ಚುನಾವಣೆ ಱಲಿಯ ಭಾಷಣದ ವೇಳೆ ನಿದ್ದೆಗೆ ಜಾರಿದ ಸಚಿವ
ಎಲೆಕ್ಷನ್ಗೆ ಇನ್ನೇನು ಕೆಲವೇ ದಿನಗಳು ಬಾಕಿ, ಕ್ಷೇತ್ರಗಳಲ್ಲಿ ಪ್ರಚಾರ
ಱಲಿಯಲ್ಲಿ ನಿದ್ದೆ ಮಾಡಿದ ಸಚಿವರ ವಿಡಿಯೋ ಫುಲ್ ವೈರಲ್
ಹೈದರಾಬಾದ್: ತೆಲಂಗಾಣದ ರಾಜಕೀಯ ನಾಯಕರು ಮತದಾರ ಪ್ರಭುಗಳನ್ನು ಸೆಳೆಯಲು ಪ್ರಚಾರದಲ್ಲಿ ಮುಳುಗಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಉಳಿದಿದ್ದರಿಂದ ವಿವಿಧ ಪಕ್ಷಗಳ ನಾಯಕರು ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಈ ಪ್ರಚಾರ ಭರಾಟೆಯ ಮಧ್ಯೆ ಎಲೆಕ್ಷನ್ ಕ್ಯಾಂಪೇನ್ ವೇಳೆ ತೆಲಂಗಾಣದ ಸಚಿವ ಗಂಗುಲು ಕಮಲಾಕರ್ ರೆಡ್ಡಿ ಅವರು ನಿದ್ದೆಗೆ ಜಾರಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸಚಿವ ಗಂಗುಲು ಕಮಲಾಕರ್ ರೆಡ್ಡಿ, ಚುನಾವಣೆ ಸಮಾವೇಶದ ಭಾಷಣದ ವೇಳೆ ನಿದ್ದೆಗೆ ಜಾರಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾನ ಪ್ರಭುಗಳನ್ನು ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಿಆರ್ಎಸ್ ಪಕ್ಷದ ಸಚಿವ ಗಂಗುಲು ಕಮಲಾಕರ್ ಚುನಾವಣಾ ಪ್ರಚಾರದಲ್ಲೂ ಗಡದ್ ನಿದ್ದೆಯಲ್ಲಿ ತೇಲಾಡುತ್ತಿದ್ದಾರೆ.
సాలు గంగుల ఇక లే గంగుల 😅#SaaluGangulaSelavuGangula pic.twitter.com/GmhIUYhO2M
— Thejaswini🚩 (@Himalayan_Bee) November 16, 2023
ಅದು ಬೇರೆ ಱಲಿಯಲ್ಲಿ ಭಾಷಣ, ಶಿಳ್ಳೆ, ಕೇಕೆ, ಫುಲ್ ಗಲಾಟೆ ಈ ಎಲ್ಲದರ ನಡುವೆಯು ಸಚಿವರು ನಿದ್ದೆ ಮಾಡುತ್ತಿರುವುದು ಎಲ್ಲರಿಗೂ ಆಶ್ಚರ್ಯನ್ನು ಮೂಡಿಸಿದೆ. ರೋಡ್ ಶೋ ನಡುವೆ ತೂಕಡಿಸಿದ್ದಾರೆ. ನಡು ನಡುವೆ ನಿದ್ರೆಯಿಂದ ಎದ್ದ ಸಚಿವರು ದೊಡ್ಡದಾಗಿ ಬಾಯಿ ತೆರೆದು ಆಕಳಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಷಿಯಲ್ ಮಿಡಿಯಾದಲ್ಲಿ ಕೆಲವೊಬ್ಬರು ಇದನ್ನು ಟ್ರೋಲ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ