newsfirstkannada.com

×

ಅಬ್ಬಬ್ಬಾ! ಒಂದು ಗಣಪತಿ ಲಡ್ಡು ಹರಾಜಿಗಿದ್ದು ಎಷ್ಟು ಕೋಟಿಗೆ ಗೊತ್ತಾ? ಸ್ಟೋರಿ ಓದಿದ್ರೆ ಸ್ಟನ್​ ಆಗ್ತೀರಾ!

Share :

Published September 18, 2024 at 6:20am

    ಕಳೆದ ಬಾರಿಗಿಂತ ಈ ಸಲ ಅಧಿಕ ಹಣಕ್ಕೆ ಗಣಪನ ಲಾಡು ಹರಾಜು

    ವಿನಾಯಕನ ಲಡ್ಡು ಹರಾಜಿನಲ್ಲಿ ಎಷ್ಟು ಜನರು ಭಾಗಿಯಾಗಿದ್ದರು..?

    ಒಂದೇ ಒಂದು ಲಡ್ಡು ಎಷ್ಟು ಕೋಟಿ ರೂಪಾಯಿಗೆ ಹರಾಜು ಆಗಿದೆ?

ಗಣೇಶ ಹಬ್ಬಕ್ಕೆ ಎಲ್ಲಿಲ್ಲದ ಸಡಗರ, ಸಂಭ್ರಮ ನಡೆದಿರುತ್ತೆ. ಒಬ್ಬರಿಗಿಂತ ಮತ್ತೊಬ್ಬರು ದೊಡ್ಡ ದೊಡ್ಡ ವಿನಾಯಕನನ್ನ ಪ್ರತಿಷ್ಠಾಪನೆ ಮಾಡುತ್ತಾರೆ. ಗಣೇಶ ವಿಸರ್ಜನೆ ಮಾಡುವಾಗ ಮೆರವಣಿಗೆಗೆ ಡಿಜೆ​ ತಂದು ಅದ್ಧೂರಿಯಾಗೇ ಮಾಡುತ್ತಾರೆ. ಇಷ್ಟೇ ಅಲ್ಲದೇ ಪ್ರಸಾದ ವ್ಯವಸ್ಥೆ ಕೂಡ ದೊಡ್ಡ ಮಟ್ಟದಲ್ಲಿ ಭಕ್ತರು ಮಾಡಿರುತ್ತಾರೆ. ಸದ್ಯ ಗಣಪನ ಒಂದು ಲಡ್ಡು ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಬಂಡ್ಲಗೂಡ ಜಾಗೀರ್ ಪ್ರದೇಶದ ಕೀರ್ತಿ ರಿಚ್ಮಂಡ್ ವಿಲ್ಲಾಸನಲ್ಲಿ ಈ ಲಡ್ಡು ಹರಾಜು ಕಾರ್ಯಕ್ರಮ ಮಾಡಲಾಗಿದೆ. ಗಣಪನ ಲಡ್ಡು ಅನ್ನು ದೊಡ್ಡ ಮಟ್ಟದಲ್ಲಿ ಹರಾಜಿಗೆ ಇಡಲಾಗಿತ್ತು. ಹರಾಜಿನಲ್ಲಿ ಒಟ್ಟು 100 ಜನ ಭಾಗಿಯಾಗಿದ್ದರು. ಇದರಲ್ಲಿ 25 ಮಂದಿಗೆ ಒಂದು ಗುಂಪಿನಂತೆ 4 ಗ್ರೂಪ್​ಗಳನ್ನು ಮಾಡಲಾಗಿತ್ತು. ಲಡ್ಡು ಹರಾಜಿನಲ್ಲಿ ಭಾಗಿಯಾಗಿದ್ದ 4 ಗ್ರೂಪ್​ಗಳ ಪೈಕಿ ಒಂದು ಗುಂಪು ಬರೋಬ್ಬರಿ 1 ಕೋಟಿ 87 ಲಕ್ಷ ರೂಪಾಯಿಗಳಿಗೆ ಲಡ್ಡು ಅನ್ನು ತಮ್ಮದಾಗಿಸಿಕೊಂಡಿದೆ.

ಇದನ್ನೂ ಓದಿ: ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

ಈ ಮೂಲಕ ತಮ್ಮದೇ ದಾಖಲೆಯನ್ನು ಬ್ರೇಕ್ ಮಾಡಿದಂತೆ ಆಗಿದೆ. ಕಳೆದ ವರ್ಷ ಇದೇ ಗಣಪನ ಲಡ್ಡು 1 ಕೋಟಿ 26 ಲಕ್ಷ ರೂಪಾಯಿಗಳಿಗೆ ಹರಾಜು ಆಗಿತ್ತು. ಕಳೆದ ಬಾರಿಗಿಂತ ಈ ಸಲ 61 ಲಕ್ಷ ರೂಪಾಯಿಗಳು ಹೆಚ್ಚಿಗೆ ಲಡ್ಡು ಹರಾಜು ಆಗಿದೆ. 1994ರಿಂದ ಈ ಗಣಪನ ಲಡ್ಡು ಹರಾಜು ಪ್ರಕ್ರಿಯೆ ಮಾಡಿಕೊಂಡು ಬರಲಾಗುತ್ತಿದೆ. ವಿನಾಯಕನ ವಿಸರ್ಜನೆ ದಿನ ಈ ಲಡ್ಡು ಆಕ್ಷನ್ ಅನ್ನು ಏರ್ಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ! ಒಂದು ಗಣಪತಿ ಲಡ್ಡು ಹರಾಜಿಗಿದ್ದು ಎಷ್ಟು ಕೋಟಿಗೆ ಗೊತ್ತಾ? ಸ್ಟೋರಿ ಓದಿದ್ರೆ ಸ್ಟನ್​ ಆಗ್ತೀರಾ!

https://newsfirstlive.com/wp-content/uploads/2024/09/GANESH_LADDU_1.jpg

Load More