newsfirstkannada.com

ರೋಚಕ ಪಂದ್ಯ ಗೆದ್ದು ಬೀಗಿದ ಟೀಮ್​ ಇಂಡಿಯಾ.. ಟಿ20 ವಿಶ್ವಕಪ್​ ನಮ್ದೇ!

Share :

Published June 20, 2024 at 11:49pm

    ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್‌ ಕೆನ್ಸಿಂಗ್ಟನ್ ಓವಲ್‌ನಲ್ಲಿ ರೋಚಕ ಪಂದ್ಯ!

    ರೋಚಕ ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು

    ಭಾರತ ತಂಡದ ವಿರುದ್ಧ ಹೀನಾಯ ಸೋಲು ಕಂಡ ಅಫ್ಘಾನ್​​ ಕ್ರಿಕೆಟ್​​ ಟೀಮ್​​

ಇಂದು ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್‌ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರ ಆರಂಭಿಕ ಪಂದ್ಯದಲ್ಲಿ ಅಫ್ಘಾನ್ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ಟೀಮ್​ ಇಂಡಿಯಾ ನೀಡಿದ ಬೃಹತ್​​ ರನ್​ಗಳ ಬೆನ್ನತ್ತಿದ ಅಫ್ಘಾನ್​ ತಂಡವು ನಿಗದಿತ 20 ಓವರ್​ಗಳಲ್ಲಿ 134 ರನ್​ಗಳಿಗೆ ಆಲೌಟ್​ ಆಗಿದೆ. ಅಫ್ಘಾನ್​ ತಂಡದ ಪರ ಗುರ್ಬಾಜ್​ 11, ನಯಾಬ್​ 17, ಓಮರ್​ಝೈ 26, ನೂರ್​ 12 ರನ್​ ಗಳಿಸಿದ್ರು. ಟೀಮ್​ ಇಂಡಿಯಾ ಪರ ಬೂಮ್ರಾ ಮತ್ತು ಅರ್ಷ್​ದೀಪ್​​ ಸಿಂಗ್​​ ತಲಾ 3 ವಿಕೆಟ್​ ಪಡೆದ್ರು. ಅಫ್ಘಾನ್​​ ತಂಡ ಟೀಮ್​ ಇಂಡಿಯಾ ವಿರುದ್ಧ 47 ರನ್​ಗಳಿಂದ ಸೋತಿದೆ.

ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಕೊಹ್ಲಿ 24, ಪಂತ್​ 20 ರನ್​ ಗಳಿಸಿದ್ರು. ಸೂರ್ಯಕುಮಾರ್​ ಯಾದವ್​​ ಕೇವಲ 28 ಬಾಲ್​ನಲ್ಲಿ 3 ಸಿಕ್ಸರ್​​, 5 ಫೋರ್​​ ಸಮೇತ 53 ರನ್​ ಸಿಡಿಸಿದ್ರು. ಹಾರ್ದಿಕ್​ ಪಾಂಡ್ಯ 32, ಅಕ್ಷರ್​ ಪಟೇಲ್​​ 12 ರನ್​ ಗಳಿಸಿದ್ರು. ಟೀಮ್​ ಇಂಡಿಯಾ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 181 ರನ್​ ಕಲೆ ಹಾಕಿತ್ತು.

ಇದನ್ನೂ ಓದಿ ಓದಿ: ಶ್ರೇಯಸ್​ ಅಯ್ಯರ್​ ಟೀಮ್​ ಇಂಡಿಯಾದ ಮುಂದಿನ ಕ್ಯಾಪ್ಟನ್​​​.. ಏನಿದು ಇನ್​ಸೈಡ್​ ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಚಕ ಪಂದ್ಯ ಗೆದ್ದು ಬೀಗಿದ ಟೀಮ್​ ಇಂಡಿಯಾ.. ಟಿ20 ವಿಶ್ವಕಪ್​ ನಮ್ದೇ!

https://newsfirstlive.com/wp-content/uploads/2024/06/Rohit-Bumrah.jpg

Load More