newsfirstkannada.com

ತೆಲಂಗಾಣ ಚುನಾವಣೆ ಗೆಲ್ಲಲು ಗ್ಯಾರೆಂಟಿ ಅಸ್ತ್ರ ಪ್ರಯೋಗ.. ಕಾಂಗ್ರೆಸ್​ನಿಂದ ಭರ್ಜರಿ ಪ್ಲಾನ್​​

Share :

18-09-2023

  ರೈತರಿಗೆ ವಾರ್ಷಿಕ 15,000, ಕೃಷಿ ಕಾರ್ಮಿಕರಿಗೆ 12,000 ನೆರವು

  ‘ರಾಜೀವ್ ಆರೋಗ್ಯ ಶ್ರೀ’ ವಿಮೆಯಡಿ 10 ಲಕ್ಷ ರೂಪಾಯಿ ವಿಮೆ

  ಮಹಿಳೆಯರಿಗೆ ಆರ್ಥಿಕ ನೆರವು ಮಾಸಿಕ 2,500 ರೂಪಾಯಿ

ಹೈದರಾಬಾದ್: ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್​ ಕಹಳೆ ಮೊಳಗಿಸಿದೆ. ತೆಲಂಗಾಣವನ್ನು ಕೈವಶ ಮಾಡಿಕೊಳ್ಳಲು ಕರ್ನಾಟಕದ ಮಾದರಿಯ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಕೆಸಿಆರ್​ ಕೋಟೆಯಲ್ಲಿ ಕಾಂಗ್ರೆಸ್​ ಶಕ್ತಿ ಪ್ರದರ್ಶನವನ್ನು ಮಾಡಿದೆ.

ತೆಲಂಗಾಣ ಕದನಕ್ಕೆ ‘ವಿಯಜಭೇರಿ’ ಮೊಳಗಿಸಿದ ‘ಹಸ್ತ’
ಕರ್ನಾಟಕ ಮಾದರಿಯ ಗೆಲುವಿಗೆ ಕೈ ‘ಗ್ಯಾರೆಂಟಿ’ ಅಸ್ತ್ರ

ದೇಶಾದ್ಯಂತ ನಡೆದ ಚುನಾವಣೆಗಳಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್​ನ ಕೈ ಹಿಡಿದಿದ್ದೇ ಕರ್ನಾಟಕ. ಕರ್ನಾಟಕದಲ್ಲಿ ಸಿಕ್ಕಿರೋ ಗೆಲುವು ಕಾಂಗ್ರೆಸ್‌ ಪಾಲಿಗೆ. ರಾಷ್ಟ್ರ ರಾಜಕೀಯದಲ್ಲಿ ಪುನರ್‌ ಜನ್ಮ ಪಡೆಯಲು ಸಿಕ್ಕಿರೋ ಪಾಶುಪತಾಸ್ತ್ರವಾದಂತಿದೆ. ಹೀಗಾಗಿಯೇ ಪಂಚ ರಾಜ್ಯಗಳ ಎಲೆಕ್ಷನ್‌ ಅತ್ತ ಕಾಂಗ್ರೆಸ್‌ ಮುನ್ನುಗ್ಗಿ ಹೋಗ್ತಿದೆ. ಅದರಲ್ಲಿಯೂ ಈ ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಮತಯುದ್ಧಕ್ಕೆ ಕರ್ನಾಟಕದ ಗ್ಯಾರೆಂಟಿ ಮಾದರಿಯಲ್ಲಿ ಕಾಂಗ್ರೆಸ್​ ವಿಜಯಭೇರಿಯನ್ನು ಮೊಳಗಿಸಿದೆ.

ತೆಲಂಗಾಣದ ಜನತೆಗೆ ಕಾಂಗ್ರೆಸ್​ನಿಂದ 6 ಗ್ಯಾರೆಂಟಿ ಘೋಷಣೆ

ತೆಲಂಗಾಣದ ತಕ್ಕುಗುಡಾದಲ್ಲಿ ಕಾಂಗ್ರೆಸ್‌ ವಿಜಯಭೇರಿ ಸಮಾವೇಶ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕೂ ಮುನ್ನ ತೆಲಂಗಾಣ ಏಕೀಕರಣದ ದಿನದ ಅಂಗವಾಗಿ ಕಾಂಗ್ರೆಸ್​ ನಾಯಕರು ಮೆಗಾ ಱಲಿ ನಡೆಸಿದ್ದರು. ಇನ್ನು, ಕಾಂಗ್ರೆಸ್​ನ ವಿಜಯಭೇರಿ ಸಮಾವೇಶದಲ್ಲಿ ಜನಸಾಗರವೇ ಸೇರಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಬೃಹತ್​ ವೇದಿಕೆಗೆ ಆಗಮಿಸಿದ ರಾಹುಲ್​, ಸೋನಿಯಾ, ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರತ್ತ ಕೈ ಬೀಸಿದ್ದರು. ವಿಜಯಭೇರಿ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕರು, ಸೋನಿಯಾ ಗಾಂಧಿ ಮೂಲಕ ತೆಲಂಗಾಣದ ಜನತೆಗಾಗಿ ಕರ್ನಾಟಕದ ಮಾದರಿಯಲ್ಲಿ ಗ್ಯಾರೆಂಟಿ ಘೋಷಣೆಗಳನ್ನು ಮಾಡಿದ್ದರು.

ಭಾರತದ ಭೂಪಟದಲ್ಲಿ ಸೋನಿಯಾಗಾಂಧಿ ಅವತಾರ

ತೆಲಂಗಾಣದ ತಕ್ಕುಗುಡಾದಲ್ಲಿ ವಿಯಜಭೇರಿ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಹೋರ್ಡಿಂಗ್ಸ್​ ಗಮನ ಸೆಳೆಯಿತು. ಇದರಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಭಾರತಮಾತೆಯ ಅವತಾರದಲ್ಲಿ ಬಿಂಬಿಸಲಾಗಿತ್ತು. ಭಾರತದ ಭೂಪಟದಲ್ಲಿ ಸೋನಿಯಾ ಗಾಂಧಿ ನಿಂತಿರುವಂತೆ ಹೋರ್ಡಿಂಗ್ಸ್​ ಹಾಕಿದ್ದು, ಎಲ್ಲರ ಗಮನ ಸೆಳೆದಿದೆ.

CWC ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪ

ಇನ್ನು ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ರಾಷ್ಟ್ರ ರಾಜಧಾನಿಯಿಂದ ಆಚೆಗೆ ನಡೆದಿದೆ. ಹೈದರಾಬಾದ್‌ನಲ್ಲಿ 2 ದಿನಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಪಂಚರಾಜ್ಯಗಳ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ, ಸಂಘಟನಾತ್ಮಕ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹಾಗೂ ತೆಲಂಗಾಣ ವಿಧಾನಸಭೆಗೆ ನವಶಕ್ತಿಯೊಂದಿಗೆ ಮತ್ತು ಸ್ಪಷ್ಟ ಸಂದೇಶದೊಂದಿಗೆ ಪಕ್ಷವು ಪ್ರಚಾರ ನಡೆಸಲಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಕೆಸಿಆರ್​ ಕೋಟೆಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಪಾಳಯ ರಣಕಹಳೆ ಮೊಗಳಗಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ನ ಕೈ ಹಿಡಿದ ಗ್ಯಾರೆಂಟಿ ಯೋಜನೆಗಳು ತೆಲಂಗಾಣದಲ್ಲೂ ಕೈ ಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣ ಚುನಾವಣೆ ಗೆಲ್ಲಲು ಗ್ಯಾರೆಂಟಿ ಅಸ್ತ್ರ ಪ್ರಯೋಗ.. ಕಾಂಗ್ರೆಸ್​ನಿಂದ ಭರ್ಜರಿ ಪ್ಲಾನ್​​

https://newsfirstlive.com/wp-content/uploads/2023/09/congress-3.jpg

Load More