡೆಯುತ್ತಿರೋದ್ರಿಂದ ಟೀಮ್ ಇಂಡಿಯಾ ವಿಶ್ವಕಪ್​ ಗೆಲ್ಲುವ ಫೇವರಿಟ್ ಎನಿಸಿದೆ. ಆದರೆ ಈ ಮಹಾದಾಸೆಗೆ ‘ಭಾರತ​​​​ ದರ್ಶನ’ ಕೊಳ್ಳಿ ಇಡುತ್ತಾ ಅನ್ನೋ ಆತಂಕ ಹೆಚ್ಚಿಸಿದೆ. ಅಷ್ಟಕ್ಕೂ ಏನಪ್ಪಾ ಇದು ‘ಭಾರತ ದರ್ಶನ’ ಅಂತೀರಾ ? ಹಾಗಿದ್ರೆ ಈ ಸ್ಟೋರಿನಾ ಮಿಸ್ ಮಾಡ್ದೇ ಓದಿ.

ಇನ್ನು ಜಸ್ಟ್​ 99 ಡೇಸ್​​​. ಒನ್​ಡೇ ವಿಶ್ವಕಪ್​​​ ಮಹಾಸಂಗ್ರಾಮಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಅದು ಭಾರತದಲ್ಲೇ ಅನ್ನೋದು ಮತ್ತೊಂದು ಖುಷಿಯ ವಿಚಾರ. ಆದರೆ ಈ ಗುಡ್​ನ್ಯೂಸ್ ಒಂದೆಡೆ ಇರಲಿ. ವಿಶ್ವಕಪ್ ಭಾರತದ್ದಲ್ಲಿ ನಡೀತಿದ್ರೂ ಟೀಮ್ ಇಂಡಿಯಾ ಮುಂದೆ ಒಂದು ದೊಡ್ಡ ಸವಾಲಿದೆ. ಆಟದಲ್ಲಿ ಬೇಕಾದ್ರೆ ಎಂತಹ ಕಠಿಣ ಚಾಲೆಂಜ್ ಮೀರಿ ನಿಲ್ಲಬಲ್ಲದು. ಆದರೆ ಈ ಆಫ್ ದಿ ಫೀಲ್ಡ್​​​​ ಸವಾಲನ್ನ ನಿಭಾಯಿಸೋದು ಮೆನ್​ ಇನ್​ ಬ್ಲೂ ಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಶ್ವಕಪ್​​ನಲ್ಲಿ ಭಾರತ ತಂಡದಿಂದ ಮ್ಯಾರಥಾನ್ ಟ್ರಾವೆಲ್​

ಈ ಬಾರಿಯ ಒನ್​ಡೇ ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಮ್ಯಾರಥಾನ್ ಟ್ರಾವೆಲ್​ ನಡೆಸಲಿದೆ. ಭಾರತದ ತುತ್ತತುದಿ ಧರ್ಮಶಾಲಾ ದಿಂದ ಹಿಡಿದು ತಿರುವನಂತಪುರಂ ತನಕ ಬಿಡುವಿಲ್ಲದೇ ಸಂಚರಿಸಿದೆ. 11 ನಗರಗಳಲ್ಲಿ 11 ಪಂದ್ಯ ಆಡುವ ರೋಹಿತ್ ಪಡೆ ಬರೋಬ್ಬರಿ 12 ಸಾವಿರ ಕಿ.ಲೋ ಮೀಟರ್​​​​​ ದೂರವನ್ನ ಫ್ಲೈಟ್​​ನಲ್ಲಿ ಕಳೆಯಲಿದೆ.

ಭಾರತ ತಂಡದ ಮ್ಯಾರಥಾನ್ ಟ್ರಾವೆಲ್​

– ಗುವಾಹಟಿ TO ತಿರುವನಂತಪುರಂ : 2506 ಕಿ.ಮೀ
– ತಿರುವನಂತಪುರಂ TO ಚೆನ್ನೈ : 621 ಕಿ.ಮೀ
– ಚೆನ್ನೈ TO ದೆಹಲಿ : 1760 ಕಿ.ಮೀ
– ದೆಹಲಿ TO ಅಹ್ಮದಾಬಾದ್​​​ : 775 ಕಿ.ಮೀ
-ಅಹ್ಮದಾಬಾದ್​​​ TO ಪುಣೆ : 518 ಕಿ.ಮೀ
– ಪುಣೆ TO ಧರ್ಮಶಾಲಾ : 1543 ಕಿ.ಮೀ
-ಧರ್ಮಶಾಲಾ TO ಲಕ್ನೋ : 748 ಕಿ.ಮೀ
– ಲಕ್ನೋ TO ಮುಂಬೈ : 1190 ಕಿ.ಮೀ
– ಮುಂಬೈ TO ಕೊಲ್ಕತ್ತಾ : 1652 ಕಿ.ಮೀ
– ಕೊಲ್ಕತ್ತಾ TO ಬೆಂಗಳೂರು : 1560 ಕಿ.ಮೀ
ಪ್ರಯಾಣದ ಒಟ್ಟು ದೂರ – 12,125 ಕಿ.ಮೀ

ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಎರಡು ಅಭ್ಯಾಸ ಆಡುವ ಭಾರತ ತಂಡ 2506 ಕಿ.ಮೀ ಪ್ರಯಾಣ ಮಾಡಲಿದೆ. ಬಳಿಕ ತಿರುವನಂತಪುರಂನಿಂದ ಚೆನ್ನೈಗೆ ಪ್ಲೈಟ್ ಏರಲಿದೆ. ಇದರ ದೂರ 621 ಕಿ.ಮೀ. ಚೆನ್ನೈ ಮ್ಯಾಚ್ ಮುಗಿಸಿ ನೇರವಾಗಿ ದೆಹಲಿಗೆ ಹಾರಲಿದೆ. ಇದರ ಪ್ರಯಾಣದ ಅವಧಿ 1760 ಕಿ.ಮೀ. ಇನ್ನು ದೆಹಲಿಯಿಂದ ಅಹ್ಮದಾಬಾದ್​​ಗೆ ಹಾರುವ ರೋಹಿತ್ ಪಡೆ 775 ಕಿ.ಮೀ ಕ್ರಮಿಸಲಿದೆ. ಬಳಿಕ ಅಹ್ಮದಾಬಾದ್​​​ ನಿಂದ ಪುಣೆಗೆ 518 ಕಿ.ಮೀ, ಪುಣೆ ಯಿಂದ ಧರ್ಮಶಾಲಾಕ್ಕೆ ಬರೋಬ್ಬರಿ 1543 ಕಿ.ಮೀ ಸಂಚರಿಸಿದೆ. ಇನ್ನು ಧರ್ಮಶಾಲಾ ಟು ಲಕ್ನೋ 748 ಕಿ.ಮೀ ಕ್ರಮಿಸಿದ್ರೆ ಲಕ್ನೋ ಟು ಮುಂಬೈಗೆ 1190 ಕಿ.ಮೀ ಪ್ರಯಾಣಿಸಲಿದೆ. ಅಲ್ಲಿಂದ 1652 ಕಿ.ಮೀ ಕ್ರಮಿಸಿ ಕೊಲ್ಕತ್ತಾ ತಲುಪಲಿದೆ. ಬಳಿಕ ಕೊಲ್ಕತ್ತಾದಿಂದ 1560 ಕಿ.ಮೀ ಫ್ಲೈಟ್ ನಲ್ಲಿ​ ಪ್ರಯಾಣಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಅಲ್ಲಿಗೆ ಒಟ್ಟು 12,125 ಕಿ.ಮೀ ಟ್ರಾವೆಲ್ ಮಾಡಲಿದೆ.

12, 000 ಕಿ.ಮೀ ಟ್ರಾವೆಲ್​​​..1100 ಓವರ್​​​ಗಳ ಆಟ..

38 ದಿನದಲ್ಲಿ 12,125 ಕಿ.ಮೀ ದೂರ ಪ್ರಯಾಣಿಸೋದಂದ್ರೆ ಸುಲಭದ ಸಂಗತಿ ಏನಲ್ಲ. ರೋಹಿತ್​​ ಪಡೆಗೆ ಇದು ಟಫೆಸ್ಟ್​ ಚಾಲೆಂಜ್ ಆಗಿರಲಿ. ಯಾಕಂದ್ರೆ 100 ಓವರ್​​ಗಳ ಪಂದ್ಯ ಆಡಿ ಪ್ಲೇಯರ್ಸ್​ ಸುಸ್ತಾಗಿರ್ತಾರೆ. ಎರಡು ಅಭ್ಯಾಸ ಪಂದ್ಯ ಸೇರಿ ಇಂತಹ 11 ಪಂದ್ಯಗಳನ್ನ ಭಾರತ ಆಡಬೇಕಾಗುತ್ತೆ. ಅಲ್ಲಿಗೆ 1100 ಓವರ್​​​ಗಳ ಆಟವನ್ನ ಆಡುವವಷ್ಟರಲ್ಲಿ ಆಟಗಾರರು ಸಾಕಷ್ಟು ಹೈರಣಾಗಿರ್ತಾರೆ. ಇದರ ಮಧ್ಯೆ 12 ಸಾವಿರ ಕಿ.ಮೀ ಟ್ರಾವೆಲ್​. ಅಂದರೆ ಒಂದು ಪಂದ್ಯದ ಎವರೇಜ್ ಟ್ರಾವೆಲ್​​​ 1090 ಕಿ.ಮೀ.

ಇದು ಬರೀ ಅಭ್ಯಾಸ ಪಂದ್ಯ ಮತ್ತು ಲೀಗ್​ ಸ್ಟೇಜ್​​​​ ಟ್ರಾವೆಲ್​​​ ಕಥೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್​​ ಮತ್ತು ಫೈನಲ್​ ಆಡಿದ್ರೆ ಈ ಟ್ರಾವೆಲ್​ ಡಿಸ್ಟೆನ್ಸ್​ ಮತ್ತಷ್ಟು ಎಚ್ಚಲಿದೆ. ಸುಮಾರು 20 ಸಾವಿರ ಕಿ.ಮೀ ಪ್ರಯಾಣವನ್ನ ಫ್ಲೈಟ್​​ನಲ್ಲೆ ಮಾಡಬೇಕಾಗುತ್ತೆ.

ಟೀಮ್ ಇಂಡಿಯಾಗೆ ಇಂಜುರಿ ಭೀತಿ

ಮ್ಯಾರಥಾನ್ ಟ್ರಾವೆಲ್ ನಿಂದ ಭಾರತಕ್ಕೆ ಇಂಜುರಿ ಭೀತಿ ಕಾಡುವ ಸಾಧ್ಯತೆ ಇದೆ. ಆಟದ ಜೊತೆ ಫಿಟ್ನೆಸ್​ ಕಾಪಾಡಿಕೊಳ್ಳೋದು ದೊಡ್ಡ ಸವಾಲು. ಕೆಎಲ್ ರಾಹುಲ್​​​, ಜಸ್​ಪ್ರೀತ್ ಬುಮ್ರಾ, ಶ್ರೇಯಸ್​ ಅಯ್ಯರ್​​​​​​ ಹಾಗೂ ರಿಷಬ್​ ಪಂತ್​​ರಂತ ಕೀ ಪ್ಲೇಯರ್ಸ್​ ಇಂಜುರಿಯಿಂದ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಸುದೀರ್ಘ ಟ್ರಾವೆಲ್​​ನಿಂದ ಇವರು ಮತ್ತೆ ಇಂಜುರಿಗೆ ತುತ್ತಾಗುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ. ಇದರ ಜೊತೆ ತಂಡದಲ್ಲಿರೋ ಕೆಲ ಆಟಗಾರರು ಫುಲ್ ಫಿಟ್ ಇಲ್ಲ. ಇವರು ಕೂಡ ಇಂಜುರಿಯಿಂದ ಬಳಲಬಹುದು ಅನ್ನೋ ಭೀತಿ ಬೇರೆ ಕಾಡ್ತಿದೆ.

ಒಟ್ಟಿನಲ್ಲಿ ಒಂದು ಕಡೆ ಆಟ, ಇನ್ನೊಂದು ಕಡೆ ಮ್ಯಾರಥಾನ್​ ಟ್ರಾವೆಲ್​​​. ಇವೆರಡನ್ನ ಟೀಮ್​ ಇಂಡಿಯಾ ಹೇಗೆ ಬ್ಯಾಲೆನ್ಸ್ ಮಾಡುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Worldcup 2023: ಬರೀ 99 ದಿನಗಳಷ್ಟೇ ಬಾಕಿ.. ಆದ್ರೆ ಟೀಂ ಇಂಡಿಯಾಗೆ ಕಾಡುತ್ತಿದೆ ಅದೊಂದು ಭೀತಿ

https://newsfirstlive.com/wp-content/uploads/2023/06/Team-India-2-1.jpg

Load More