newsfirstkannada.com

3ನೇ ಪಂದ್ಯದಲ್ಲೂ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು.. ಜಿಂಬಾಬ್ವೆಗೆ ಹೀನಾಯ ಸೋಲು!

Share :

Published July 10, 2024 at 8:50pm

    ಹರಾರೆ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ

    ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ 23 ರನ್​​ಗಳ ಗೆಲುವು..!

    ಟೀಮ್​ ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡ

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಟೀಮ್​ ಇಂಡಿಯಾ 23 ರನ್​ಗಳ ಭರ್ಜರಿ ಗೆಲುವು ಸಿಕ್ಕಿದೆ.

ಟೀಮ್​ ಇಂಡಿಯಾ 183 ರನ್​ಗಳ ಬಿಗ್​ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ ತಂಡದ ಪರ ಡಿಯೋನ್ ಮೈಯರ್ಸ್ 49 ಬಾಲ್​​ನಲ್ಲಿ 1 ಸಿಕ್ಸರ್​​, 7 ಫೋರ್​ ಸಮೇತ 65 ರನ್​ ಚಚ್ಚಿದ್ರು. ಕ್ಲೈವ್ ಮಂಡೆ 37 ರನ್​ ಗಳಿಸಿದ್ದು ಉಳಿದ ಎಲ್ಲರೂ ಕೈ ಕೊಟ್ಟರು. ಇದರ ಪರಿಣಾಮ 6 ವಿಕೆಟ್​ ನಷ್ಟಕ್ಕೆ ಜಿಂಬಾಬ್ವೆ ಕೇವಲ 159 ರನ್​ ಗಳಿಸಿ ಸೋತಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಶುಭ್ಮನ್​ ಗಿಲ್​ ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಅತ್ಯುತ್ತಮವಾಗಿ ಬ್ಯಾಟ್​ ಬೀಸಿದ್ರು. ತಾನು ಆಡಿದ 49 ಬಾಲ್​ನಲ್ಲಿ 3 ಸಿಕ್ಸರ್​​, 7 ಫೋರ್​ ಸಮೇತ 66 ರನ್​​ ಸಿಡಿಸಿದ್ರು.

ಇವರಿಗೆ ಸಾಥ್​ ಕೊಟ್ಟ ಯಶಸ್ವಿ ಜೈಸ್ವಾಲ್​​ 2 ಸಿಕ್ಸರ್​​, 4 ಫೋರ್​​ ಸಮೇತ 36 ರನ್​​ ಚಚ್ಚಿದ್ರು. ಅಭಿಷೇಕ್​ ಶರ್ಮಾ ಕೇವಲ 10 ರನ್​ಗೆ ವಿಕೆಟ್​ ಒಪ್ಪಿಸಿದ್ರು. ರುತುರಾಜ್​​​ ಗಾಯಕ್ವಾಡ್​ ಕೇವಲ 28 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 4 ಫೋರ್​​ನೊಂದಿಗೆ 49 ರನ್​​​ ಕಲೆ ಹಾಕಿದ್ರು. ಬಳಿಕ ಬಂದ ಸಂಜು ಸ್ಯಾಮ್ಸನ್​ 12 ರನ್​​​ ಬಾರಿಸಿದ್ರು. ಇದರ ಪರಿಣಾಮ ಟೀಮ್​ ಇಂಡಿಯಾ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 182 ರನ್​​ ಗಳಿಸಿತ್ತು.

ಇದನ್ನೂ ಓದಿ: ಅಭಿಷೇಕ್​​ ಅವಕಾಶ ಕಿತ್ತುಕೊಂಡ ಶುಭ್ಮನ್​ ಗಿಲ್​​.. ಕ್ಯಾಪ್ಟನ್​ ವಿರುದ್ಧ ಬಹಿರಂಗ ಆಕ್ರೋಶ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

3ನೇ ಪಂದ್ಯದಲ್ಲೂ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು.. ಜಿಂಬಾಬ್ವೆಗೆ ಹೀನಾಯ ಸೋಲು!

https://newsfirstlive.com/wp-content/uploads/2024/07/Team-India_ZIM.jpg

Load More