ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ದಂಡೆಯಾತ್ರೆ
ತವರಿನಲ್ಲಿ ವಿಶ್ವಕಪ್ ಗೆಲ್ಲುವ ಫೇವರಿಟ್ಸ್ ಭಾರತ
ಈ ವಿಶ್ವಕಪ್ ಕೈಚೆಲ್ಲಿದರೆ ಕಾಯಬೇಕು ಹಲವು ವರ್ಷ
ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಬರೋಬ್ಬರಿ 12 ವರ್ಷಗಳು ಕಳೆದಿವೆ. ಆದ್ರೆ ಈ 12 ವರ್ಷಗಳ ಕಾಯುವಿಕೆಗೆ ಈ ಸಲ ಬ್ರೇಕ್ ಬೀಳಲಿದೆ. ಇದು ವಿಶ್ವಕಪ್ ಗೆಲುವಿಗೆ ಸಕಾಲ ಕೂಡ. ಅಕಸ್ಮಾತ್ ಈ ಸಲ ಎಡವಿದ್ರೆ ವಿಶ್ವಕಪ್ ಗೆಲ್ಲೋಕೆ ಹಲವು ವರ್ಷಗಳೇ ಕಾಯಬೇಕಾಗುತ್ತೆ.
ಏಕದಿನ ವಿಶ್ವಕಪ್ನಲ್ಲಿ ಅಕ್ಷರಶಃ ನಡೆಯುತ್ತಿರುವುದು ಟೀಮ್ ಇಂಡಿಯಾದ ದಂಡೆಯಾತ್ರೆ. ವೀರ ಸೈನಿಕರಂತೆ ಹೋರಾಡುತ್ತಾ ಗೆಲುವಿನ ರಣಕೇಕೆ ಹಾಕುತ್ತಿದೆ. ಬಲಿಷ್ಠ ತಂಡಗಳನ್ನ ಮಣ್ಣು ಮುಕ್ಕಿಸುತ್ತಾ ಸೋಲಿಲ್ಲದ ಸರಾದಾರನಾಗಿ ಮೆರೆಯುತ್ತಿದೆ. ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ಸ್ ಆಗಿ ಮುಂಚೂಣಿಯಲ್ಲಿದೆ. ಅಗ್ರಜನಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾಗೆ, ಇದು ವಿಶ್ವಕಪ್ ಗೆಲ್ಲೋಕೆ ಸಕಾಲ.
1983, 2011ರ ವಿಶ್ವಕಪ್ಗಿಂತ ಬೆಸ್ಟ್ ಟೀಮ್..!
1983 ಹಾಗೂ 2023ರ ಏಕದಿನ ವಿಶ್ವಕಪ್ಗೆ ಹೋಲಿಸಿದ್ರೆ ಈ ಬಾರಿಯ ಟೀಮ್ ಇಂಡಿಯಾ ಅತ್ಯುತ್ತಮವಾಗಿದೆ. ಪ್ರತಿ ಸ್ಲಾಟ್, ಪ್ರತಿ ಡಿಪಾರ್ಟ್ಮೆಂಟ್ನಲ್ಲೂ ಸಾಲಿಡ್ ಆಗಿ ಕಾಣ್ತಿರೋ ಟೀಮ್ ಇಂಡಿಯಾ ಈ ಬಾರಿಯ ಏಕದಿನ ವಿಶ್ವಕಪ್ ಗೆಲುವಿಗೆ ಅರ್ಹವಾಗಿದೆ.
ಬ್ಯಾಟಿಂಗ್ನಲ್ಲಿ ಟೀಮ್ ಇಂಡಿಯಾ ಬೊಂಬಾಟ್
ಟೀಮ್ ಇಂಡಿಯಾ ಬ್ಯಾಟಿಂಗ್ನಿಂದಲೇ ಗೆಲ್ಲಬೇಕು ಎಂಬ ಹಣೆಪಟ್ಟಿ ತೆಗೆದಿಟ್ಟಿದೆ. ಇದಕ್ಕೆ ಸಾಕ್ಷಿ.. ಪ್ರಸಕ್ತ ವಿಶ್ವಕಪ್ನಲ್ಲಿ ನೀಡಿರುವ ಪ್ರದರ್ಶನಗಳೇ ಆಗಿವೆ. ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ ಪ್ರತಿಯೊಬ್ಬರ ಕೊಡುಗೆ ನಿಜಕ್ಕೂ ಅವಿಸ್ಮರಣೀಯ.
ಸಂಘಟಿತ ಬೌಲಿಂಗ್ ದಾಳಿ.. ವಿಕೆಟ್ ಬೇಟೆಗೆ ಪೈಪೋಟಿ..!
ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿಯ ಡೆಡ್ಲಿ ಕಾಂಬಿನೇಷನ್ ಸಖತ್ ವರ್ಕೌಟ್ ಆಗ್ತಿದೆ. ಜೊತೆಗೆ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾರ ಮೋಡಿ ಗೆಲುವಿನ ದಡ ಸೇರಿಸ್ತಿದೆ. ನಾನಾ.. ನೀನಾ ಎಂಬಂತೆ ಬಿರುಗಾಳಿಯ ಬೌಲಿಂಗ್ ನಡೆಸ್ತಿರುವ ಬೌಲರ್ಗಳು, ವಿಕೆಟ್ ಬೇಟೆ ನಿಜಕ್ಕೂ ನೆಕ್ಸ್ಟ್ ಲೆವೆಲ್.. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಈ ಅಂಕಿಅಂಶಗಳು..
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಬೌಲರ್ಸ್
ಹೌದು! 6 ಪಂದ್ಯಗಳಿಂದನ ಯಾರ್ಕರ್ ಕಿಂಗ್ ಜಸ್ಪ್ರೀತ್, 14 ವಿಕೆಟ್ ಉರುಳಿಸಿದ್ರೆ, ಕುಲ್ದೀಪ್ 10 ವಿಕೆಟ್ ಬೇಟೆಯಾಡಿದ್ದಾರೆ. ಇದಲ್ಲಕ್ಕಿಂತ ಮಿಗಿಲಾಗಿ ಮೊಹಮ್ಮದ್ ಶಮಿ ಆಡಿದ 2 ಪಂದ್ಯಗಳಿಂದ 9 ವಿಕೆಟ್ ಉರುಳಿಸಿದ್ದಾರೆ. ಇದುವರೆಗೆ 6 ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ, 8 ವಿಕೆಟ್ ಉರುಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಕೂಡ ಡಾಮಿನೇಷನ್ ಪರ್ಫಾಮೆನ್ಸ್ ನೀಡ್ತಿದ್ದಾರೆ.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಟಾಪ್ ಕ್ಲಾಸ್ ಫೀಲ್ಡಿಂಗ್..!
ಬ್ಯಾಟಿಂಗ್, ಬೌಲಿಂಗ್ ಮಾತ್ರವೇ ಅಲ್ಲ. ಟೀಮ್ ಇಂಡಿಯಾದ ಫೀಲ್ಡಿಂಗ್ ಮರೆಯುವಂತೆಯೇ ಇಲ್ಲ. ಹಿಂದೆದ್ದು ಕಾಣದ ಅಟ್ಯಾಕಿಂಗ್ ಫೀಲ್ಡಿಂಗ್ ನಿಜಕ್ಕೂ ಎದುರಾಳಿಗಳನ್ನ ಒತ್ತಡಕ್ಕೆ ಸಿಲುಕಿಸಿದೆ. ಕಷ್ಟಕರ ಕ್ಯಾಚ್ಗಳನ್ನು ಸುಲಭವಾಗಿ ಬಾಚಿಕೊಳ್ತಿದ್ದಾರೆ. ಇದು ನಿಜಕ್ಕೂ ತಂಡಕ್ಕೆ ಬೋನಸ್.
ಸಿನೀಯರ್ಗಳ ಜವಾಬ್ದಾರಿಯುತ ಆಟ..!
ಪ್ರಸಕ್ತ ವಿಶ್ವಕಪ್ನಲ್ಲಿ ಮೇನ್ ರೋಲ್ ಪ್ಲೇ ಮಾಡ್ತಿರೋದೇ ಸಿನೀಯರ್ಗಳು. ತನ್ನ ಅನುಭವವನ್ನ ತಂಡಕ್ಕೆ ಧಾರೆ ಎಳೆಯುತ್ತಿರುವ ಆಟಗಾರರು ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ರೋಹಿತ್ ಶರ್ಮಾ.. ವಿರಾಟ್ ಕೊಹ್ಲಿ.. ಕೆ.ಎಲ್.ರಾಹುಲ್.. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿಯ ಆಟ ಅನ್ನೋದು ಮರೆಯುವಂತಿಲ್ಲ.
ಟೀಮ್ ಇಂಡಿಯಾ ಆಟಗಾರರ ಒಗ್ಗಟ್ಟಿನ ಜಪ..!
ಟೀಮ್ ಇಂಡಿಯಾದ ಶಕ್ತಿಯೇ ಒಗ್ಗಟ್ಟು. ಹಿಂದೆ ಮನೆಯೊಂದು ಮೂರು ಬಾಗಿಲಂತಿದ್ದ ಟೀಮ್ ಇಂಡಿಯಾ, ಈ ಕಂಪ್ಲೀಟ್ ಬದಲಾಗಿದೆ. ಹಿರಿಯ ಕಿರಿಯ ಎಂಬ ಬೇಧಬಾವ ಇಲ್ಲ. ಒಟ್ಟಾಗಿ ಗೆಲ್ಲಬೇಕೆಂಬ ಹಠ, ಹೋರಾಟದ ಛಲ ಗೆಲುವಿನಲ್ಲಿ ಮಹತ್ತರ ಪಾತ್ರವನ್ನೇ ವಹಿಸ್ತಿರೋದು ಸುಳ್ಳಲ್ಲ. ಹೀಗಾಗಿ ಇದೇ ಹಾದಿಯಲ್ಲಿ ಟೀಮ್ ಇಂಡಿಯಾ ಸಾಗಿದ್ದಾದ್ರೆ ವಿಶ್ವಕಪ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ. ಒಟ್ನಲ್ಲಿ.. ಎಲ್ಲ ರೀತಿಯಲ್ಲೂ ಸದೃಢವಾಗಿರುವ ಟೀಮ್ ಇಂಡಿಯಾಗೆ, ತವರಿನಲ್ಲಿ ವಿಶ್ವಕಪ್ ಗೆಲ್ಲೋಕೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಅಭಿಮಾನಿಗಳ ಆಶಯವನ್ನ ಈಡೇರಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ