newsfirstkannada.com

‘ಹೆಣ್ಣು ಮಕ್ಕಳು ತುಂಡು ಉಡುಗೆ ತೊಟ್ರೆ ಪ್ರಾಬ್ಲಂ ಗುರು’- ವಿವಾದಕ್ಕೆ ಗುರಿಯಾಯ್ತು ಗೃಹ ಸಚಿವರ ಹೇಳಿಕೆ

Share :

17-06-2023

    ಮಹಿಳೆಯರು ಯಾವ ರೀತಿ ಬಟ್ಟೆ ಧರಿಸಿದ್ರೆ ಒಳ್ಳೆಯದು ಎಂದ ಸಚಿವ

    ಮೈತುಂಬಾ ಬಟ್ಟೆ ಧರಿಸಿದರೆ ಜನರು ನೆಮ್ಮದಿಯಾಗಿರಲು ಸಾಧ್ಯವಂತೆ

    ಹೆಣ್ಣು ಮಕ್ಕಳು ತುಂಡು ಉಡುಗೆ ತೊಟ್ಟರೆ ಸಮಸ್ಯೆಗಳು ಹೆಚ್ಚಾಗುತ್ತಾ?

ಹೈದರಾಬಾದ್‌: ಮಹಿಳೆಯರು, ಹೆಣ್ಣು ಮಕ್ಕಳು ಯಾವ ರೀತಿಯ ಬಟ್ಟೆ ಧರಿಸಬೇಕು ಅನ್ನೋದರ ಬಗ್ಗೆ ತೆಲಂಗಾಣ ಗೃಹ ಸಚಿವ ಮೊಹಮೊದ್ ಅಲಿ ನೀಡಿರೋ ಹೇಳಿಕೆ ಹಲ್‌ಚಲ್ ಸೃಷ್ಟಿಸಿದೆ. ಹೆಣ್ಣು ಮಕ್ಕಳು ತುಂಡು ಉಡುಗೆ ತೊಡುವುದರಿಂದಲೇ ಸಮಸ್ಯೆಗಳು ಶುರುವಾಗುತ್ತವೆ. ಹೀಗಾಗಿ ಹಿಂದೂ, ಮುಸ್ಲಿಂ ಧರ್ಮದ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವುದೇ ಉತ್ತಮ ಎಂದು ಮೊಹಮದ್ ಅಲಿ ಹೇಳಿದ್ದಾರೆ.

ಇತ್ತೀಚಿಗೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಬುರ್ಖಾ ನಿಷೇಧದ ಸದ್ದು ಸಖತ್ ಸುದ್ದಿಯಾಗಿದೆ. ಮಹಿಳಾ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆಯುವಾಗ ಕೆಲವು ವಿದ್ಯಾರ್ಥಿನಿಯರು ಧರಿಸಿದ್ದ ಬುರ್ಖಾಗಳನ್ನು ತೆಗೆಸಲಾಗಿತ್ತು. ಈ ಬಗ್ಗೆ ಪ್ರಶ್ನಿಸುವಾಗ ತೆಲಂಗಾಣ ಗೃಹ ಸಚಿವರು ಮಹಿಳೆಯರು ಯಾವ ರೀತಿಯ ಬಟ್ಟೆ ಧರಿಸಬೇಕು ಅನ್ನೋ ಬಗ್ಗೆ ಪಾಠ ಮಾಡಿದ್ದಾರೆ.

ನೀವು ನಿಮಗಿಷ್ಟವಾದ ಬಟ್ಟೆಯನ್ನು ಧರಿಸಬಹುದು. ಆದ್ರೆ ಪಾಶ್ಚಾತ್ಯ ಸಂಸ್ಕೃತಿಯ ಮಾರ್ಡನ್ ಬಟ್ಟೆಗಳನ್ನು ಧರಿಸುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೆಣ್ಣು ಮಕ್ಕಳು ತುಂಡು ಉಡುಗೆ ತೊಡುವುದರಿಂದಲೇ ಸಮಸ್ಯೆಗಳು ಶುರುವಾಗುತ್ತವೆ. ಇನ್ನು ಮಹಿಳೆಯರು ಮೈತುಂಬಾ ಬಟ್ಟೆ ಧರಿಸಿದರೆ ಜನರು ನೆಮ್ಮದಿಯಾಗಿರಲು ಸಾಧ್ಯವಿದೆ. ಹೆಣ್ಣು ಮಕ್ಕಳು ದುಪ್ಪಟ್ಟಾದಿಂದ ತಲೆಯನ್ನು ಮುಚ್ಚಿಕೊಳ್ಳಬೇಕು. ಮಹಿಳೆಯರು ಹಿಂದೂ, ಮುಸ್ಲಿಂ ಧರ್ಮದ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಧರಿಸುವುದೇ ಉತ್ತಮ. ಸಾಂಪ್ರಾದಾಯಿಕ ಬಟ್ಟೆ ಧರಿಸುವುದರಿಂದ ಮಹಿಳೆಯರ ಮೇಲೆ ಗೌರವವು ಹೆಚ್ಚಾಗುತ್ತದೆ ಎಂದು ಗೃಹ ಸಚಿವ ಮೊಹಮೊದ್ ಅಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಹೆಣ್ಣು ಮಕ್ಕಳು ತುಂಡು ಉಡುಗೆ ತೊಟ್ರೆ ಪ್ರಾಬ್ಲಂ ಗುರು’- ವಿವಾದಕ್ಕೆ ಗುರಿಯಾಯ್ತು ಗೃಹ ಸಚಿವರ ಹೇಳಿಕೆ

https://newsfirstlive.com/wp-content/uploads/2023/06/Telangana-Home-Minister.jpg

Load More