ಮಳೆಯಿಂದ ನಗರ ಪ್ರದೇಶಗಳಲ್ಲಿ ಉಲ್ಬಣಗೊಂಡ ಸಮಸ್ಯೆಗಳು
ಸಮಸ್ಯೆ ಆಲಿಸಲು ಭೇಟಿ ನೀಡದ ಸಿಎಂ ಕೆ.ಚಂದ್ರಶೇಖರ್ ರಾವ್
ಸಂತ್ರಸ್ತರು ಎಲ್ಲೆಡೆ ಪೋಸ್ಟರ್ ಅಂಟಿಸಿ ಸಿಎಂ ವಿರುದ್ಧ ಆಕ್ರೋಶ..!
ಹೈದರಾಬಾದ್: ತೆಲಂಗಾಣದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ರಸ್ತೆ, ಮೈದಾನ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರೋದ್ರಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ನದಿ, ಹೊಳೆಗಳು ಉಕ್ಕಿ ಹರಿದು ಕೆಲವು ಕಡೆಯಂತೂ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಅತಿವೃಷ್ಟಿಗೆ ಇಷ್ಟೆಲ್ಲಾ ಸಮಸ್ಯೆಗಳಾದರೂ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಮಾತ್ರ ಇಲ್ಲಿವರೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲವಂತೆ. ಹೀಗೆಂದು ಆರೋಪಿಸಿರುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಕಾಣೆಯಾಗಿದ್ದರಾ?; ಮುಖ್ಯಮಂತ್ರಿ ಮಿಸ್ಸಿಂಗ್ ಪೋಸ್ಟರ್ ಗುಟ್ಟೇನು?
ಸದ್ಯ ಸಿಎಂ ಕೆ.ಚಂದ್ರಶೇಖರ್ ರಾವ್ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿದ್ದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಮುಖ್ಯಮಂತ್ರಿ ಕೆಸಿಆರ್ ನಾಪತ್ತೆ ಆಗಿದ್ದಾರೆ ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿದೆ. 2020, 2022 ವರ್ಷಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿತ್ತು. ಈ ವರ್ಷವು ಜೋರು ಮಳೆ ನಿರಂತರವಾಗಿದೆ. ಆದ್ರೆ ಸಿಎಂ ಕೆಸಿಆರ್ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಸಿಎಂ ಕೆಸಿಆರ್ ಮಿಸ್ಸಿಂಗ್ ಎಂದು ಪೋಸ್ಟರ್ನಲ್ಲಿ ಬರೆದು ಅಲ್ಲಲ್ಲಿ ಅಂಟಿಸಲಾಗಿದೆ. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರೀ ಮಳೆಯಿಂದ ತೆಲಂಗಾಣದಲ್ಲಿ ಕೆಲವು ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೂ CM ಕೆ.ಚಂದ್ರಶೇಖರ್ ರಾವ್ ಎಲ್ಲಿಯು ಕಾಣಿಸಿಕೊಂಡಿಲ್ಲ. ಹೀಗಾಗಿ CM KCR ಮಿಸ್ಸಿಂಗ್ ಎಂಬ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ.#Newsfirstlive #CMKCR #Missing #TelanganaCM #Flood pic.twitter.com/1S79cQN7ML
— NewsFirst Kannada (@NewsFirstKan) July 29, 2023