newsfirstkannada.com

ಲಂಕಾ ವಿರುದ್ಧ ಭರ್ಜರಿ ಜಯ; 8ನೇ ಬಾರಿ ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ

Share :

17-09-2023

  ಲಂಕಾ ವಿರುದ್ಧ ರೋಹಿತ್​ ಪಡೆಗೆ ಭರ್ಜರಿ ಜಯ

  8ನೇ ಬಾರಿ ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ

  ಏಷ್ಯಾಕಪ್​​ ಗೆದ್ದು ಇತಿಹಾಸ ಬರೆದ ರೋಹಿತ್​ ಪಡೆ!

ಇಂದು ಕೊಲಂಬೋ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023 ಏಷ್ಯಾಕಪ್​​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಲಂಕಾ ನೀಡಿದ 50 ರನ್​ಗಳ ಕಡಿಮೆ ಮೊತ್ತದ ಗುರಿ ಬೆನ್ನತ್ತಿದ ಟೀ ಇಂಡಿಯಾದ ಪರ ಇಶಾನ್​ ಕಿಶನ್​ 23, ಶುಭ್ಮನ್​​ ಗಿಲ್​​ 27 ರನ್​ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 10 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ಟೀಂ ಇಂಡಿಯಾ ಬೌಲರ್ಸ್​ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 15.2 ಓವರ್​ನಲ್ಲಿ 50 ರನ್​ಗೆ ಆಲೌಟ್​ ಆಗಿತ್ತು.

ಟೀಂ ಇಂಡಿಯಾದ ಸ್ಟಾರ್​ ಬೌಲರ್​​​ ಮೊಹಮ್ಮದ್​​ ಸಿರಾಜ್​​​ 7 ಓವರ್​​ಗಳಲ್ಲಿ ಕೇವಲ 21 ರನ್​​​ ನೀಡಿ 6 ವಿಕೆಟ್​​ ತೆಗೆದರು. ಹಾರ್ದಿಕ್​ ಪಾಂಡ್ಯ 2.2 ಓವರ್​​ನಲ್ಲಿ 3 ರನ್​ ನೀಡಿ 3 ವಿಕೆಟ್​​​ ಕಿತ್ತರು. ಜಸ್​ಪ್ರಿತ್​ ಬೂಮ್ರಾ 5 ಓವರ್​​ಗಳಲ್ಲಿ 23 ರನ್​ ಕೊಟ್ಟು 1 ವಿಕೆಟ್​ ಕಿತ್ತರು.

ಇನ್ನು, ಶ್ರೀಲಂಕಾದ ಪರ ಕುಶಲ್​ ಮೆಂಡೀಸ್​ 17, ದುಶನ್​ ಹೇಮಂತಾ 13, ದುನಿತ್​ ವೆಲ್ಲಾಲಗೆ 8 ರನ್​​ ಗಳಿಸಿದರು. ಐದು ಬ್ಯಾಟ್ಸಮನ್​​ಗಳು ಡಕೌಟ್​​ ಆದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಕಾ ವಿರುದ್ಧ ಭರ್ಜರಿ ಜಯ; 8ನೇ ಬಾರಿ ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ

https://newsfirstlive.com/wp-content/uploads/2023/09/Asia-Cup.jpg

Load More