newsfirstkannada.com

Asia cup 2023: ಇಂದಿನಿಂದ ಏಷ್ಯಾಕಪ್ ಸಮರ ಆರಂಭ.. ಚಿಂತೆಗಳ ಕಂತೆ ಹೊತ್ತಿದೆಯ ಟೀಂ ಇಂಡಿಯಾ?

Share :

30-08-2023

    ಟೀಮ್ ಇಂಡಿಯಾದ ಬಲವೇ ಟಾಪ್ ಆರ್ಡರ್

    ಈ ವಿಕ್​ನೆಸ್​ ಮೆಟ್ಟಿನಿಂತರಷ್ಟೇ ಏಷ್ಯಾಕಪ್ ಗೆಲುವು

    ಹಿಟ್​ಮ್ಯಾನ್ ಪಡೆ ಹೀನಾಯ ಸ್ಥಿತಿಯಲ್ಲಿದೆ

ಇಂದಿನಿಂದ ಏಷ್ಯಾಕಪ್ ಸಮರ ಆರಂಭವಾಗಲಿದ್ದು, ಒಂದು ಟ್ರೋಫಿಗಾಗಿ 6 ತಂಡಗಳು ಕಾದಾಟ ನಡೆಸಲಿವೆ. ಈ ಪೈಕಿ ಮೇಲ್ನೊಟಕ್ಕೆ ಬಲಿಷ್ಠವಾಗಿ ಕಾಣ್ತಿರುವ ಟೀಮ್ ಇಂಡಿಯಾ, ಟ್ರೋಫಿ ಗೆಲ್ಲೋ ಫೇವರಿಟ್​​​ ಆಗಿ ಕಣಕ್ಕಿಳಿಯುತ್ತಿದೆ. ಆದರೆ, ಅಸಲಿ ಕತೆ ಬೇರೆನೆ ಇದೆ. ಈ ಕತೆ ಕೇಳಿದ್ರೆ, ಏಷ್ಯಾಕಪ್ ಗೆಲ್ಲೋದು ಕಷ್ಟ ಅಂತಾ ಅನ್ನಿಸದೆ ಇರಲ್ಲ..

ಪ್ರತಿಷ್ಠಿತ ಏಷ್ಯಾಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಏಷ್ಯನ್ ಕಿಂಗ್​ ಎನಿಸಿಕೊಳ್ಳಲು ಬರೋಬ್ಬರಿ 6 ತಂಡಗಳು ರಣಾಂಗಣಕ್ಕಿಳಿಯುತ್ತಿವೆ. ತಮ್ಮದೇ ಆದ ಸ್ಟ್ರಾಟರ್ಜಿ, ಗೇಮ್​ ಪ್ಲಾನ್​ನೊಂದಿಗೆ ಏಷ್ಯಾ ಕಿರೀಟಕ್ಕೆ ಮುತ್ತಿಡುವ ಲೆಕ್ಕಾಚಾರದಲ್ಲಿವೆ. ಟೀಮ್ ಇಂಡಿಯಾ ಕೂಡ ಇದಕ್ಕಾಗಿ ಭಾರೀ ತಯಾರಿಯನ್ನೇ ನಡೆಸಿ ಸಮರಕ್ಕೆ ಧುಮುಕುತ್ತಿದೆ. ಆದ್ರೆ, ಈ ಸಲನೂ ರೋಹಿತ್​​ ಪಡೆಗೆ ಗೆಲುವು ಸುಲಭದಲ್ಲಿಲ್ಲ.

ಭಾರತಕ್ಕೆ ಟಾಪ್ ಆರ್ಡರ್​ ಬ್ಯಾಟ್ಸ್​ಮನ್​​​ಗಳೇ ಆಧಾರ.!

ಟೀಮ್ ಇಂಡಿಯಾದ ಬಲವೇ ಟಾಪ್ ಆರ್ಡರ್​​.. ಹಲವು ವರ್ಷಗಳ ಸಕ್ಸಸ್​ ಸಿಕ್ರೇಟ್​ ಕೂಡ ಈ ಟಾಪ್ ಆರ್ಡರ್ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಆದ್ರೆ, ಪಾಕಿಸ್ತಾನ ತಂಡದ ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳಿಗೆ ಹೋಲಿಸಿದ್ರೆ, ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ಗಳ ಪರ್ಫಾಮೆನ್ಸ್​ ಅಷ್ಟಕಷ್ಟೇ..! ಕಳೆದ ಒಂದು ವರ್ಷದ ಟ್ರ್ಯಾಕ್ ರೆಕಾರ್ಡ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​..!

2022ರಿಂದ ಟಾಪ್ ಆರ್ಡರ್​ ಬ್ಯಾಟಿಂಗ್ ಸರಾಸರಿ
ಪಾಕಿಸ್ತಾನ 52.9
ಟೀಮ್ ಇಂಡಿಯಾ 46.3
ಅಫ್ಘಾನಿಸ್ತಾನ 41.6
ಶ್ರೀಲಂಕಾ 40.8

2022ರಿಂದ ಪಾಕಿಸ್ತಾನ ತಂಡದ ಟಾಪ್ ತ್ರಿ ಬ್ಯಾಟ್ಸ್​ಮನ್​​ಗಳ ಒಟ್ಟು ಸರಾಸರಿ 52.9 ಆಗಿದ್ರೆ, ಟೀಮ್ ಇಂಡಿಯಾದ ಟಾಪ್ ತ್ರಿ ಬ್ಯಾಟಿಂಗ್ ಸರಾಸರಿ 46.3 ಆಗಿದೆ. ಈ ನಂತರದ ಸ್ಥಾನದಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ್ ಹಾಗೂ ಶ್ರೀಲಂಕಾ ಇದ್ದು, 41.6 ಹಾಗೂ 40.8ರ ಸರಾಸರಿಯನ್ನ ಹೊಂದಿವೆ.

ಏಷ್ಯಾ ತಂಡಗಳ ಲೆಕ್ಕಾಚಾರದಲ್ಲಿ ಮಾತ್ರವೇ ಅಲ್ಲ.! ಕಳೆದೊಂದು ವರ್ಷದಿಂದ ವಿಶ್ವದಲ್ಲೇ ಪಾಕಿಸ್ತಾನ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿರುವ ತಂಡವಾಗಿ ಗುರುತಿಸಿಕೊಂಡಿದೆ. ಈ ಅಂಕಿಅಂಶಗಳಿಗೆ ಹೋಲಿಸಿದ್ರೆ, ಟೀಮ್ ಇಂಡಿಯಾ ಸೆಕೆಂಡ್ ಪ್ಲೇಸ್​ನಲ್ಲಿದೆ. ಹೀಗಾಗಿ ಟೀಮ್ ಇಂಡಿಯಾದ ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್​ ಕೊಹ್ಲಿ ಏಷ್ಯಾಕಪ್​ನಲ್ಲಿ ಅಬ್ಬರಿಸಲೇಬೇಕು.. ಯಾಕಂದ್ರೆ, ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್​ಗಳ ಆಟ ಕಳಪೆಯಾಗಿದೆ.

2022ರಿಂದ ಮಿಡಲ್ ಆರ್ಡರ್ ಸರಾಸರಿ

ಬಾಂಗ್ಲಾದೇಶ 38
ಶ್ರೀಲಂಕಾ 34
ಪಾಕಿಸ್ತಾನ 34
ಟೀಮ್ ಇಂಡಿಯಾ 33

2022ರಿಂದ 4, 5, ಮತ್ತು 6ನೇ ಕ್ರಮಾಂಕದ ಬ್ಯಾಟಿಂಗ್ ಸರಾಸರಿ ನೋಡಿದ್ರೆ, ಬಾಂಗ್ಲಾದೇಶ ತಂಡ 38ರ ಸರಾಸರಿ ಹೊಂದಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ್ ತಲಾ 34ರ ಸರಾಸರಿ ಹೊಂದಿವೆ. ಆದ್ರೆ, ಟೀಮ್ ಇಂಡಿಯಾದ 4, 5, 6ನೇ ಸ್ಲಾಟ್​ನ ಎವರೇಕ್​ ಕೇವಲ 33 ಆಗಿದೆ.

ಲೋವರ್ ಆರ್ಡರ್​ನಲ್ಲಿ ನೇಪಾಳಕ್ಕಿಂತ ಕಡೆ..!

ಟೀಮ್ ಇಂಡಿಯಾದ ಲೋವರ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ಪರ್ಫಾಮೆನ್ಸ್​ ಇನ್ನಷ್ಟು ಕಳಪೆಯಾಗಿದೆ. ಏಷ್ಯಾಕಪ್​​ನಲ್ಲಿರುವ ಉಳಿದ ತಂಡಗಳಿಗೆ ಹೋಲಿಸಿದ್ರೆ, ಹಿಟ್​ಮ್ಯಾನ್ ಪಡೆ ಹೀನಾಯ ಸ್ಥಿತಿಯಲ್ಲಿದೆ ಅಂದ್ರೆ ತಪ್ಪಾಗಲ್ಲ.. ಯಾಕಂದ್ರೆ, 7ರಿಂದ 11 ಕ್ರಮಾಂಕದ ಬ್ಯಾಟ್ಸ್​ಮನ್​​ಗಳು ರನ್​ಗಳಿಕೆ ವಿಚಾರದಲ್ಲಿ ನೇಪಾಳಕ್ಕಿಂತ ಹಿಂದುಳಿದಿದ್ದಾರೆ.

2022ರಿಂದ ಲೋವರ್ ಆರ್ಡರ್ ಸರಾಸರಿ

ನೇಪಾಳ 17.3
ಬಾಂಗ್ಲಾದೇಶ 16.5
ಟೀಮ್ ಇಂಡಿಯಾ 13.5

ನೇಪಾಳದ ಲೋವರ್ ಆರ್ಡರ್​ ಬ್ಯಾಟ್ಸ್​ಮನ್​ಗಳ ಬ್ಯಾಟಿಂಗ್ ಸರಾಸರಿ 17.3 ಇದ್ರೆ, ಬಾಂಗ್ಲಾದೇಶದ 16.5ರ ಸರಾಸರಿ ಹೊಂದಿದೆ. ಆದರೆ, ಬಲಿಷ್ಠ ಎಂದು ಗುರುತಿಸಿಕೊಳ್ಳೋ ಟೀಮ್ ಇಂಡಿಯಾದ ಲೋವರ್ ಆರ್ಡರ್​ನ ರನ್​ಗಳಿಕೆಯ ಸರಾಸರಿ ಕೇವಲ​ 13.5 ಮಾತ್ರ.!

ಈ ವಿಕ್​ನೆಸ್​ ಮೆಟ್ಟಿನಿಂತರಷ್ಟೇ ಏಷ್ಯಾಕಪ್ ಗೆಲುವು!

ಪಾಕಿಸ್ತಾನ ಬ್ಯಾಟಿಂಗ್ ಡೆಪ್ತ್​​​ ಹೊಂದಿದ್ರೆ, ಬಾಂಗ್ಲಾ ಮೋಸ್ಟ್​ ಎಕ್ಸಪಿರೀಯನ್ಸ್​ ಮಿಡಲ್ ಆರ್ಡರ್​ನ ಹೊಂದಿದೆ. ಇವೆರೆಡು ತಂಡಗಳಿಗೂ ಹೋಲಿಸಿದ್ರೆ, ಟೀಮ್ ಇಂಡಿಯಾ ಭಾರೀ ಹಿಂದುಳಿದಿದೆ. ಅಂಕಿ-ಅಂಶಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ಡೆಪ್ತ್​​ನ ಪ್ರಶ್ನಿಸುವಂತಿದೆ. ಟಾಪ್ ಆರ್ಡರ್​ ಬಿಟ್ರೆ, ಉಳಿದೆಲ್ಲಾ ವಿಭಾಗ ಅವರೇಜ್ ಅನ್ನೋದು ಇಲ್ಲೇ ಬಟಾಬಯಲಾಗಿದ್ದು, ಏಷ್ಯನ್​ ಸಂಗ್ರಾಮದಲ್ಲಿ ಈ ವೀಕ್​ನೆಸ್​ನ ಓವರ್​​ಕಮ್​ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Asia cup 2023: ಇಂದಿನಿಂದ ಏಷ್ಯಾಕಪ್ ಸಮರ ಆರಂಭ.. ಚಿಂತೆಗಳ ಕಂತೆ ಹೊತ್ತಿದೆಯ ಟೀಂ ಇಂಡಿಯಾ?

https://newsfirstlive.com/wp-content/uploads/2023/07/Kohli_Rohit-Sharma.jpg

Load More