newsfirstkannada.com

ಸೌತ್​​ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತದ ಬಳಿ ಇದೆ ಅತಿ ದೊಡ್ಡ ಬ್ರಹ್ಮಾಸ್ತ್ರ.. ಏನದು?

Share :

Published June 29, 2024 at 5:32pm

  ಇಂದು ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ ಟಿ20 ವಿಶ್ವಕಪ್​ ಫೈನಲ್

  ಬಾರ್ಬಡೋಸ್‌ ಮೈದಾನದಲ್ಲಿ ನಡೆಯಲಿರೋ ಹೈವೋಲ್ಟೇಜ್‌ ಮ್ಯಾಚ್​​..!

  ಟ್ರೋಫಿ ಗೆಲ್ಲಲು ಟೀಮ್​ ಇಂಡಿಯಾದ ಈ ಮೂವರು ಮಿಂಚಲೇಬೇಕಿದೆ!

ಇಂದು ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 2024ರ ಟಿ20 ವಿಶ್ವಕಪ್​ ಫೈನಲ್​ ಪಂದ್ಯ ನಡೆಯಲಿದೆ. ರಾತ್ರಿ 8 ಗಂಟೆಗೆ ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯಲಿರೋ ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಪಣತೊಟ್ಟಿದೆ. ಈ ಸಲ ಫೈನಲ್​ ಗೆದ್ದು ಟಿ20 ವಿಶ್ವಕಪ್​​ ಎತ್ತಿ ಹಿಡಿಯಲು ಟೀಮ್​ ಇಂಡಿಯಾದ ಈ ಮೂವರು ಆಟಗಾರರು ಮಿಂಚಲೇಬೇಕಿದೆ.

ರೋಹಿತ್‌ ಶರ್ಮಾ

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ. ಇವರು 2024ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೌತ್​ ಆಫ್ರಿಕಾ ತಂಡವನ್ನು ಕಾಡಲಿದ್ದಾರೆ. ರೋಹಿತ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆರಂಭದಿಂದಲೇ ಅಗ್ರೆಸ್ಸಿವ್​​ ಆಟ ಆಡಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ 70 ರನ್​ ಗಳಿಸಿದ್ರೆ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲೋದು ಗ್ಯಾರಂಟಿ.

ಕುಲ್ದೀಪ್​ ಯಾದವ್​​

ಟಿ20 ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಸೌತ್​ ಆಫ್ರಿಕಾ ತಂಡಕ್ಕೆ ಕಾಡಲಿರೋ ಮತ್ತೋರ್ವ ಆಟಗಾರ ಕುಲ್ದೀಪ್​ ಯಾದವ್. ಕುಲ್ದೀಪ್​​ ಯಾದವ್​ ತನ್ನ ಮಾರಕ ಸ್ಪಿನ್​​ ಬೌಲಿಂಗ್​ನಿಂದಲೇ ಸೌತ್​ ಆಫ್ರಿಕಾಗೆ ತೊಂದರೆ ನೀಡಬಹುದು. ಏಡನ್ ಮಾರ್ಕ್ರಮ್​, ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ರೀತಿಯ ಆಟಗಾರರಿಗೆ ಕುಲ್ದೀಪ್​​ ಬೇಕೇ ಬೇಕು.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಭಾರತದ ಸ್ಟಾರ್‌ ವೇಗಿ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಸೌತ್​ ಆಫ್ರಿಕಾದ ಆಟಗಾರರಿಗೆ ಬೂಮ್ರಾ ಖೆಡ್ಡ ತೋಡಲಿದ್ದಾರೆ. ಬುಮ್ರಾ ಆರಂಭ ಮತ್ತು ಕೊನೆಯಲ್ಲಿ ವಿಕೆಟ್‌ಗಳನ್ನು ಕಬಳಿಸುವಲ್ಲಿ ಪ್ರವೀಣರು.

ಇದನ್ನೂ ಓದಿ: VIDEO: ಕೊಹ್ಲಿ ನಂತರ ಗಳಗಳನೆ ಕಣ್ಣೀರಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೌತ್​​ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತದ ಬಳಿ ಇದೆ ಅತಿ ದೊಡ್ಡ ಬ್ರಹ್ಮಾಸ್ತ್ರ.. ಏನದು?

https://newsfirstlive.com/wp-content/uploads/2024/06/Rohit-sharma-10.jpg

Load More