newsfirstkannada.com

ಟೀಮ್​ ಇಂಡಿಯಾ ಪರ 96 ರನ್​​ಗಳೇ​​ ಅತ್ಯಧಿಕ.. ರೋಹಿತ್ ಪಡೆ ಆತಂಕ ಹೆಚ್ಚಿಸಿದೆ ಈ ವಿಚಾರ..!

Share :

Published June 20, 2024 at 1:41pm

    ಹೆಸರಿಗೆ ವರ್ಲ್ಡ್​ಕ್ಲಾಸ್ ಬ್ಯಾಟ್ಸ್​ಮನ್ಸ್​.. ದಾಟಲಿಲ್ಲ 100 ರನ್

    ನೂರರ ರನ್​​ ಗಡಿದಾಟಲು ಅಪ್ರತಿಮ ಆಟಗಾರರ ಪರದಾಟ

    ಲೀಗ್​​ನಲ್ಲಿ ಫೇಲ್​.. ಈಗ ಅಬ್ಬರಿಸ್ತಾರಾ ‘ಸೂಪರ್​ ಸ್ಟಾರ್ಸ್​’

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಅಸಲಿ ಆಟಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ಟೀಮ್ ಇಂಡಿಯಾದ ಸೂಪರ್-8ನ ಸೆನ್ಸೇಷನ್ ಮ್ಯಾಚ್​ಗಳು ಆರಂಭವಾಗಲಿದೆ. ಸೋಲಿಲ್ಲದ ಸರದಾರ ಭಾರತ ತಂಡ, ಟಿ20 ವಿಶ್ವ ಕಿರೀಟಕ್ಕೆ ಮತ್ತಿಡಬೇಕಾದ್ರೆ ಈಗ ಬ್ಯಾಟರ್​ಗಳು, ಸೂಪರ್ ಹಿಟ್​​​​​​​​​​​​​​​​ ಆಗಬೇಕಿದೆ. ಇಲ್ಲ ಅಂದ್ರೆ ಮತ್ತೊಮ್ಮೆ ಕಣ್ಣೀರು ತಪ್ಪಿದಿಲ್ಲ.

ಟಿ20 ವಿಶ್ವಕಪ್​ನ ಲೀಗ್ ಸ್ಟೇಜ್​ನಲ್ಲಾಡಿರೋ ಎಲ್ಲಾ ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದೆ. ಒಂದೇ ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ರೆ, ಉಳಿದ ಮೂರು ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿ ಸೂಪರ್​-8ಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಲೀಗ್​ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಗೆದ್ರೂ, ಮೆನ್​​​​​​​​​​​​​​​​​​​​​​ ಇನ್ ಬ್ಲೂ ಪಡೆಯ ಬ್ಯಾಟ್ಸ್​ಮನ್ಸ್​ಗಳು ಸೋತಿದ್ದಾರೆ.

ಇದನ್ನೂ ಓದಿ:ಭದ್ರಾ ನದಿಯಲ್ಲಿ ದಾರುಣ ಘಟನೆ.. ತೆಪ್ಪ ಮುಳುಗಿ ಮೂವರು ಪ್ರವಾಸಿ ಯುವಕರು ಸಾವು

ಟೀಮ್​ ಇಂಡಿಯಾ ಪರ 96 ರನ್​​ಗಳೇ​​ ಅತ್ಯಧಿಕ..!
ಟೀಮ್ ಇಂಡಿಯಾ ಹೇಳಿ ಕೇಳಿ ವಿಶ್ವ ಕ್ರಿಕೆಟ್​ನ ಅಧಿಪತಿ. ಅಪ್ರತಿಮ ಬ್ಯಾಟರ್​ಗಳನ್ನೇ ಹೊಂದಿರುವ ಈ ತಂಡದಲ್ಲಿ, ಸಿಂಗಲ್ ಹ್ಯಾಂಡ್​ನಲ್ಲೇ ಮ್ಯಾಚ್​ ಗೆಲ್ಲಿಸಿಕೊಡೋ ವೀರಾಧೀವೀರರಿದ್ದಾರೆ. ದುರಾದೃಷ್ಟವೇನೆಂದ್ರೆ, ಇವರೆಲ್ಲಾ ಲೀಗ್​​ ಸ್ಟೇಜ್​ನಲ್ಲೇ ಮಕಾಡೆ ಮಲಗಿದ್ದಾರೆ. ಆಡಿರೋ 3 ಪಂದ್ಯಗಳಲ್ಲಿ ರಿಷಭ್ ಪಂತ್, ಗಳಿಸಿರೋ 96 ರನ್​ಗಳೇ ಭಾರತ ಪರ ಅತಿ ಹೆಚ್ಚು ರನ್. ಉಳಿದಂತೆ ವಿಶ್ವ ಸಾಮ್ರಾಟ ವಿರಾಟ್​ ಕೊಹ್ಲಿ, ರೋಹಿತ್, ಸೂರ್ಯಕುಮಾರ್​, ಹಾರ್ದಿಕ್ ಇವಱರೂ ಹತ್ತಿರ ಸುಳಿದೇ ಇಲ್ಲ.

ಇಂಟ್ರೆಸ್ಟಿಂಗ್ ಅಂದ್ರೆ ಅಮೆರಿಕನ್ ಪಿಚ್​​​ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಬಿಟ್ಟು, ಉಳಿದ ದೇಶದ ಆಟಗಾರರು ಸ್ಕೋರ್ ಮಾಡಿದ್ದಾರೆ. ಕ್ರಿಕೆಟ್ ಶಿಶುವಾಗಿ ಟಿ20 ವಿಶ್ವಕಪ್​ಗೆ ಕಾಲಿಟ್ಟ ಅಮೆರಿಕಾ ಪರ ಅರೋನ್ ಜೋನ್ಸ್, ಆ್ಯಂಡ್ರೀಸ್ ಗೌಸ್ 100 ರನ್​​ಗಳ ಗಡಿದಾಟಿದ್ದಾರೆ. ಅದು ಕೂಡ 3 ಪಂದ್ಯಗಳಿಂದಲೇ.. ಆದ್ರೆ, ಟೀಮ್ ಇಂಡಿಯಾ ಬ್ಯಾಟರ್​​ಗಳು ಮಾತ್ರ, ಇದಕ್ಕೆ ಭಿನ್ನವಾಗಿದ್ದಾರೆ. ಇದೇ ಈಗ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!

ಕೆರಿಬಿಯನ್ ದ್ವೀಪರಾಷ್ಟದಲ್ಲಾದ್ರೂ ಮಾಡ್ತಾರಾ ಸ್ಕೋರ್?
ಅಮೆರಿಕ ಬಿಡಿ. ಇದೀಗ ಟೀಮ್ ಇಂಡಿಯಾದ ನ್ಯೂ ಜರ್ನಿ, ಕೆರಬಿಯನ್ ದ್ವೀಪರಾಷ್ಟ್ರದಲ್ಲಿ ಆರಂಭಗೊಳ್ಳಲಿದೆ. ಇಲ್ಲಾದ್ರೂ ಟೀಮ್ ಇಂಡಿಯಾ ಬ್ಯಾಟರ್​ಗಳು ರನ್​ ಗಳಿಸ್ತಾರಾ ಎಂಬ ಪ್ರಶ್ನೆ ಇದೆ. ಇಂಡಿಯನ್ ಕಂಡೀಷನ್ಸ್​ ಹಾಗೂ ವಿಂಡೀಸ್ ಕಂಡೀಷನ್ಸ್​ಗೂ ಸಾಮ್ಯತೆ ಇದೆ. ಹೀಗಾಗಿ ವೆಸ್ಟ್ ಇಂಡೀಸ್ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​ ಮಿಂಚಲೇಬೇಕಿದೆ. ಈಗಾಗಲೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬೌಲರ್ಸ್, ಮಿಂಚಿದ್ದಾರೆ. ಮ್ಯಾಚ್​ ವಿನ್ನರ್​​ಗಳಾಗಿ ಮೆರೆದಾಡಿದ್ದಾರೆ. ಆದ್ರೀಗ ಮಹತ್ವದ ಘಟ್ಟದಲ್ಲಿ ಮೆನ್ ಇನ್ ಬ್ಲೂ ಪಡೆಯ ಬ್ಯಾಟರ್ಸ್​, ಕೈ ಹಿಡಿಯಬೇಕಾಗಿದೆ. ಬೌಲರ್​​ಗಳ ಜೊತೆಗೆ ಬ್ಯಾಟ್ಸ್​ಮನ್ಸ್​​ ರನ್​ ಭರಾಟೆ ನಡೆಸಿದ್ರಷ್ಟೇ, ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಗೆಲುವು ಸುಲಭ. ಇಲ್ಲ ಕಷ್ಟಕರ ಆಗೋದ್ರಲ್ಲೇ ಡೌಟೇ ಇಲ್ಲ.

ವರ್ಲ್ಡ್​ಕ್ಲಾಸ್ ಬ್ಯಾಟರ್ಸ್​ನಿಂದ ಬರಬೇಕಿದೆ ರನ್
ಟಿ-20 ವಿಶ್ವಕಪ್​ ಲೀಗ್​ ಸ್ಟೇಜ್​ನಲ್ಲಿ ರನ್ ಗಳಿಸಲು ವಿಫಲರಾಗಿರುವ ದಿಗ್ಗಜರು, ಸೂಪರ್​​-8ನ ಬಿಗ್​ ಮ್ಯಾಚ್​ಗಳಲ್ಲಿ ರನ್ ಗಳಿಸಬೇಕಿದೆ. ಪ್ರಮುಖವಾಗಿ ವಿಶ್ವ ಸಾಮ್ರಾಟ ವಿರಾಟ್​​ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್​ರಂತಹ ವರ್ಲ್ಡ್​ಕ್ಲಾಸ್ ಬ್ಯಾಟರ್ಸ್​, ಬ್ಯಾಟ್​​ನಿಂದ ರನ್​ ಕಲೆ ಹಾಕಬೇಕಿದೆ. ಬಿಗ್ ಇನ್ನಿಂಗ್ಸ್​ ಕಟ್ಟೋ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಬೇಕಿದೆ. ಮಾತ್ರವೇ ಎಂತಹ ಬಲಿಷ್ಠ ಎದುರಾಳಿಯನ್ನಾಗಲಿ ಬಗ್ಗಬಡಿಯಲು ಸಾಧ್ಯ.

ಇದನ್ನೂ ಓದಿ:IND vs AFG.. ಯಾರಿಗೆಲ್ಲಾ ಚಾನ್ಸ್​​​.. ಯಾರಿಗೆಲ್ಲಾ ಕೊಕ್​​​..​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!

ಮುಂದಿನ 5 ಪಂದ್ಯಗಳಲ್ಲೂ ಬ್ಯಾಟರ್​ಗಳು, ಬೌಲರ್​ಗಳು ಕನ್ಸಿಸ್ಟೆನ್ಸಿ ತೋರಬೇಕಿದೆ. ಬೌಲರ್​ಗಳ ಜೊತೆ ಬ್ಯಾಟ್ಸ್​ಮನ್​ಗಳು ದರ್ಬಾರ್ ನಡೆಸಿದ್ರಷ್ಟೇ, ವಿಂಡೀಸ್​ನಿಂದ ಟಿ20 ವಿಶ್ವಕಪ್ ಗೆದ್ದು ಟೀಮ್​ ಇಂಡಿಯಾ ಭಾರತಕ್ಕೆ ವಾಪಸ್ ಆಗಲಿದೆ. ಒಂದು ಪಂದ್ಯ ಮಿಸ್ಸಾದ್ರೂ, ಟೀಮ್ ಇಂಡಿಯಾ ವಿಶ್ವ ಕಿರೀಟ ಗೆಲ್ಲೋ ಕನಸು ಕನಸಾಗಿಯೇ ಉಳಿಯಲಿದೆ.

ಇದನ್ನೂ ಓದಿ:ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾ ಪರ 96 ರನ್​​ಗಳೇ​​ ಅತ್ಯಧಿಕ.. ರೋಹಿತ್ ಪಡೆ ಆತಂಕ ಹೆಚ್ಚಿಸಿದೆ ಈ ವಿಚಾರ..!

https://newsfirstlive.com/wp-content/uploads/2024/06/KOHLI-JAISWAL.jpg

Load More