ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ಕೊನೇ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ
ಬೌಲಿಂಗ್ನಲ್ಲೂ ಕ್ಯಾಪ್ಟನ್ ರೋಹಿತ್, ಕೊಹ್ಲಿ ಕಮಾಲ್
ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಐಸಿಸಿ ವಿಶ್ವಕಪ್ ಕೊನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 160 ರನ್ಗಳ ಪ್ರಚಂಡ ಗೆಲುವು ಸಾಧಿಸಿದೆ.
ಇನ್ನು, ಟೀಂ ಇಂಡಿಯಾ ನೀಡಿದ 411 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ 47.5 ಓವರ್ನಲ್ಲಿ 250 ರನ್ಗೆ ಆಲೌಟ್ ಆಗಿದೆ. ಮ್ಯಾಕ್ಸ್ ಓಡೋಡ್ 30, ಅಕ್ಕರ್ಮನ್ 35, ಸಿಬ್ರ್ಯಾಂಡ್ 45, ತೇಜ ನಿಡಮನೂರು 54 ರನ್ ಗಳಿಸಿದ್ರು. ಭಾರತ ತಂಡದ ಪರ ಬೂಮ್ರಾ, ಸಿರಾಜ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ಗಳು ತೆಗೆದರು. ಕೊಹ್ಲಿ, ರೋಹಿತ್ ಕೂಡ ತಲಾ 1 ವಿಕೆಟ್ ಪಡೆದರು.
ಟಾಸ್ ಗೆದ್ದ ರೋಹಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿತ್ತು. 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ದೊಡ್ಡ ಮೊತ್ತ ಸಂಪಾದಿಸುವ ಮೂಲಕ ನೆದರ್ಲ್ಯಾಂಡ್ಗೆ ಜಯದ ಸವಾಲೊಡ್ಡಿತ್ತು.
ಶ್ರೇಯಸ್ ಐಯ್ಯರ್ 94 ಎಸೆತಕ್ಕೆ 128 ರನ್ ಬಾರಿಸುವ ಮೂಲಕ ಕ್ರಿಕೆಟ್ ಪ್ರಿಯರನ್ನು ಸಂತಸದಲ್ಲಿ ತೇಲಾಡುವಂತೆ ಮಾಡಿದ್ದಾರೆ.
10 ಫೋರ್, 5 ಸಿಕ್ಸ್ ಬಾರಿಸುವ ಮೂಲಕ ಫ್ಯಾನ್ಸ್ ಮನತಣಿಸಿದ್ದಾರೆ. ರಾಹುಲ್ ಕೂಡ ತವರಿನಲ್ಲಿ ತನ್ನ ಶಕ್ತಿ ಪ್ರದರ್ಶನ ತೋರಿಸಿದ್ದು, 64 ಎಸೆತಕ್ಕೆ 4 ಸಿಕ್ಸ್, 11 ಫೋರ್ ಬಾರಿಸುವ ಮೂಲಕ 102 ರನ್ ಬಾರಿಸಿದ್ದಾರೆ.
ಇನ್ನು ಆರಂಭಿಕ ಆಟಗಾರ ರೋಹಿತ್ ಶರ್ಮಾ 61 ರನ್ ಬಾರಿಸುವ ಮೂಲಕ ಬಾಸ್ ದೆ ಲೇಡೆ ಬೌಲ್ಗೆ ವಿಕೆಟ್ ಒಪ್ಪಿಸಿದರು. ಬೆಟ್ಟದಷ್ಟು ನಿರೀಕ್ಷೆ ಹೊತ್ತುಕೊಂಡಿದ್ದ ಕಿಂಗ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅರ್ಧ ಶತಕಕ್ಕೆ ಬ್ಯಾಟಿಂಗ್ ನಿಲ್ಲಿಸಿದರು. ಒಟ್ಟಿನಲ್ಲಿ ಟೀಂ ಇಂಡಿಯಾ 410 ರನ್ ಗಳಿಸಿ ಬೃಹತ್ ಟಾರ್ಗೆಟ್ ನೀಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ