ಎಂಪಿ ಚುನಾವಣೆಗೆ ಮುನ್ನ ಮತ್ತೊಂದು ಸುತ್ತಿನ ಆಪರೇಷನ್
‘ಆಪರೇಷನ್ ಹಸ್ತ’ ಟಾರ್ಗೆಟ್ ಲಿಸ್ಟ್ಗೆ ಬೆಚ್ಚಿಬಿತ್ತಾ ಕೇಸರಿ ಸೇನೆ?
ಅನಂತ್‌ಕುಮಾರ್ ನಿಧನ ಬಳಿಕ ತೇಜಸ್ವಿನಿ ಅವರಿಗೆ ಮನ್ನಣೆ ಸಿಕ್ಕಿಲ್ಲ
2024 ಮೋದಿ ವರ್ಸಸ್ ದಿ ರೆಸ್ಟ್. ಮಿಷನ್ 400 ಅಂತ ಕದನಕ್ಕೆ ನಿಂತ ಮೋದಿ ಟೀಮ್ಗೆ ವಿಪಕ್ಷಗಳು ಒಗ್ಗಟ್ಟಿನ ದರ್ಶನ ತೋರ್ತಿವೆ. 2014, 2019ಕ್ಕೂ ಈ ಎಲೆಕ್ಷನ್ ಭಿನ್ನವಾಗಿರಲಿದೆ ಅನ್ನೋದಕ್ಕೆ ಸಾಕ್ಷಿ ಆಗಲಿದೆ. ಇತ್ತ ರಾಜ್ಯದಲ್ಲಿ ಕಳೆದ ಬಾರಿ 25 ಸೀಟು ಗೆದ್ದು ತ್ರಿವಿಕ್ರಮನಾಗಿದ್ದ ಕಮಲಕ್ಕೆ ಈ ಬಾರಿ ಆತಂಕದ ವಾತಾವರಣ ಕಾಣಿಸ್ತಿದೆ. ಕಾರಣ ಸಿದ್ದು-ಡಿಕೆಶಿ ಜೋಡೆತ್ತು ಹೂಡಿರುವ ಅದೊಂದು ತಂತ್ರ.
ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ ಕಾಂಗ್ರೆಸ್ನ ಟಾರ್ಗೆಟ್!
ರಾಜ್ಯದಲ್ಲಿ ಚಾಣಾಕ್ಯನ ತಂತ್ರಗಳಿಗೆ ತಿರುಮಂತ್ರ ನೀಡಿದ ಸಿದ್ದು-ಡಿಕೆಶಿ, ಮುಂಬರುವ 2024ರ ಲೋಕಸಭಾ ಚುನಾವಣೆಗೂ ಭಾರೀ ತಂತ್ರಗಾರಿಕೆಯೊಂದಿಗೆ ರಣವಿಳ್ಯ ನೀಡಲಿದೆ. ಈವರೆಗೆ ಸದ್ದು ಮಾಡ್ತಿದ್ದ ಆಪರೇಷನ್ ಕಮಲಕ್ಕೆ ಮರು ಆಪರೇಷನ್ ಮಾಡಲು ಕೈಪಡೆ ಸಮರ ತಂತ್ರ ರೂಪಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಸಫಲತೆ, ಕೈಜೋಡೆತ್ತಿಗೆ ಬಲ ತುಂಬಿದೆ. ಹೀಗಾಗಿ ಲೋಕಸಭೆ ಚುನಾವಣೆ ಹೊತ್ತಿಗೆ ಆಪರೇಷನ್ ಹಸ್ತಕ್ಕೂ ಶರವೇಗ ಬಾಣ ಸಿದ್ಧಪಡಿಸ್ತಿದೆ.
ರಾಜ್ಯದಲ್ಲಿ ಕಮಲಕ್ಕೆ ‘ಲೋಕಾಘಾತ’ ಫಿಕ್ಸಾ? ಹೇಗಿದೆ ‘ಕೈ’ ತಂತ್ರ?
ಹೌದು, ರಾಜ್ಯದಲ್ಲಿ ದಿಗ್ವಿಜಯ ಸಾಧಿಸಿದ ಕೈಪಡೆ, ಈಗ ತನ್ನ ಗುರಿಯನ್ನ ಲೋಕಸಭೆಯತ್ತ ನೆಟ್ಟಿದೆ. ಎಲೆಕ್ಷನ್ನಲ್ಲಿ ಕಮಲಾಘಾತ ನೀಡಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಮ್ಯಾಚ್ ಫಿಕ್ಸಿಂಗ್ಗೆ ಸಿದ್ಧತೆ ನಡೆಸಿದೆ. ವಿಧಾನಸಭೆಯಲ್ಲಿ ಅತಿರಥರನ್ನ ಸೆಳೆದು ಯಶಸ್ಸಿನ ಹೆಜ್ಜೆಯಿಟ್ಟಿದ್ದ ಕಾಂಗ್ರೆಸ್, ಸದ್ಯ ಲೋಕಸಭೆ ಎಲೆಕ್ಷನ್ಗೆ ಅಂತಹದ್ದೆ ಒಂದು ದಾಳ ಉರುಳಿಸಿದೆ ಎಂಬ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ಕಾಂಗ್ರೆಸ್ ಬಿಗ್ ಪ್ಲಾನ್
ಕಾಂಗ್ರೆಸ್ನ ಹಿಟ್ ಲಿಸ್ಟ್ ನೋಡಿದ ಬಿಜೆಪಿ ಶಾಕ್ಗೆ ಒಳಗಾಗಿದೆ. ಹೌದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಡಾ.ತೇಜಸ್ವಿನಿ ಅನಂತ್‌ಕುಮಾರ್ ಹೆಸರು ಈ ಲಿಸ್ಟ್ನ ಮೊದಲ ಸ್ಥಾನ ಅಲಂಕರಿಸಿದೆ. ಈಗಾಗಲೇ ತೇಜಸ್ವಿನಿ ಅವರಿಗೆ ಗಾಳ ಹಾಕಿರುವ ಕೈಪಡೆ, ಅನಂತ್‌ಕುಮಾರ್ ಕರ್ಮಭೂಮಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದಲೇ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಬಿಗ್ ಪ್ಲಾನ್ ಮಾಡಿದೆ ಎಂದು ಗೊತ್ತಾಗಿದೆ.
ತೇಜಸ್ವಿನಿ ಅನಂತ್‌ಕುಮಾರ್ ಪ್ರಬಲ ಅಭ್ಯರ್ಥಿ
ತೇಜಸ್ವಿಸೂರ್ಯ ಎದುರು ತೇಜಸ್ವಿನಿ ಅನಂತ್‌ಕುಮಾರ್ ಪ್ರಬಲ ಅಭ್ಯರ್ಥಿ ಆಗೋದು ಪಕ್ಕಾ ಅನ್ನೋದು ಕಾಂಗ್ರೆಸ್ನ ಎಣಿಕೆ. ಒಂದ್ವೇಳೆ, ತೇಜಸ್ವಿನಿ ಕಾಂಗ್ರೆಸ್ ಜೊತೆ ಹಸ್ತಲಾಘವ ಮಾಡಿದ್ರೆ, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಲಾಘ ಹೊಡೆಯಲಿದೆ ಅನ್ನೋದು ಕಾಂಗ್ರೆಸ್ನ ತಂತ್ರ. ಅಲ್ಲದೇ ಹಿರಿಯರ ಕಡೆಗಣನೆ ಎಂಬ ಅಜೆಂಡಾ ಹೊತ್ತು ಸಂಧಾನಕ್ಕೆ ಇಳಿದು ಸಕ್ಸಸ್ ಆದ್ರೆ, ದಕ್ಷಿಣದಲ್ಲಿ ಹಸ್ತದ ಝೆಂಡಾ ಹಾರಾಡಲಿದೆ ಎಂಬ ಲೆಕ್ಕಾಚಾರ ಕೈಪಡೆಯದ್ದು.
ದಕ್ಷಿಣ ಕ್ಷೇತ್ರದ ಟಿಕೆಟ್ ಸಿಗೋದು ಖಚಿತ
ಈಗಾಗಲೇ ಮಾಜಿ ಸಿಎಂ ಬಿಎಸ್ವೈ, ಶೆಟ್ಟರ್, ಈಶ್ವರಪ್ಪ ಮತ್ತು ಸವದಿಯನ್ನ ಬಿಜೆಪಿ ಕಡೆಗಣಿಸಿದೆ. ಇತ್ತ, ಅನಂತ್‌ಕುಮಾರ್ ನಿಧನ ಬಳಿಕ ಅವರ ಪತ್ನಿ ತೇಜಸ್ವಿನಿ ಅವರಿಗೆ ಪಕ್ಷದಲ್ಲಿ ಮನ್ನಣೆ ಸಿಕ್ಕಿಲ್ಲ. ಹಿರಿಯರ ಕೋಟಾದಡಿಯಲ್ಲಿ ಪರಿಗಣಿಸದೇ ಹಿನ್ನೆಲೆಗೆ ಸರಿಸಲಾಗಿದೆ. ತೇಜಸ್ವಿನಿ ಅವರಿಗೆ ಸಂಘಟನೆ ಮತ್ತು ಸರ್ಕಾರ ಎರಡರಲ್ಲೂ ಸಾಕಷ್ಟು ಅನುಭವ ಹೊಂದಿದ್ದಾರೆ. ಸದ್ಯ ಬಿಜೆಪಿ ಕಡೆಗಣನೆ ಸದ್ಬಳಕೆ ಮಾಡಿಕೊಂಡು ಪಕ್ಷ ಗಟ್ಟಿ ಮಾಡಲು ಕಾಂಗ್ರೆಸ್ ಈಗ ಮುಂದಾಗಿದೆ. ಈ ಕಾರ್ಯಾಚರಣೆಗೆ ದಿ. ಅನಂತ್‌ಕುಮಾರ್ ಕುಟುಂಬಕ್ಕೆ ಆತ್ಯಾಪ್ತರಾದ ಮಾಜಿ ಸಿಎಂ ಶೆಟ್ಟರ್ಗೆ ಮುಂದಾಳತ್ವ ನೀಡಲಾಗಿದೆ ಎನ್ನಲಾಗಿದೆ. ಶೆಟ್ಟರ್ ಮೂಲಕ ಗಾಳ ಹಾಕಿದ್ರೆ ಪಕ್ಷಕ್ಕೆ ಜಯ ಖಚಿತ ಅನ್ನೋ ವಿಶ್ವಾಸ ಒಂದ್ಕಡೆಯಾದ್ರೆ, ಈ ಆಪರೇಷನ್ ಸಕ್ಸಸ್ ಆದಲ್ಲಿ ತೇಜಸ್ವಿನಿ ಅವರಿಗೆ 2024ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಸಿಗೋದು ಖಚಿತ ಎಂದು ಹೇಳಲಾಗಿದೆ.
ಒಟ್ಟಾರೆ, 1977ರ ಬಳಿಕ ಈವರೆಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆದ್ದಿದ್ದು ಒಂದೇ ಬಾರಿ. ಅದರಲ್ಲೂ 1991ರಲ್ಲಿ ಕ್ಷೇತ್ರ ಕಳೆದುಕೊಂಡ ಕಾಂಗ್ರೆಸ್ ಈವರೆಗೆ ವಶಕ್ಕೆ ಪಡೆಯಲು ಹೆಣಗಾಟ ನಡೆಸಿದೆ. ಆದ್ರೆ, 2009ರಲ್ಲಿ ಮಾತ್ರ ಕೃಷ್ಣಬೈರೇಗೌಡರನ್ನ ಕಣಕ್ಕಿಳಿಸಿದ್ದ ಕೈಪಡೆ, ದೊಡ್ಡ ಮಟ್ಟದ ಟಕ್ಕರ್ ನೀಡುವಲ್ಲಿ ಯಶಸ್ವಿ ಆಗಿತ್ತು. ಈಗ ಕಬ್ಬಿಣದ ಕಡಲೆ ಆಗಿರುವ ಈ ಕ್ಷೇತ್ರ ಗೆಲ್ಲಲೇಬೇಕು ಅಂತ ಕಾಂಗ್ರೆಸ್ ಪಣ ತೊಟ್ಟಿದೆ. ಈ ಗುರಿ ಸಾಧನೆಗೆ ಬಿಜೆಪಿ ನಾಯಕಿ ಹೆಗಲಿಗೆ ಕೋವಿ ಇರಿಸಲು ಸಿದ್ಧತೆ ನಡೆಸಿದ್ದಿ, ಚುನಾವಣೆಯಲ್ಲಿ ಬಿಜೆಪಿಗೆ ಈ ಬೆಳವಣಿಗೆ ಇರುಸುಮುರುಸು ತರಿಸುವ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ