newsfirstkannada.com

ಅಂದು ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ್ದ.. ಇಂದು ಜೀವನಕ್ಕಾಗಿ ಇಡ್ಲಿ ಮಾರಿದ..!

Share :

Published September 19, 2023 at 4:18pm

    ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಭಾರತ ದೇಶ!

    ಬೀದಿಗೆ ಬಂದ ಚಂದ್ರಯಾನ 3 ಯಶಸ್ಸಿಗೆ ಕಾರಣರಾದ ವ್ಯಕ್ತಿ ಜೀವನ

    ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಇಡ್ಲಿ ಮಾರುತ್ತಿರೋ ದಿಲೀಪ್​..!

ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್‌ ಸಕ್ಸಸ್​ಫುಲ್ ಲ್ಯಾಂಡಿಂಗ್​​​… ಶಶಿಯ ಅಧ್ಯಯನದಲ್ಲಿ ಮುಳುಗಿದ ಪ್ರಗ್ಯಾನ್. ಇದು ಇತ್ತೀಚೆಗೆ ಇಡೀ ಜಗತ್ತಿನಾದ್ಯಂತ ಸುದ್ದಿಯಾದ ವಿಚಾರ. ಅದರಲ್ಲೂ ಜಗತ್ತೇ ಎದುರು ನೋಡುತ್ತಿದ್ದ ಚಂದ್ರಯಾನ 3 ಯಶಸ್ವಿಯಾಗಿದ್ದು, ಇದು ಇಡೀ ಭಾರತವೇ ಹೆಮ್ಮೆಪಡುವ ವಿಷಯವಾಗಿದೆ.

ಹೌದು, ಚಂದ್ರನಂಗಳದಲ್ಲಿ ರೋವರ್ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದಕ್ಕೆ ಕಾರಣ ಹಗಲು ರಾತ್ರಿಯೆನ್ನದೇ ದುಡಿದ ಭಾರತದ ವಿಜ್ಞಾನಿಗಳು. ಕೇವಲ ವಿಜ್ಞಾನಿಗಳು ಮಾತ್ರವಲ್ಲ ನೂರಾರು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ ಪೈಕಿ ದಿಲೀಪ್​ ಕುಮಾರ್​ ಉಪ್ರಾರಿಯಾ. ಆದರೀಗ ಚಂದ್ರಯಾನ 3 ಯಶಸ್ಸಿಗೆ ಕಾರಣರಾದ ವ್ಯಕ್ತಿಯೋರ್ವ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿ ನಿರ್ಮಾಣವಾಗಿದೆ.

ಯಾರು ಈ ದಿಲೀಪ್​ ಕುಮಾರ್..? ಇಡ್ಲಿ ಮಾರಲು ಕಾರಣವೇನು..?

ದಿಲೀಪ್​ ಕುಮಾರ್ ಮೂಲತಃ ಮಧ್ಯಪ್ರದೇಶ. ಭವಿಷ್ಯದ ಹಿತದೃಷ್ಟಿಯಿಂದ ದಿಲೀಪ್​​ ಒಳ್ಳೇ ಸಂಬಳ ಬರುತ್ತಿದ್ದ ಖಾಸಗಿ ಕಂಪನಿ ಕೆಲಸ ಬಿಟ್ಟು ಸರ್ಕಾರಿ ಕೆಲಸಕ್ಕೆ ಸೇರಿದ್ದರು. ಅದು ಕೇವಲ 8 ಸಾವಿರ ಸಂಬಳಕ್ಕೆ. ಹೆವಿ ಇಂಜಿನಿಯರಿಂಗ್​​ ಕಾರ್ಪೊರೇಷನ್​ ಲಿಮಿಟೆಡ್​ ಅನ್ನೋ ಸರ್ಕಾರಿ ಕೆಲಸಕ್ಕೆ ಸೇರಿದ್ದ ದಿಲೀಪ್​​ ಹಗಲು ರಾತ್ರಿಯೆನ್ನದೆ ಚಂದ್ರಯಾನ 3 ಮಿಷನ್​ಗಾಗಿ ದುಡಿದಿದ್ದರು.

ಹೆವಿ ಇಂಜಿನಿಯರಿಂಗ್​​ ಕಾರ್ಪೊರೇಷನ್​ ಲಿಮಿಟೆಡ್​ ಅನ್ನೋ ಸರ್ಕಾರಿ ಸಂಸ್ಥೆ ಚಂದ್ರಯಾನ 3 ಮಿಷನ್​ಗಾಗಿ ಲಾಚಿಂಗ್​ ಪ್ಯಾಡ್​ ನಿರ್ಮಿಸಿತ್ತು. ಇದಕ್ಕಾಗಿ 2500ಕ್ಕೂ ಹೆಚ್ಚು ಟೆಕ್ನೀಶಿಯನ್ಸ್​ ಕೆಲಸ ಮಾಡಿದ್ದರು. ದಿಲೀಪ್​ ಕೂಡ ಇದರ ಭಾಗವಾಗಿದ್ದರು. ಆದರೆ, ಹೆವಿ ಇಂಜಿನಿಯರಿಂಗ್​​ ಕಾರ್ಪೊರೇಷನ್​ ಲಿಮಿಟೆಡ್ ಇನ್ನೂ ತನ್ನ ಸಂಸ್ಥೆ ನೌಕರರಿಗೆ ಸಂಬಳ ನೀಡಿಲ್ಲ. ಬರೋಬ್ಬರಿ 18 ತಿಂಗಳ ಸಂಬಳ ನೀಡದ ಕಾರಣ ದಿಲೀಪ್​​ ಈಗ ಕೊನೆಗೂ ಇಡ್ಲಿ ಮಾರಲು ಮುಂದಾಗಿದ್ದಾರೆ.

ಈ ಬಗ್ಗೆ ದಿಲೀಪ್​ ಹೇಳಿದ್ದೇನು..?

ಸದ್ಯ ದಿಲೀಪ್​ ರಾಂಚಿಯ ಧುರ್ವಾ ಎಂಬಲ್ಲಿ ಇಡ್ಲಿ ಮಾರುತ್ತಿದ್ದಾರೆ. ಈ ಬಗ್ಗೆ ಮಾತಾಡಿದ ದಿಲೀಪ್​​, ನಾನು ಬೆಳಿಗ್ಗೆ ಇಡ್ಲಿ ಮಾರುತ್ತೇನೆ. ಮಧ್ಯಾಹ್ನದ ಮೇಲೆ ಆಫೀಸ್​ಗೆ ಹೋಗುತ್ತೇನೆ. ಮತ್ತೆ ಸಂಜೆ ಬಂದು ಇಡ್ಲಿ ಮಾರುತ್ತೇನೆ ಎಂದರು. ಇದುವರೆಗೂ ಕ್ರೆಡಿಟ್​ ಕಾರ್ಡ್​ ಬಳಸಿ ಮನೆ ನಡೆಸುತ್ತಿದ್ದೆ. ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದೇನೆ. ಸರ್ಕಾರ ಇನ್ನೂ ಸಂಬಳ ನೀಡಿಲ್ಲ. ಹೀಗಾಗಿ ಜೀವನ ಸಾಗಿಸಲು ಈ ಕೆಲಸ ಮಾಡುತ್ತಿದ್ದೇನೆ ಎಂದು ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ್ದ.. ಇಂದು ಜೀವನಕ್ಕಾಗಿ ಇಡ್ಲಿ ಮಾರಿದ..!

https://newsfirstlive.com/wp-content/uploads/2023/09/Kannada-News.jpg

Load More