ಬೆಂಗಳೂರಲ್ಲಿ ಕಷ್ಟ ನಮ್ಮಲ್ಲಿ ಒಳ್ಳೇ ವ್ಯವಸ್ಥೆ ಇದೆ ಎಂದಿದ್ದ ಸಚಿವ
ಮೂರೇ ದಿನದಲ್ಲಿ ಮುತ್ತಿನನಗರಿ ಅಸಲಿ ಮುಖವಾಡ ಬಯಲು
ಬಡಾಯಿ ಕೊಚ್ಚಿಕೊಂಡಿದ್ದ ಕೆ.ಟಿ. ರಾಮರಾವ್ ಈಗ ಹೇಳಿದ್ದೇನು?
ಹೈದರಾಬಾದ್: ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ದಿನನಿತ್ಯದ ಗೋಳು ಅಂದ್ರೆ ಟ್ರಾಫಿಕ್ ಜಾಮ್.. ಜಾಮ್.. ಜಾಮ್. ಬೆಳಗ್ಗೆದ್ದು ಆಫೀಸ್‌ಗೆ ಹೋಗೋರು ಸಂಜೆ ಆದ್ರೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಸುಸ್ತಾಗಿ ಬಿಡ್ತಾರೆ. ಕೆಲಸದ ಒತ್ತಡಕ್ಕಿಂತ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡೋದೆ ಬಹಳ ಕಷ್ಟ. ಪೀಕ್ ಅವರ್ಸ್ನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳೋದು ಸಾಧ್ಯವೇ ಇಲ್ಲ. ಇದಕ್ಕೆ ನಮ್ಮ ಬೆಂಗಳೂರು ಕೂಡ ಹೊರತಲ್ಲ. ಆದ್ರೆ ಬೆಂಗಳೂರಿನ ಬಗ್ಗೆ ನೆರೆ ರಾಜ್ಯದ ಸಚಿವರೊಬ್ಬರು ಆಡಿಕೊಂಡಿದ್ದರು. ಈಗ ಅವ್ರದ್ದೇ ರಾಜ್ಯದ ವಾಸ್ತವ ಚಿತ್ರಣ ಕಂಡು ಕಂಗಾಲಾಗಿ ಹೋಗಿದ್ದಾರೆ. ಬೆಂಗಳೂರು ಟ್ರಾಫಿಕ್ ಟೀಕಿಸಿ ಬಡಾಯಿ ಕೊಚ್ಚಿಕೊಂಡ ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಅವರಿಗೆ ಭಾರೀ ಮುಜಗರ ಆಗಿದೆ.
ಅಬ್ಬಾ.. ಈ ಟ್ರಾಫಿಕ್ ಜಾಮ್ ದೃಶ್ಯಗಳನ್ನ ನೋಡಿದ್ರೆ ಭಯವೇ ಆಗುತ್ತೆ. ಇದು ತೆಲಂಗಾಣ ರಾಜಧಾನಿ ಹೈದರಾಬಾದ್ನ ಇತ್ತೀಚೆಗೆ ಕಂಡು ಬಂದ ದೃಶ್ಯಗಳು. ಕಳೆದ ಮೂರು ನಾಲ್ಕು ದಿನಗಳಿಂದ ಮುತ್ತಿನ ನಗರಿಯಲ್ಲಿ ನಿರಂತರ ಟ್ರಾಫಿಕ್ ಜಾಮ್ ಆಗುತ್ತಿದೆ. ಹೈದರಾಬಾದ್ ನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಸ್ಕೈ ವ್ಯೂ, ಐಕಿಯಾ, ಹೈಟೆಕ್ ಸಿಟಿ ಬಳಿ ಸಂಜೆಯಾದ್ರೆ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಎದುರಾಗುತ್ತಿದೆ. ಮಳೆಯಿಂದಾಗಿ ಐ.ಟಿ ಕಂಪನಿಗಳು ಇರೋ ಪ್ರದೇಶದಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ ಹೈರಾಣಾಗಿ ಹೋಗುತ್ತಿದ್ದಾರೆ. ಈ ಟ್ರಾಫಿಕ್‌ನ ದೃಶ್ಯಗಳು ಹೈದರಾಬಾದ್ ಮಹಾನಗರದಲ್ಲಿರುವ ಮೂಲಸೌಕರ್ಯದ ಬಣ್ಣ ಬಯಲು ಮಾಡಿದೆ.
ಕೆಲವೇ ಕೆಲವು ತಿಂಗಳ ಹಿಂದೆ ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಸಮಸ್ಯೆ ಇದೆ. ಪೀಕ್ ಅವರ್ಸ್ನಲ್ಲಿ ಬೈಕ್, ಕಾರುಗಳಲ್ಲಿ ಓಡಾಡೋದು ಸುಲಭದ ಮಾತೇ ಅಲ್ಲ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವೇಳೆ ತೆಲಂಗಾಣ ಐಟಿ ಸಚಿವರಾಗಿರುವ ಕೆ.ಟಿ. ರಾಮರಾವ್ ಅವರು ಟ್ವೀಟ್ ಮಾಡಿ, ಬೆಂಗಳೂರಲ್ಲಿ ಕಷ್ಟ. ನಮ್ಮಲ್ಲಿ ಒಳ್ಳೇ ವ್ಯವಸ್ಥೆ ಇದೆ ಇಲ್ಲಿಗೆ ಬಂದ್ಬಿಡಿ ಅಂತಾ ಬಡಾಯಿ ಕೊಚ್ಚಿಕೊಂಡಿದ್ರು.
ಇನ್ನೊಬ್ಬರ ಮನೆಯ ದೋಸೆ ತೂತು ಅಂತಾ ಹೇಳೋ ಮೊದಲು ನಮ್ಮ ಮನೆ ಹಂಚಿನ ಸ್ಥಿತಿ ಹೆಂಗಿದೆ ಅನ್ನೋದನ್ನ ನೋಡ್ಕೋಬೇಕಂತೆ. ಇದನ್ನ ಮರೆತೋದ ಕೆಟಿಆರ್, ಬೆಂಗಳೂರಿನ ಕಾಲೆಳೆಯೋ ಯತ್ನ ಮಾಡಿದ್ರು. ಆದ್ರೀಗ, ಹೈದರಾಬಾದ್ನಲ್ಲಿ ಉಂಟಾಗ್ತಿರೋ ಟ್ರಾಫಿಕ್ ಸಮಸ್ಯೆ ನಿಭಾಯಿಸೋಕೆ ಆಗದೆ ಅವ್ರೇ ಹೈರಾಣ ಆಗೋಗಿದ್ದಾರೆ. ಜನರು ವಾಹನಗಳನ್ನ ಶೇರ್ ಮಾಡ್ಕೊಂಡು ಓಡಾಡಿ ಅಂತಾ ಮನವಿ ಮಾಡ್ತಿದ್ದಾರೆ. ಇತ್ತ ಹೈದರಾಬಾದ್ನ ಐಟಿ, ಬಿಟಿ ಉದ್ಯೋಗಿಗಳು ಈ ಟ್ರಾಫಿಕ್ ಕಿರಿಕಿರಿ ಬೇಡ್ವೇ ಬೇಡ. ನಮಗೆ ವರ್ಕ್ ಫ್ರಮ್ ಹೋಮ್ಗೆ ಅವಕಾಶ ಕೊಡಿ ಅಂತ ತಮ್ಮ ಸಂಸ್ಥೆಗಳಲ್ಲಿ ಡಿಮ್ಯಾಂಡ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
I think before the concept of Remote or Hybrid working policies was forced to withdraw, #Hyderabad should have had this planned better. #Hyderabadtraffic #KTR #congestion pic.twitter.com/UcrGruCxgR
— Milind Damare (@milinda143) July 24, 2023