newsfirstkannada.com

ತೆಲಂಗಾಣ ಚುನಾವಣೆಯಲ್ಲಿ ದಾಖಲೆಯ ಹಣ ಸೀಜ್‌; ಎಷ್ಟು ಕೋಟಿ ನಗದು, ಚಿನ್ನ ಸಿಕ್ಕಿದೆ ಗೊತ್ತಾ?

Share :

08-11-2023

    ಅಕ್ಟೋಬರ್ 9ರಿಂದ ನವೆಂಬರ್ 7ರವರೆಗೆ ಬರೋಬ್ಬರಿ 518 ಕೋಟಿ

    292 ಕೆಜಿ ಚಿನ್ನ, 1,168 ಕೆಜಿ ಬೆಳ್ಳಿ ವಸ್ತು ಪೊಲೀಸರು, ಅಧಿಕಾರಿಗಳ ವಶ

    ಮತದಾನ ಹತ್ತಿರವಾಗುತ್ತಿದ್ದಂತೆ ಈ ದಾಖಲೆಯ ಹಣ ದುಪ್ಪಟ್ಟು ಸಾಧ್ಯತೆ

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಚಾಣದ ಸದ್ದು ಜೋರಾಗಿದೆ. ಎಲೆಕ್ಷನ್ ಡೇಟ್ ಘೋಷಣೆಯಾದ ಬಳಿ ಇದುವರೆಗೂ ಬರೋಬ್ಬರಿ 518 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ, ಹೆಂಡ ಹಾಗೂ ಬೆಲೆ ಬಾಳುವ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ತೆಲಂಗಾಣದಲ್ಲಿ ಅಕ್ಟೋಬರ್ 9ರಿಂದ ನವೆಂಬರ್ 7ರವರೆಗೆ ಬರೋಬ್ಬರಿ 518 ಕೋಟಿ ರೂಪಾಯಿ ನಗದು, ಚಿನ್ನ, ಬೆಳ್ಳಿ, ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 292 ಕೆಜಿ ಚಿನ್ನ, 1,168 ಕೆಜಿ ಬೆಳ್ಳಿ ಇದ್ದು, ಇದರ ಮೌಲ್ಯ 177 ಕೋಟಿ ರೂಪಾಯಿ ಎನ್ನಲಾಗಿದೆ.

ಇನ್ನು, 66 ಕೋಟಿ ರೂಪಾಯಿ ಮೌಲ್ಯದ ಮದ್ಯ, 30 ಕೋಟಿ ರೂಪಾಯಿ ಗಾಂಜಾ, 66 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ಹಾಗೂ ಫ್ರೀಬಿಗಳನ್ನು ಪೊಲೀಸರು, ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ನವೆಂಬರ್ 30ರಂದು ತೆಲಂಗಾಣ ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮತದಾನ ಹತ್ತಿರವಾಗುತ್ತಿದ್ದಂತೆ ಈ ದಾಖಲೆಯ ಹಣ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಡಿಸೆಂಬರ್ 3ರಂದು ತೆಲಂಗಾಣ ಚುನಾವಣೆಯ ಮಹತ್ವದ ರಿಸೆಲ್ಟ್ ಹೊರ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣ ಚುನಾವಣೆಯಲ್ಲಿ ದಾಖಲೆಯ ಹಣ ಸೀಜ್‌; ಎಷ್ಟು ಕೋಟಿ ನಗದು, ಚಿನ್ನ ಸಿಕ್ಕಿದೆ ಗೊತ್ತಾ?

https://newsfirstlive.com/wp-content/uploads/2023/06/MONEY-1.jpg

Load More