newsfirstkannada.com

ಟೀಂ ಇಂಡಿಯಾದಲ್ಲಿ ‘ವೈಸ್​ ಕ್ಯಾಪ್ಟನ್ಸಿ​’ ಕಂಟಕ.. ತುಂಬಾನೇ ಡೇಂಜರ್ ಈ ಹುದ್ದೆ..! ಯಾಕೆ ಗೊತ್ತಾ..?

Share :

Published July 22, 2023 at 1:03pm

Update July 22, 2023 at 1:04pm

    ಕ್ರಿಕೆಟ್ ಲೋಕದಲ್ಲಿ ಶುರುವಾಗಿದೆ ಹೀಗೊಂದು ಚರ್ಚೆ..!

    ವಿಂಡೀಸ್ ಟೂರ್ನಿಯಲ್ಲೂ ಸಾಬೀತಾಯ್ತು ಅದು..!

    ವೆಸ್ಟ್ ವಿಂಡೀಸ್​ ಪ್ರವಾಸದಲ್ಲಿ ಭಾರತ ತಂಡ

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಪ್ರತಿಯೊಬ್ಬರಿಗೂ ನಾಯಕನಾಗಿ ತಂಡವನ್ನ ಮುನ್ನಡೆಸಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಅದಾಗದಿದ್ರೂ ಕೊನೆಪಕ್ಷ ಉಪನಾಯಕನ ಗದ್ದುಗೆ ಏರಬೇಕು ಅನ್ನೋ ಕನಸಂತೂ ಇರುತ್ತದೆ. ಈ ಸ್ಟೋರಿ ನೋಡಿದ್ರೆ ಉಪ ನಾಯಕನ ಸ್ಥಾನ ಬೇಡವೇ ಬೇಡ ಅನ್ನೋದು ಗ್ಯಾರಂಟಿ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರೋ ಟೀಮ್ ಇಂಡಿಯಾ, ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲೂ ಅಧಿಪತ್ಯ ಸಾಧಿಸಿದೆ. ಟ್ರಿನಿಡಾಡ್​ ಟೆಸ್ಟ್​ ಪಂದ್ಯ ಗೆದ್ದು ಕ್ಲೀನ್​ಸ್ವೀಪ್ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದೆ. ಆದ್ರೆ, ಗ್ರೇಟ್​​ ಕಮ್​ಬ್ಯಾಕ್ ಮಾಡಿದ ಅಜಿಂಕ್ಯಾ ರಹಾನೆ ಪಾಲಿಗೆ ಮಾತ್ರ ಈ ಟೆಸ್ಟ್​ ಸಿರೀಸ್​ ಕಂಗ್ಗಂಟಾಗಿ ಮಾರ್ಪಟ್ಟಿದೆ.

ವರ್ಷದ ಬಳಿಕ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ ರಹಾನೆ, ಮರಳಿ ಸ್ಥಾನವನ್ನ ಮಾತ್ರವಲ್ಲ. ವೈಸ್​ ಕ್ಯಾಪ್ಟನ್ಸಿ ಪಟ್ಟವನ್ನೂ ದಕ್ಕಿಸಿಕೊಂಡ್ರು. ಆದ್ರೆ ಈಗ ವೈಸ್​ ಕ್ಯಾಪ್ಟನ್ಸಿ ಬಿಡಿ.. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಬಿಗ್ ಚಾಲೆಂಜ್​ ಆಗಿ ಮಾರ್ಪಟ್ಟಿದೆ.

ಟೀಮ್ ಇಂಡಿಯಾದ ಉಪ‌ ನಾಯಕತ್ವ ಪಟ್ಟವೇ ಡೇಂಜರ್?

ಉಪ ನಾಯಕನಾದ್ರೆ ಸಾಕು ಟೀಮ್ ಇಂಡಿಯಾದಲ್ಲಿ ಸ್ಥಾನ ಫಿಕ್ಸ್​. ಕೆಲ ವರ್ಷಗಳು ಆತನ ಸ್ಥಾನವನ್ನು ಅಲುಗಾಡಿಸಲು ಸಾಧ್ಯವಿಲ್ಲ ಅನ್ನೋ ಮಾತಿದೆ. ಆದ್ರೆ ಈಗ ಆ ಮಾತು ಸುಳ್ಳಾಗಿದೆ. ಉಪನಾಯಕನ ಪಟ್ಟಕ್ಕೇರಿದ ಪ್ರತಿ ಆಟಗಾರ ಸಂಕಷ್ಟ ಎದುರಿಸುವಂತಾಗಿದೆ. ಇದಕ್ಕೆ ಲೆಟೇಸ್ಟ್​ ಎಕ್ಸಾಂಪಲ್ ಅಂಜಿಕ್ಯಾ ರಹಾನೆ.

ಗ್ರೇಟ್ ಕಮ್​​​ಬ್ಯಾಕ್ ಮಾಡಿದ ಮುಂಬೈಕರ್​ ಈಗ ಫ್ಲಾಫ್

ಐಪಿಎಲ್​ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದ ರಹಾನೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಗ್ರೇಟ್​ ಕಮ್​​ಬ್ಯಾಕ್ ಮಾಡಿದ್ದರು. ಅಷ್ಟೇ ಅಲ್ಲ.! ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿದು ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್‌ನಲ್ಲಿ ಕ್ರಮವಾಗಿ 89, 46 ರನ್‌ಗಳ ಅಮೋಘ ಇನ್ನಿಂಗ್ಸ್​ ಆಡಿ ಗಮನ ಸೆಳೆದಿದ್ರು. ಇದು ಸಹಜವಾಗೇ ವೆಸ್ಟ್ ಇಂಡೀಸ್ ಟೂರ್​ ವೇಳೆಗೆ ರಹಾನೆಗೆ ಬಡ್ತಿ ನೀಡುವಂತೆ ಮಾಡಿತ್ತು. ಆದ್ರೆ, ಈ ಬಡ್ತಿಯೇ ಈಗ ರಹಾನೆ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಉಪ‌ ನಾಯಕನಾಗಿ ವೈಫಲ್ಯ.. ರಹಾನೆ ಸ್ಥಾನಕ್ಕೆ ಮತ್ತೆ ಕುತ್ತು?

ವೆಸ್ಟ್​ ಇಂಡೀಸ್ ಟೂರ್​ ವೇಳೆಗೆ ಮತ್ತೆ ಉಪ ನಾಯಕರಾಗಿ ಪ್ರಮೋಷನ್ ಪಡೆದುಕೊಂಡ ರಹಾನೆ ಫ್ಲಾಪ್​​ ಆಗಿದ್ದಾರೆ. ಸಖತ್ ಆಗಿ ರನ್ ಕೊಳ್ಳೆ ಹೊಡೆಯಬೇಕಿದ್ದ ಪಿಚ್​ಗಳಲ್ಲೇ ಪರದಾಟ ನಡೆಸ್ತಿದ್ದಾರೆ. ಫಸ್ಟ್​ ಟೆಸ್ಟ್‌ನಲ್ಲಿ ಕೇವಲ 2 ರನ್​ಗೆ ವಿಕೆಟ್ ಒಪ್ಪಿಸಿದ್ದ ರಹಾನೆ, ಟ್ರಿನಿಡಾಡ್​ ಟೆಸ್ಟ್​ನಲ್ಲೂ ರನ್​ಗಳಿಕೆಗೆ ಪರದಾಡ್ತಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 8 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೇ ಈಗ ರಹಾನೆ ಸ್ಥಾನಕ್ಕೆ ಕುತ್ತಾಗುವ ಸಾಧ್ಯತೆ ಇದೆ.

ರಾಹುಲ್-ಪೂಜಾರಗೂ ಎದುರಾಗಿತ್ತು ಇದೇ ಸಂಕಷ್ಟ..!

ಈ ಹಿಂದೆ ಕೆ.ಎಲ್.ರಾಹುಲ್, ಉಪ ನಾಯಕನ ಪಟ್ಟಕ್ಕೇರಿದ ಬಳಿಕ ಸಂಪೂರ್ಣ ವೈಫಲ್ಯ ಕಂಡಿದ್ದರು. ಬ್ಯಾಟಿಂಗ್ ವೈಫಲ್ಯದಿಂದ ಭಾರೀ ಟೀಕೆಗೆ ಗುರಿಯಾಗಿದ್ದ ಕನ್ನಡಿಗ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಉಪ ನಾಯಕನಾಗಿದ್ರೂ ಬೆಂಚ್ ಕಾದಿದ್ರು.

ರಾಹುಲ್ ಮಾತ್ರವೇ ಅಲ್ಲ! ರಾಹುಲ್ ಬಳಿಕ ಉಪ ನಾಯಕತ್ವ ಪಟ್ಟಕ್ಕೇರಿದ್ದ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ಕೂಡ, ಬ್ಯಾಕ್ ಟು ಬ್ಯಾಕ್ ವೈಫಲ್ಯ ಕಂಡರು. ಪರಿಣಾಮ ಈಗ ಟೀಮ್ ಇಂಡಿಯಾದಿಂದಲೇ ಹೊರ ಬಿದ್ದಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ವೈಫಲ್ಯ ಕಂಡಿರೋ ರಹಾನೆ, 2ನೇ ಇನ್ನಿಂಗ್ಸ್​ನಲ್ಲೂ ಫ್ಲಾಫ್ ಆದ್ರೆ ಟೀಮ್​ ಇಂಡಿಯಾದಿಂದ ಹೊರ ಬೀಳೋದು ಕನ್​ಫರ್ಮ್​. ವಿಂಡೀಸ್​ ಟೆಸ್ಟ್​ ಸರಣಿಯ ಬಳಿಕ ಡಿಸೆಂಬರ್ ವರೆಗೆ ಟೀಮ್​ ಇಂಡಿಯಾ ಟೆಸ್ಟ್​ ಆಡಲ್ಲ. ಈಗಾಗಲೇ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿರೋ ಟೀಮ್ ಇಂಡಿಯಾದಲ್ಲಿ ಡಿಸೆಂಬರ್​ ಒಳಗೆ ಮತ್ತಷ್ಟು ಬದಲಾವಣೆ ಖಾಯಂ. ಹೀಗಾಗಿ ರಹಾನೆ ವೈಫಲ್ಯ ಕಂಡ್ರೆ ಸ್ಥಾನ ಸಿಗೋದು ಕಷ್ಟ ಸಾಧ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.

ವಿಶೇಷ ವರದಿ: ಸಂತೋಷ್, ಸ್ಪೋರ್ಟ್ಸ್​ ಬ್ಯೂರೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ‘ವೈಸ್​ ಕ್ಯಾಪ್ಟನ್ಸಿ​’ ಕಂಟಕ.. ತುಂಬಾನೇ ಡೇಂಜರ್ ಈ ಹುದ್ದೆ..! ಯಾಕೆ ಗೊತ್ತಾ..?

https://newsfirstlive.com/wp-content/uploads/2023/06/Team-India-test.jpg

Load More