newsfirstkannada.com

ಸತತ 10 ಪಂದ್ಯ ಗೆದ್ದ ರೋಹಿತ್ ಪಡೆ ಜರ್ನಿ ರೋಚಕ; ಟೀಂ ಇಂಡಿಯಾಗೆ ಇಂದು ರಿಯಲ್ ಚಾಲೆಂಜ್..!

Share :

19-11-2023

  ಬಲಿಷ್ಟ ತಂಡಗಳನ್ನ ಬಗ್ಗು ಬಡಿದ ಭಾರತ

  ಆಡಿದ ಪಂದ್ಯಗಳಲ್ಲೆಲ್ಲಾ ಭಾರತದ್ದೇ ಆರ್ಭಟ

  ಭಾರತದ ಜಯದ ಓಟಕ್ಕೆ ಬ್ರೇಕ್​ ಹಾಕೋರಿಲ್ಲ..!

ಇಂಡೋ-ಆಸಿಸ್​ ಸೆಮಿಫೈನಲ್​ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ. ನಮೋ ಮೈದಾನದಲ್ಲಿ ನಡೆಯೋ ಫೈನಲ್​ ಫೈಟ್​ನಲ್ಲಿ ಆಸ್ಟ್ರೇಲಿಯಾ ಹೆಡೆಮುರಿ ಕಟ್ಟಲು ರೋಹಿತ್​ ಸೈನ್ಯ ತುದಿಗಾಲಲ್ಲಿ ನಿಂತಿದೆ. ಇಂದಿನ ಮೆಗಾ ಫೈಟ್​ನಲ್ಲಿ ಟೀಮ್​ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಫಿಕ್ಸ್​ ಆಗಿ ಬಿಟ್ಟಿದ್ದಾರೆ. ಟೀಮ್​ ಇಂಡಿಯಾ ಫೈನಲ್​ವರೆಗೆ ಸಾಗಿ ರೋಚಕ ಜರ್ನಿಯೇ ಈ ಕಾನ್ಫಿಡೆನ್ಸ್​ಗೆ ಕಾರಣ.

ಪಂದ್ಯ- ನಂ.1: ಆಸಿಸ್​ ವಿರುದ್ಧ 6 ವಿಕೆಟ್​ಗಳ ಜಯ

ಫೈನಲ್​ ಪಂದ್ಯದಲ್ಲಿ ಎದುರಾಳಿಯಾಗಿರೋ ಆಸ್ಟ್ರೇಲಿಯಾವನ್ನೇ ವಿಶ್ವಕಪ್​ ಮೆಗಾ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮೊದಲು ಬಗ್ಗು ಬಡಿದಿದ್ದು. ಚೆನ್ನೈನ ಚೆಪಾಕ್​ ಅಂಗಳದಲ್ಲಿ ಛಲದ ಹೋರಾಟ ನಡೆಸಿದ್ದ ಕೊಹ್ಲಿ-ರಾಹುಲ್​ ಭಾರತದ ವಿಜಯ ಪತಾಕೆ ಹಾರಿಸಿದ್ರು. 6 ವಿಕೆಟ್​ಗಳ ಜಯದೊಂದಿಗೆ ಟೂರ್ನಿಯಲ್ಲಿ ರೋಹಿತ್​ ಪಡೆ ಶುಭಾರಂಭ ಮಾಡಿತ್ತು.

ಪಂದ್ಯ- ನಂ.2: ಆಪ್ಘನ್​ ವಿರುದ್ಧ 8 ವಿಕೆಟ್​ಗಳ ಗೆಲುವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ದಂಗಲ್​ನಲ್ಲಿ ಟೀಮ್​ ಇಂಡಿಯಾ ಆಪ್ಘನ್​ ಪಡೆಯನ್ನ ಬಗ್ಗು ಬಡಿದಿತ್ತು. ರೋ‘ಹಿಟ್​’ ಆರ್ಭಟಕ್ಕೆ ಆಪ್ಘನ್​ ಪಡೆ ನಲುಗಿ ಹೋಗಿತ್ತು. ಆಲ್​​ರೌಂಡ್​ ಆಟವಾಡಿದ ಟೀಮ್​ ಇಂಡಿಯಾ 8 ವಿಕೆಟ್​ಗಳ ಭಾರಿ ಗೆಲುವು ದಾಖಲಿಸಿತ್ತು.

ಪಂದ್ಯ-ನಂ.3: ನಮೋ ಅಂಗಳದಲ್ಲಿ ಬದ್ಧವೈರಿಗಳ ಬೇಟೆ

ಇಂದು ಫೈನಲ್​ ಫೈಟ್​ ನಡೀತಿರೋ ನಮೋ ಅಂಗಳದಲ್ಲಿ ಟೀಮ್​ ಇಂಡಿಯಾ 3ನೇ ಲೀಗ್​ ಪಂದ್ಯವನ್ನಾಡಿತ್ತು. ಬದ್ಧವೈರಿ ಪಾಕ್​ ವಿರುದ್ಧದ ಹೈಪ್ರೆಶರ್​​ ಗೇಮ್​ನಲ್ಲಿ ರೋಹಿತ್​ ಸೈನ್ಯ ಹೈಲೆವೆಲ್​ ಆಟವಾಡಿತ್ತು. ಬರೋಬ್ಬರಿ 7 ವಿಕೆಟ್​ಗಳ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು.

ಪಂದ್ಯ-ನಂ.4: ಪುಣೆಯಲ್ಲಿ ಬಾಂಗ್ಲಾ ಟೈಗರ್ಸ್​ ಶಿಕಾರಿ

ಪುಣೆ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಟೀಮ್​ ಇಂಡಿಯಾ ಗೆಲುವಿನ ನಗಾರಿ ಬಾರಿಸಿತ್ತು. ಕಿಂಗ್​ ಕೊಹ್ಲಿಯ ಶಾಂದಾರ್​ ಶತಕದ ಬಲದಿಂದ ಭಾರತ 7 ವಿಕೆಟ್​​ಗಳ ಜಯ ಸಾಧಿಸಿತ್ತು.

ಪಂದ್ಯ-ನಂ.5: ಕಿವೀಸ್​ ಕಿವಿ ಹಿಂಡಿದ ರೋಹಿತ್​ ಸೈನ್ಯ

ಟೂರ್ನಿಯ 5ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಕಿವೀಸ್​ ಕಿವಿ ಹಿಂಡಿತು. ಧರ್ಮಶಾಲಾದಲ್ಲಿ ಸುನಾಮಿ ಎಬ್ಬಿಸಿದ ಮೊಹಮ್ಮದ್​ ಶಮಿ, ನ್ಯೂಜಿಲೆಂಡ್​​ ತಂಡಕ್ಕೆ ಶಾಕ್ ​ಟ್ರೀಟ್​ಮೆಂಟ್​ ನೀಡಿದ್ರು. ಬ್ಯಾಟಿಂಗ್​ನಲ್ಲಿ ಕಿಂಗ್​ ಕೊಹ್ಲಿ ಬ್ಲಾಕ್​ಕ್ಯಾಪ್ಸ್​ ಪಡೆಯನ್ನ ಕಾಡಿದ್ರು. ಭಾರತ 4 ವಿಕೆಟ್​ಗಳ ಅಂತರದಲ್ಲಿ ಜಯ ಸಾಧಿಸ್ತು.

ಪಂದ್ಯ-ನಂ.6: ಭಾರತದ ಆರ್ಭಟಕ್ಕೆ ತಬ್ಬಿಬ್ಬಾದ ಕ್ರಿಕೆಟ್​ ಜನಕರು

ಇಂಗ್ಲೆಂಡ್​ ವಿರುದ್ಧದ ಲೀಗ್​ ಫೈಟ್​ನಲ್ಲಿ ಟೀಮ್​ ಇಂಡಿಯಾ ಅತ್ಯಮೋಘ ಪರ್ಫಾಮೆನ್ಸ್​ ನೀಡ್ತು. ಮೊದಲು ಬ್ಯಾಟಿಂಗ್​ ಮಾಡಿ 229 ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿದ್ರೂ, ಬೌಲಿಂಗ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು,. ಬೂಮ್ರಾ, ಶಮಿಯ ಬೆಂಕಿ ಚೆಂಡುಗಳ ಮುಂದೆ ಆಂಗ್ಲರ ತರಗೆಲೆಗಳಂತೆ ಉದುರಿದ್ರು. ಕೇವಲ 129 ರನ್​ಗಳಿಗೆ ಇಂಗ್ಲೆಂಡ್​ ಗಂಟು ಮೂಟೆ ಕಟ್ತು.

ಪಂದ್ಯ-ನಂ.7: ಬೆಚ್ಚಿ ಬಿದ್ದು ಬೋನು ಸೇರಿದ ಸಿಂಹಳೀಯರು

ಲೀಗ್​ ಹಂತದಲ್ಲಿ ಟೀಮ್​ ಇಂಡಿಯಾ ಲಂಕನ್ನರನ್ನ ಭೇಟಿಯಾಡಿದ್ದನ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಭಾರತೀಯರ ಆರ್ಭಟಕ್ಕೆ ಸಿಂಹಳೀಯ ಪಡೆ ಬೋನು ಸೇರಿಬಿಡ್ತು. 358 ರನ್​ ಟಾರ್ಗೆಟ್​ ಬೆನ್ನತ್ತಿದ ಲಂಕನ್ನರು ಶಮಿ, ಸಿರಾಜ್​ ಸೆನ್ಸೇಷನಲ್​ ಸ್ಪೆಲ್​ಗೆ ತತ್ತರಿಸಿದ್ರು. ಕೇವಲ 55 ರನ್​ಗಳಿಗೆ ಆಲೌಟ್​ ಆದ್ರು. ಭಾರತ 302 ರನ್​ಗಳ ಜಯ ಸಾಧಿಸಿತು.

ಪಂದ್ಯ-ನಂ.8: ಕ್ರಿಕೆಟ್​ ಕಾಶಿಯಲ್ಲಿ ಸೌತ್​ ಆಫ್ರಿಕನ್ಸ್​ ಬೇಟೆ

ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್​ನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಟೀಮ್​ ಇಂಡಿಯಾ ಅಬ್ಬರದ ಪರ್ಫಾಮೆನ್ಸ್​ ನೀಡಿತು. ಬ್ಯಾಟಿಂಗ್​ನಲ್ಲಿ ಕಿಂಗ್​ ಕೊಹ್ಲಿ ಸೆಂಚುರಿ ಸಿಡಿಸಿ ಕಮಾಲ್​ ಮಾಡಿದ್ರೆ, ಬೌಲಿಂಗ್​ನಲ್ಲಿ ಜಡೇಜಾ ಜಾದೂ ಮಾಡಿದ್ರು. ಕೇವಲ 83 ರನ್​ಗಳಿಗೆ ಆಫ್ರಿಕನ್ಸ್​ ಆಲೌಟ್​ ಆದ್ರೆ, ಟೀಮ್​ ಇಂಡಿಯಾ 243 ರನ್​ಗಳ ದಿಗ್ವಿಜಯ ಸಾಧಿಸ್ತು.

ಪಂದ್ಯ-ನಂ.9: ಬೆಂಗಳೂರಲ್ಲಿ ನೆದರ್ಲೆಂಡ್​ ವಿರುದ್ಧ ಗೆಲುವಿನ ನಗಾರಿ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ನಿರೀಕ್ಷೆಯಂತೆ ಗೆಲುವು ದಾಖಲಿಸಿತು. ಶ್ರೇಯಸ್​​ ಅಯ್ಯರ್​, ಕನ್ನಡಿಗ ಕೆ.ಎಲ್​ ರಾಹುಲ್​ ಶತಕದ ನೆರವಿನಿಂದ 160 ರನ್​ಗಳ ನಿರಾಯಾಸ ಗೆಲುವು ಟೀಮ್​ ಇಂಡಿಯಾದ್ದಾಯ್ತು.

ಪಂದ್ಯ-ನಂ.10: ಸೆಮಿಸ್​​ ಸಮರದಲ್ಲಿ ಕಿವೀಸ್​ ಬಗ್ಗು ಬಡಿದ ಭಾರತ

ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ 2019ರ ಸೋಲಿನ ಸೇಡನ್ನು ತೀರಿಸಿಕೊಳ್ತು. ವಾಂಖೆಡೆ ವಾರ್​​ನಲ್ಲಿ ವಿರಾಟ್​ ಕೊಹ್ಲಿ ವಿಶ್ವ ದಾಖಲೆಯ 50ನೇ ಸೆಂಚುರಿ ಸಿಡಿಸಿದ್ರೆ ಶ್ರೇಯಸ್​ ಅಯ್ಯರ್​ ಕೂಡ ಸಾಲಿಡ್​ ಶತಕ ಚಚ್ಚಿದ್ರು. ಬೌಲಿಂಗ್​ನಲ್ಲಿ ಸೆನ್ಸೇಷನ್​​ ಸೃಷ್ಟಿಸಿದ ಶಮಿ 7 ವಿಕೆಟ್​ ಕಬಳಿಸಿ ಮಿಂಚಿದ್ರು. ಆಡಿದ 10ಕ್ಕೆ 10 ಪಂದ್ಯಗಳಲ್ಲಿ ಜಯ ಸಾಧಿಸಿದ ಟೀಮ್​ ಇಂಡಿಯಾದ ಕನಸು ನನಸಾಗಲು ಇನ್ನೊಂದೆ ಹೆಜ್ಜೆ ಬಾಕಿ. ಇಂದಿನ ಫೈನಲ್​ ಫೈಟ್​ನಲ್ಲೂ ಟೀಮ್​ ಇಂಡಿಯಾ ವಿಜಯ ಪತಾಕೆ ಹಾರಿಸಲಿ. ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿ ಅನ್ನೋದು ಅಭಿಮಾನಿಗಳ ಆಶಯ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸತತ 10 ಪಂದ್ಯ ಗೆದ್ದ ರೋಹಿತ್ ಪಡೆ ಜರ್ನಿ ರೋಚಕ; ಟೀಂ ಇಂಡಿಯಾಗೆ ಇಂದು ರಿಯಲ್ ಚಾಲೆಂಜ್..!

https://newsfirstlive.com/wp-content/uploads/2023/11/Team-India-3-1.jpg

Load More