ವಿಶ್ವಕಪ್ಗೆ ಜಬರ್ದಸ್ತ್ ಟೀಮ್! 15 ಮಂದಿಗೆ ಮಣೆ ಹಾಕಿದ ಬಿಸಿಸಿಐ
ಟಾಪ್ ಕ್ಲಾಸ್ ಓಪನರ್ಸ್ ಜತೆ ಸ್ಟ್ರಾಂಗ್ ಮಿಡಲ್ ಆರ್ಡರ್ ಕೂಡ ಇದೆ!
ಆಲ್ರೌಂಡರ್ ಅಸ್ತ್ರ! ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್ ಸಾಥ್!
ಏಷ್ಯಾ ಕಪ್ ರಣಾಂಗಣದಲ್ಲಿ ಭಾರತದ ಕ್ರಿಕೆಟ್ ಕಲಿಗಳು ಸೆಣಸಾಟ ನಡೆಸುತ್ತಿದ್ದಾರೆ.. ಈ ಮಧ್ಯೆ ಮತ್ತೊಂದು ಸಮರಕ್ಕೆ ಸೆಲೆಕ್ಷನ್ ಕಮಿಟಿ ಕಹಳೆ ಮೊಳಗಿಸಿದೆ.. ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ಪರ್ಫೆಕ್ಟ್ ಆ್ಯಂಡ್ ಬೆಸ್ಟ್ ಕಾಂಬಿನೇಷನ್ಗೆ ಮಣೆ ಹಾಕಲಾಗಿದೆ.
ಸದ್ಯ ನಡೆಯುತ್ತಿರೋ ಏಷ್ಯಾಕಪ್ ಸಮರದಲ್ಲಿ ಸೆಣಸಾಟ ನಡೆಸುತ್ತಿರೋ ಭಾರತದ ಕ್ರಿಕೆಟ್ ತಂಡಕ್ಕೆ ಮತ್ತೊಂದು ಮಹಾಸಮರದ ಮುನ್ನುಡಿ ಬರೆದಿದೆ. ಏಕದಿನ ವಿಶ್ವಕಪ್ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಮಿಷನ್-23ರ ಏಕದಿನ ವಿಶ್ವಕಪ್ ಗೆಲ್ಲೋಕೆ 15 ಮಂದಿ ರಣಕಲಿಗಳನ್ನ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಮೆಗಾ ಟೂರ್ನಿಯಲ್ಲಿ ಸೆಣಸಾಡಲು 7 ಮಂದಿ ಬ್ಯಾಟ್ಸ್ಮನ್, ತಲಾ ನಾಲ್ವರು ಆಲ್ರೌಂಡರ್ಸ್ ಹಾಗೂ ವೇಗಿಗಳಿಗೆ ತಂಡದಲ್ಲಿ ಚಾನ್ಸ್ ನೀಡಿದೆ.
ಜಬರ್ದಸ್ತ್ ಟೀಂ.. 15 ಮಂದಿಗೆ ಮಣೆ!
ಏಷ್ಯಾಕಪ್ ತಂಡದಲ್ಲಿನ 18 ಆಟಗಾರರ ಪೈಕಿ ಸದ್ಯ 15 ಮಂದಿಗೆ ಏಕದಿನ ವಿಶ್ವಕಪ್ನಲ್ಲಿ ಸೆಲೆಕ್ಷನ್ ಕಮಿಟಿ ಮಣೆಹಾಕಿದೆ. ವಿಶ್ವಕಪ್ ಗೆಲ್ಲುವ ಭರವಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿರೋ ಭಾರತ 15 ಬಲಿಷ್ಟರ ತಂಡ ಕಟ್ಟಿಕೊಂಡು ಸಮರಕ್ಕಿಳಿಯಲು ಸಜ್ಜಾಗಿದೆ. ಏಕದಿನ ವಿಶ್ವಕಪ್ಗೆ ತಂಡದ ನಾಯಕತ್ವವನ್ನ ರೋಹಿತ್ ಶರ್ಮಾ ಹೆಗಲಿಗೆ ವಹಿಸಲಾಗಿದೆ.
ಟಾಪ್ ಕ್ಲಾಸ್ ಓಪನರ್ಸ್.. ಸ್ಟ್ರಾಂಗ್ ಮಿಡಲ್ ಆರ್ಡರ್!
ಕಳೆದ 2019ರ ಏಕದಿನ ವಿಶ್ವಕಪ್ಗೆ ಹೋಲಿಸಿದ್ರೆ, ಈ ಬಾರಿಯ ಟಾಪ್ ಆರ್ಡರ್ ಮತ್ತಷ್ಟು ಬಲಿಷ್ಠವಾಗಿದೆ. ಟಾಪ್ ಕ್ಲಾಸ್ ಆರಂಭಿಕರನ್ನೇ ಹೊಂದಿರುವ ಟೀಮ್ ಇಂಡಿಯಾ, ಮಿಡಲ್ ಆರ್ಡರ್ನಲ್ಲೂ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ರಂಥ ಕ್ಲಾಲಿಟಿ ಬ್ಯಾಟ್ಸ್ಮನ್ಗಳನ್ನ ಹೊಂದಿದೆ.
ವಿಕೆಟ್ ಕೀಪರ್ ವಿಚಾರದಲ್ಲೂ ಸೆಲೆಕ್ಷನ್ ಕಮಿಟಿ ಎಚ್ಚರದ ಹೆಜ್ಜೆ ಇಟ್ಟಿದೆ. ಈ ಬಾರಿ ಇಶಾನ್ ಕಿಶನ್ ಆ್ಯಂಡ್ ಕೆ.ಎಲ್.ರಾಹುಲ್ ಇಬ್ಬರು ವಿಕೆಟ್ ಕೀಪರ್ಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ಫ್ಯಾಕ್ಟ್ ಓಪನರ್ಗಳಾಗಿ ಬ್ಯಾಟ್ ಬೀಸಬಲ್ಲ ಇವರು, ಮಿಡಲ್ ಆರ್ಡರ್ನಲ್ಲೂ ಮ್ಯಾಚ್ ವಿನ್ನರ್ಗಳಾಗುವ ಸಾಧ್ಯತೆ ಇದೆ.
ಕಳೆದ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಡೆಪ್ತ್ ಇಲ್ಲವೆಂಬ ಕೊರಗು ಸದಾ ಕೇಳ್ತಿತ್ತು.. ಇದೀಗ ಇದಕ್ಕೆ ಮದ್ದು ನೀಡುವ ಸಲುವಾಗಿಯೇ ನಾಲ್ವರು ಆಲ್ರೌಂಡರ್ಗಳನ್ನ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಸೆಲಕ್ಷನ್ ಕಮಿಟಿ ಮುಂದಾಗಿದೆ.
ಆಲ್ರೌಂಡರ್ ಅಸ್ತ್ರ!
ಆಲ್ರೌಂಡರ್ಗಳಾಗಿ ಹಾರ್ದಿಕ್-ಜಡೇಜಾ ಜೊತೆಗೆ ಶಾರ್ದೂಲ್-ಅಕ್ಷರ್ಗೂ ಮಣೆ ಹಾಕಲಾಗಿದೆ. ಈ ನಾಲ್ವರ ಪೈಕಿ ಮೂವರು ಪ್ಲೇಯಿಂಗ್-XIನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ.. ತಂಡದಲ್ಲಿ ಕಾಣಿಸಿಕೊಳ್ತಿರು ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಸಹ ಸ್ಥಾನ ಪಡೆದಿದ್ದಾರೆ.
ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್ ಸಾಥ್!
ಟೀಮ್ ಇಂಡಿಯಾದ ವೇಗದ ಬೌಲಿಂಗ್ ಡಿಪಾರ್ಟ್ಮೆಂಟ್, ಈ ಹಿಂದಿಗಿಂತ ಸಖತ್ ಸ್ಟ್ರಾಂಗ್ ಆಗಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಒಳಗೊಂಡ ತ್ರಿಮೂರ್ತಿ ವೇಗಿಗಳ ಸಾಮರ್ಥ್ಯವಿದೆ.. ಇವರ ಜೊತೆಗೆ ಸ್ಪಿನ್ ಆಲ್ರೌಂಡರ್ಗಳು ಮಿಂಚಿದ್ರೆ, ಟೀಮ್ ಇಂಡಿಯಾ ವಿಶ್ವಕಪ್ ಕನಸು ನನಸಾಗೋದು ಗ್ಯಾರಂಟಿ.
ಒಟ್ನಲ್ಲಿ 15 ಮಂದಿ ಆಟಗಾರರ ತಂಡ ಪೇಪರ್ ಮೇಲೆ ಸಖತ್ ಸ್ಟ್ರಾಂಗ್ ಆಗಿದೆ.. ನಿರೀಕ್ಷೆಯಂತೆ ರಣಾಂಗಣದಲ್ಲಿ ಹುಲಿಗಳಂತೆ ಘರ್ಜಿಸಿದ್ರೆ, ಭಾರತ ವಿಶ್ವಕಪ್ ಗೆಲ್ಲೋದ್ರಲ್ಲಿ ಎರಡು ಮಾತೇ ಇಲ್ಲ ಅನ್ನೋ ಮಾತು ಅಭಿಮಾನಿಗಳ ಬಳಗದಲ್ಲಿ ಕೇಳಿ ಬರ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ