newsfirstkannada.com

ಕೊಹ್ಲಿ-ಜಡ್ಡು ಕಮಾಲ್​​.. ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ 243 ರನ್​ ಭರ್ಜರಿ ಜಯ!

Share :

05-11-2023

    ಸೌತ್​ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

    ಜಡೇಜಾ, ಶಮಿ, ಕುಲ್ದೀಪ್​ ಯಾದವ್​ ಫುಲ್​ ಕಮಾಲ್​​

    ರೋಚಕ ಪಂದ್ಯದಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಜಯ

ಇಂದು ಕೋಲ್ಕತ್ತಾದ ಈಡನ್​ ಗಾರ್ಡನ್​ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ.

ಟೀಂ ಇಂಡಿಯಾ ನೀಡಿದ 327 ರನ್​​ಗಳ ಬೃಹತ್​​ ಗುರಿಯನ್ನು ಬೆನ್ನತ್ತಿದ ಸೌತ್​ ಆಫ್ರಿಕಾ ತಂಡ ಕೇವಲ 83 ರನ್​ಗೆ ಆಲೌಟ್​ ಆಗಿದೆ. ಟೀಂ ಇಂಡಿಯಾದ ಪರ ರವೀಂದ್ರ ಜಡೇಜಾ 5, ಶಮಿ ಮತ್ತು ಕುಲ್ದೀಪ್​ ಯಾದವ್​​ ತಲಾ 2, ಮೊಹಮ್ಮದ್​ ಸಿರಾಜ್​​​ ವಿಕೆಟ್​ಗಳು ತೆಗೆದುಕೊಂಡಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುತ್ತಿರೋ ಟೀಂ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಆಡಿದ್ದು ಕೇವಲ 24 ಬಾಲ್​​. ಇನ್ನೂ ಕೇವಲ 24 ಬಾಲ್​ನಲ್ಲಿ ಬರೋಬ್ಬರಿ 40 ರನ್​ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾಗೆ ಗುಡ್​ ಸ್ಟಾರ್ಟ್​ ಕೊಟ್ಟರು.

2 ಬಿಗ್​ ಸಿಕ್ಸರ್​​, ಬರೋಬ್ಬರಿ 6 ಫೋರ್​ ಸಿಡಿಸಿದ ರೋಹಿತ್​ ಶರ್ಮಾ ಅವರ ಸ್ಟ್ರೈಕ್​​ ಇನ್ನಿಂಗ್ಸ್​ ಉದ್ಧಕ್ಕೂ 150ಕ್ಕೂ ಹೆಚ್ಚು ಇತ್ತು. ಸಿಡಿಲಿಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದ ರೋಹಿತ್​ಗೆ ಫುಲ್​ ಸ್ಟಾಪ್​ ಇಟ್ಟಿದ್ದು ರಬಾಡ. ರೋಹಿತ್​​ ರಬಾಡ ಬೌಲಿಂಗ್​ನಲ್ಲಿ ಬಾವುಮಾಗೆ ಕ್ಯಾಚ್​​ ನೀಡಿ ಮೈದಾನದಿಂದ ಹೊರ ನಡೆದರು.

ಬ್ಯಾಕ್​ ಟು ಬ್ಯಾಕ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ ಶ್ರೇಯಸ್​ ಅಯ್ಯರ್​ ವಿರಾಟ್​ ಕೊಹ್ಲಿಗೆ ಸಾಥ್​ ನೀಡಿದ್ರು. ಕಠಿಣ ಪಿಚ್​ನಲ್ಲಿ ತಾನು ಎದುರಿಸಿದ 87 ಬಾಲ್​ನಲ್ಲಿ 77 ರನ್​ ಸಿಡಿಸಿದ್ದಾರೆ. ಅದರಲ್ಲೂ 2 ಬಿಗ್​ ಸಿಕ್ಸರ್​​, 7 ಫೋರ್​ ಬಾರಿಸಿದ್ದಾರೆ.

ಕೊನೆವರೆಗೂ ಕ್ರೀಸ್​ನಲ್ಲೇ ಇದ್ದ ವಿರಾಟ್​ ಕೊಹ್ಲಿ 121 ಬಾಲ್​ನಲ್ಲಿ 10 ಫೋರ್​ ಸಮೇತ 101 ರನ್​ ಚಚ್ಚಿದ್ರು. ಈ ಮೂಲಕ ಹೊಸ ದಾಖಲೆ ಬರೆದರು. ಸೂರ್ಯಕುಮಾರ್​ ಯಾದವ್​ 22, ಜಡೇಜಾ 29 ರನ್​ ಸಿಡಿಸಿದ ಪರಿಣಾಮ ಟೀಂ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್​ಗೆ 326 ರನ್​ ಪೇರಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ-ಜಡ್ಡು ಕಮಾಲ್​​.. ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ 243 ರನ್​ ಭರ್ಜರಿ ಜಯ!

https://newsfirstlive.com/wp-content/uploads/2023/11/IND.jpg

Load More