ಪ್ರಧಾನಿ ಮೋದಿಯಿಂದ ಬೆಂಗಳೂರಲ್ಲಿ US ರಾಯಭಾರಿ ಕಚೇರಿ ಸ್ಥಾಪನೆ
ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಎಂದ ಸಂಸದ ತೇಜಸ್ವಿ ಸೂರ್ಯ!
US ರಾಯಭಾರಿ ಕಚೇರಿಯಿಂದ ಕನ್ನಡಿಗರಿಗೆ ಸಹಾಯವಾಗಲಿದೆ ಎಂದ್ರು!
ಇಷ್ಟು ದಿನ ಕನ್ನಡಿಗರು ಅಮೆರಿಕದ ವೀಸಾಗಾಗಿ ಚೆನ್ನೈ ಅಥವಾ ಹೈದರಾಬಾದ್ಗೆ ಹೋಗಬೇಕಿತ್ತು. ಇಲ್ಲದೆ ಹೋದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರೋ ರಾಯಭಾರ ಕಚೇರಿಗೆ ಭೇಟಿ ಕೊಡಬೇಕಿತ್ತು. ಇನ್ಮುಂದೆ ಬೆಂಗಳೂರಿನಲ್ಲೇ ಕನ್ನಡಿಗೆ ಅಮೆರಿಕ ವೀಸಾ ಸಿಗಲಿದೆ. ಅಮೆರಿಕಾ ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ತನ್ನ ರಾಯಭಾರ ಕಚೇರಿ ತೆರೆಯಲು ಚಿಂತಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಭೇಟಿ ಬೆನ್ನಲ್ಲೇ ಕನ್ನಡಿಗರಿಗೆ ಗುಡ್ನ್ಯೂಸ್ ಸಿಕ್ಕಿದೆ. ಹೀಗಾಗಿ ಯುಎಸ್ ರಾಯಭಾರಿ ಕಚೇರಿ ಬೆಂಗಳೂರಿನಲ್ಲಿ ತೆರೆಯಲು ಕಾರಣರಾದ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರೇ ಕಾರಣ. ಸಾವಿರಾರು MNC ಕಂಪನಿಗಳನ್ನು ಹೊಂದಿರೋ ಬೆಂಗಳೂರು IT ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇದರಿಂದ ಲಕ್ಷಾಂತರ ಕನ್ನಡಿಗರಿಗೆ ಸಹಾಯವಾಗಲಿದೆ. ಅದಕ್ಕಾಗಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಥ್ಯಾಂಕ್ಸ್ ಎಂದಿದ್ದಾರೆ.
Bengaluru has greatly benefited from PM Shri @narendramodi Ji's leadership. He has been extremely sensitive & responsive to our needs.
One of the biggest takeaways from his visit is the announcement of a US Consulate in Bengaluru.
Thread on our efforts in making this happen.… https://t.co/z6xjvHjdno pic.twitter.com/GuK5sXswy3
— Tejasvi Surya (@Tejasvi_Surya) June 22, 2023
ಈ ಹಿಂದೆಯೇ ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಸ್ಥಾಪಿಸಲು ಸಹಾಯ ಮಾಡಿ ಎಂದು ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿದ್ದರು. ಅದಕ್ಕೆ ಜೈಶಂಕರ್ ಈ ಬಗ್ಗೆ ಅಮೆರಿಕಾದ ಜತೆ ಮಾತಾಡುತ್ತೇನೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.
ಭಾರತದಲ್ಲಿ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದೇವೆ. ಅದು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ತೆರೆಯಲಿದ್ದು, ಇದು ಭಾರತದೊಂದಿಗೆ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.