newsfirstkannada.com

ತೇಜಸ್ವಿನಿ ಅನಂತ್ ಕುಮಾರ್ ಮೊಮ್ಮಗನ ಜೊತೆ ಪ್ರಧಾನಿ ಕ್ಯೂಟ್ ಹರಟೆ.. ಮೋದಿ ಹೆಂಗೆಲ್ಲ ಕೀಟಲೆ ಮಾಡಿದ್ರು ನೋಡಿ..! Photos

Share :

21-07-2023

    ಚಾಕೊಲೇಟ್​ ನೀಡಿ ಪುಟಾಣಿಯ ಕಿವಿ ಹಿಂಡಿದ ಮೋದಿ

    4 ವರ್ಷದ ಮಗು ಜೊತೆ ಮೋದಿ ಹೇಗೆಲ್ಲ ತಮಾಷೆ ಮಾಡಿದ್ರು?

    ಪ್ರಧಾನಿ ಮೋದಿಯನ್ನು ದಿಢೀರ್ ಭೇಟಿ ಮಾಡಿದ ತೇಜಸ್ವಿನಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ ಕುಮಾರ್ ನಿನ್ನೆ ದಿಢೀರ್ ಭೇಟಿ ಮಾಡಿದ್ದರು. ಈ ವೇಳೆ, ಪ್ರಧಾನಿ ಪುಟಾಣಿ ಅತಿಥಿಯೊಬ್ಬರನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮಾಷೆಯಲ್ಲಿ ಮುಳುಗಿದ ಪ್ರಸಂಗವೂ ನಡೆಯಿತು.

ಹೌದು, ತೇಜಸ್ವಿನಿ ಅವರು ಮೋದಿಯನ್ನು ಭೇಟಿ ಮಾಡಲು ತಮ್ಮ ಮೊಮ್ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. 4 ವರ್ಷದ ಪುಟಾಣಿ ಕಂದನನ್ನು ನೋಡಿದ ಮೋದಿ, ತಾವು ಕೂತಿದ್ದಲ್ಲಿಗೆ ಆತನನ್ನು ಕರೆಯುತ್ತಾರೆ. ಅಲ್ಲಿಗೆ ಬರುತ್ತಿದ್ದಂತೆ ಪ್ರೀತಿಯಿಂದ ಮಾತನಾಡಿಸಿ ಹೆಗಲ ಮೇಲೆ ಕೈ ಹಾಕುತ್ತಾರೆ. ನಂತರ ಚಾಕೊಲೇಟ್ ನೀಡಿ ತಮಾಷೆ ಮಾಡುತ್ತ ಕಾಲೆಳೆದಿದ್ದಾರೆ.
ಕೊನೆಯಲ್ಲಿ ಪ್ರಧಾನಿ ಮೋದಿ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿಸಿಕೊಳ್ಳಲು ಗಣ್ಯರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಪುಟಾಣಿ ಬಾಲಕನ ಕಿವಿಯನ್ನು ಹಿಂಡುತ್ತಿರುವಂತೆ ಮೋದಿ ಪೋಸ್ ನೀಡಿದ್ದಾರೆ.

ಈ ಫೋಟೋಗಳನ್ನು ತೇಜಸ್ವಿನಿ ಅನಂತ್ ಕುಮಾರ್​ ಪುತ್ರಿ, ಐಶ್ವರ್ಯ ಅನಂತ್​ ಕುಮಾರ್​ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಇವತ್ತು ನನಗೆ ತುಂಬಾ ವಿಶೇಷವಾದ ದಿನ. ನರೇಂದ್ರ ಮೋದಿ ನನ್ನ ಅಪ್ಪನಿಗೆ ತುಂಬಾ ಆತ್ಮೀಯರಾಗಿದ್ದರು. ಇಬ್ಬರದ್ದು ನಿಜವಾದ ಸ್ನೇಹಬಂಧ. ಇಂದು ಮೋದಿಜೀ ಭೇಟಿಯಾಗಲು ನನ್ನ ಮಗ ಅಪ್ರಮೆಯನನ್ನು ಕರೆದುಕೊಂಡು ಹೋಗಲು ಸಾಧ್ಯವಾಯಿತು. ನನ್ನ 4 ವರ್ಷದ ಮಗನ ಮಾತನ್ನು ಅವರು ತಾಳ್ಮೆಯಿಂದ ಕೇಳಿಸಿಕೊಂಡರು. ಚಾಕೊಲೇಟ್ ನೀಡಿ ಕಾಲೆಳೆದರು ಎಂದು ಬರೆದುಕೊಂಡಿದ್ದಾರೆ.

ಕುತೂಹಲ ಮೂಡಿಸಿದ ತೇಜಸ್ವಿನಿ ಅನಂತ್​ ಕುಮಾರ್ ಭೇಟಿ

ತೇಜಸ್ವಿನಿ, ಮೋದಿಯನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಯಾಕಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ವಿಧಾನ ಸಭೆ ಚುನಾವಣೆಯಲ್ಲ್ಲೂ ಅವಕಾಶ ಸಿಗಲಿಲ್ಲ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೇಜಸ್ವಿನಿ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋಗ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಅದಕ್ಕೆ ಸ್ಪಷ್ಟಣೆ ಕೊಟ್ಟಿರುವ ತೇಜಸ್ವಿನಿ ಅನಂತ್​ ಕುಮಾರ್ ನಾನು ಎಲ್ಲಿಗೂ ಹೋಗುವುದಿಲ್ಲ ಬಿಜೆಪಿಯಲ್ಲೇ ಇರುತ್ತೇನೆ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೇಜಸ್ವಿನಿ ಅನಂತ್ ಕುಮಾರ್ ಮೊಮ್ಮಗನ ಜೊತೆ ಪ್ರಧಾನಿ ಕ್ಯೂಟ್ ಹರಟೆ.. ಮೋದಿ ಹೆಂಗೆಲ್ಲ ಕೀಟಲೆ ಮಾಡಿದ್ರು ನೋಡಿ..! Photos

https://newsfirstlive.com/wp-content/uploads/2023/07/MODI-16-1.jpg

Load More