newsfirstkannada.com

ಈ ರೈತರಿಗೆ ಗುಡ್​​ನ್ಯೂಸ್​.. ರಾಜ್ಯ ಸರ್ಕಾರದಿಂದ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ..!

Share :

Published June 22, 2024 at 8:46am

  ರೈತರ ಸಾಲ ಮನ್ನಾ ಮಾಡಲು ಒಪ್ಪಿಗೆ ಸೂಚಿಸಿರುವ ಸಚಿವ ಸಂಪುಟ

  5 ವರ್ಷಗಳವರೆಗೆ ರೈತರು ಬ್ಯಾಂಕ್​​ನಲ್ಲಿ ಮಾಡಿದ್ದ ಸಾಲ ಮನ್ನಾ

  ರಾಜ್ಯ ಸರ್ಕಾರ ಎಷ್ಟು ಲಕ್ಷ ರೈತರ ಸಾಲವನ್ನು ಮನ್ನಾ ಮಾಡುತ್ತೆ?

ಹೈದರಾಬಾದ್: ಬ್ಯಾಂಕುಗಳಿಂದ 2 ಲಕ್ಷ ರೂಪಾಯಿವರೆಗೆ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಹೇಳಿದ್ದಾರೆ. ಕೃಷಿಯನ್ನು ಹಬ್ಬದ ರೀತಿ ಆಚರಿಸುವುದೇ ಕಾಂಗ್ರೆಸ್ ನೀತಿಯಾಗಿದ್ದು ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್

ಸಭೆಯ ಬಳಿಕ ಸಿಎಂ ರೇವಂತ್ ರೆಡ್ಡಿಯವರು ಮಾಧ್ಯಮಗಳೊಂದಿಗೆ ಮಾತನಾಡಿ.. 2022ರಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ರೈತರ ಸಾಲ ಮನ್ನಾ ಮಾಡುವುದಾಗಿ ರಾಜ್ಯದ ರೈತರಿಗೆ ಭರವಸೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್​​ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಕೂಡ ಮಾತು ಕೊಟ್ಟಿದ್ದರು. ಸದ್ಯ ಇದನ್ನು ನೆರವೇರಿಸಲಾಗುತ್ತಿದೆ. ವಾರಂಗಲ್ಲನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಹುಲ್ ಗಾಂಧಿಯವರ ಭರವಸೆಯಂತೆ 2 ಲಕ್ಷ ರೂ.ಗಳವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕಾರಿನಲ್ಲಿ ಮಹಿಳೆಯನ್ನು ಎಳೆದೊಯ್ದ ಪಾಪಿಗಳು.. ಗಂಡನ ಕಡೆಯವರಿಂದ ನಡೀತಾ ಕೃತ್ಯ?

ಡಿಸೆಂಬರ್ 12, 2018 ರಿಂದ ಡಿಸೆಂಬರ್ 9, 2023 ರವರೆಗಿನ ರೈತರ ಎಲ್ಲಾ ಸಾಲಗಳನ್ನು ಒಂದೇ ಬಾರಿಗೆ ಮನ್ನಾ ಮಾಡಲಾಗುವುದು. ಈ ಉದ್ದೇಶಕ್ಕಾಗಿ 31 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾದಿಂದ 47 ಲಕ್ಷ ರೈತರಿಗೆ ಇದು ಲಾಭವಾಗಲಿದೆ. ಇದರಿಂದ ರಾಜ್ಯಕ್ಕೆ ಹೊರೆಯಾಗಲಿದ್ದು ಇದನ್ನು ಸರಿದೂಗಿಸಿಕೊಂಡು ಹೋಗುತ್ತೇವೆ. ಅದೇ ರೀತಿ ರೈತರ ಯೋಜನೆ ಭರೋಸಾ ಅನುಷ್ಠಾನ ತರಲು ಸಚಿವ ಸಂಪುಟ, ಉಪ ಸಮಿತಿ ರಚನೆ ಮಾಡಿದೆ. ಜುಲೈ 15ರೊಳಗೆ ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ನೀಡಲಿದ್ದು, ಅದರ ಆಧಾರದ ಮೇಲೆ ರೈತರ ವಿಮಾ ಪಾಲಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರೈತರಿಗೆ ಗುಡ್​​ನ್ಯೂಸ್​.. ರಾಜ್ಯ ಸರ್ಕಾರದಿಂದ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ..!

https://newsfirstlive.com/wp-content/uploads/2024/06/FARMER_NEW.jpg

Load More