newsfirstkannada.com

Share :

04-06-2023

    ಮೃತದೇಹಗಳ ಕೆದಕಿ ಮಗನ ಹುಡುಕಾಡಿದ ಅಪ್ಪ.

    ಒಡಿಶಾದ ಘನ ಘೋರ ದುರಂತದ ದೃಶ್ಯ ಸೆರೆ

    ಕಣ್ಣಲ್ಲಿ ನೀರು ತರಿಸುವಂತಿದೆ ತಂದೆಯ ಬಡಿದಾಟ

ಈ ದೃಶ್ಯ ನೋಡಿದ್ರೆ ನಿಜಕ್ಕೂ ಕರುಳು ಚುರ್ ಅನ್ನುತ್ತೆ. ಎಂತಹ ಕಲ್ಲು ಹೃದಯದವರಾದ್ರೂ ಸರಿ ಇಂತಹ ಪರಿಸ್ಥಿತಿ ಯಾವ ಪಾಪಿಗೂ ಬರೋದು ಬೇಡ ಅನ್ನದೇ ಇರೋದಿಲ್ಲ. ಒಡಿಶಾ ರೈಲು ಹಳಿಗಳ ಹೆಣದ ರಾಶಿ ಒಂದೊಂದೇ ಕರುಣಾಜನಕ ಕಥೆಗಳನ್ನ ಬಿಚ್ಚಿಡುತ್ತಿದೆ.
ಶತಮಾನದ ಭೀಕರ ರೈಲು ದುರಂತಕ್ಕೆ ನೂರಾರು ಪ್ರಯಾಣಿಕರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ನೋವು ಅಕ್ಷರಶಃ ಮುಗಿಲು ಮುಟ್ಟಿದೆ. ಇಂತಹ ಸಾವು, ನೋವಿನ ಮಧ್ಯೆ ತಂದೆಯೊಬ್ಬ ತನ್ನ ಮಗನಿಗಾಗಿ ಹುಡುಕುತ್ತಿರೋ ಈ ದೃಶ್ಯ ನೋಡುವರ ಕಣ್ಣಲ್ಲಿ ನೀರು ತರಿಸುವಂತಿದೆ. ಬಡಪಾಯಿ ತಂದೆಯ ಕಣ್ಣೀರು ರೈಲು ಅಪಘಾತದ ಕರಾಳತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಸದ್ಯ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ನೂರಾರು ಪ್ರಯಾಣಿಕರ ಮೃತದೇಹವನ್ನ ಶವಾಗಾರದಲ್ಲಿರಿಸಲಾಗಿದೆ. ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆಗಳು ಈಗಷ್ಟೇ ಶುರುವಾಗಿದೆ. ಹೀಗಿರುವಾಗ ಹೆಣದ ರಾಶಿಗಳ ಮಧ್ಯೆ ತಂದೆಯೊಬ್ಬ ಮೃತದೇಹಗಳ ಕೆದಕಿ ಕೆದಕಿ ಮಗನ ಹುಡುಕಾಡಿದ್ದಾನೆ.

ವ್ಯಕ್ತಿಯೊಬ್ಬ ಮೃತದೇಹಗಳ ಮೇಲೆ ಮುಚ್ಚಿರುವ ಬಟ್ಟೆಯನ್ನು ತೆಗೆದು ನೋಡುವಾಗ ಆತನನ್ನು ಪ್ರಶ್ನಿಸಲಾಗಿದೆ. ದಾದಾ ನೀವು ಯಾರನ್ನ ಹುಡುಕುತ್ತಾ ಇದ್ದೀರಾ ಎಂದು ಸ್ಥಳೀಯರು ಕೇಳಿದ್ದಾರೆ. ಆಗ ಆ ವ್ಯಕ್ತಿ ಅಣ್ಣಾ ನನ್ನ ಮಗನನ್ನು ಹುಡುಕುತ್ತಿದ್ದೇನೆ. ನನ್ನ ಮಗ ಕೋರಮಂಡಲ ರೈಲಿನಲ್ಲಿ ಪ್ರಯಾಣಿಸಿದ್ದ. ನಾನು ಭಾರತೀಪುರದ ಸುಗ್ಗೋದಲ್ಲಿ ವಾಸಿಸುತ್ತಿದ್ದೇವೆ. ಎಷ್ಟು ಹುಡುಕಿದರೂ ನನ್ನ ಮಗ ಸಿಗುತ್ತಲೇ ಇಲ್ಲ ಎಂದು ಮೃತದೇಹಗಳಲ್ಲಿ ಮಗನನ್ನು ಹುಡುಕಿದ ನತದೃಷ್ಟ ತಂದೆ ಕಣ್ಣೀರು ಸುರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More