BRS ಪಕ್ಷದ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಕೆಟಿಆರ್
ಮುಂದಿನ ವಾಹನಕ್ಕೆ ಡಿಕ್ಕಿಯಾಗುತ್ತದೆಂದು ಚಾಲಕನಿಂದ ಸಡನ್ ಬ್ರೇಕ್
ವಾಹನದ ಮೇಲಿನಿಂದ ಬೀಳುತ್ತಿರುವ ಸಚಿವ KTR ವಿಡಿಯೋ ವೈರಲ್
ಹೈದರಾಬಾದ್: ತೆಲಂಗಾಣದ ರಾಜಕೀಯ ನಾಯಕರು ಮತದಾರ ಪ್ರಭುಗಳನ್ನು ಸೆಳೆಯಲು ಪ್ರಚಾರದಲ್ಲಿ ಮುಳುಗಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಉಳಿದಿದ್ದರಿಂದ ವಿವಿದ ಪಕ್ಷಗಳ ನಾಯಕರು ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಈ ಪ್ರಚಾರ ಭರಾಟೆಯ ಮಧ್ಯೆ ಐಟಿ ಸಚಿವ ಕೆಟಿ ರಾಮರಾವ್ ಅವರು ಪಕ್ಷದ ಅಭ್ಯರ್ಥಿಯೊಬ್ಬರ ಪರ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ವಾಹನದ ಮೇಲಿನಿಂದ ಮುಗ್ಗರಿಸಿ ಬಿದ್ದಿದ್ದಾರೆ. ಇದರಿಂದ ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದ್ದು ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ವಾಹನದ ಮೇಲೆ ನಿಂತು ಸಿಎಂ ಕೆಸಿಆರ್ ಪುತ್ರ ಸಚಿವ ಕೆಟಿ ರಾಮರಾವ್ ಅವರು ಪ್ರಚಾರ ಮಾಡುತ್ತಾ ಇದ್ದರು. ಪಕ್ಷದ ಅಭ್ಯರ್ಥಿ ಜೀವನ್ ರೆಡ್ಡಿ ಪರ ನಾಪಮತ್ರ ಸಲ್ಲಿಕೆಗೆ ತೆರಳುತ್ತಿದ್ದರು. ಈ ವೇಳೆ ಪ್ರಚಾರದ ವಾಹನ ಚಲಿಸುವಾಗ ಮುಂದಿರುವ ಇನ್ನೊಂದು ವಾಹನಕ್ಕೆ ಎಲ್ಲಿ ಡಿಕ್ಕಿಯಾಗುತ್ತದೋ ಎಂದು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ.
Karma.!!?
Action Reaction
from KTR from the GodPrayers for @KTRBRS's safety 🙏 pic.twitter.com/opowh7Ccs6
— Gems Of KCR (@GemsOfKCR) November 9, 2023
ಇದರಿಂದ ವಾಹನದ ಮೇಲಿನಿಂದ ಪ್ರಚಾರ ಮಾಡುತ್ತಿದ್ದ ಸಚಿವ ಕೆಟಿ ರಾಮರಾವ್, ಜೀವನ್ ರೆಡ್ಡಿ ಹಾಗೂ ಸುರೇಶ್ ರೆಡ್ಡಿ ಸೇರಿದಂತೆ ಇತರೆ ರಾಜಕೀಯ ಪಕ್ಷದ ನಾಯಕರು ಮುಗ್ಗರಿಸಿ ಬಿದ್ದಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ ಎಂದು ಹೇಳಲಾಗಿದೆ. ಕೆಟಿ ರಾಮರಾವ್ ಅವರನ್ನು ಗನ್ಮ್ಯಾನ್ ಹಿಡಿದುಕೊಂಡಿದ್ದರಿಂದ ನೆಲಕ್ಕೆ ಬೀಳುವುದನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ.
ಇನ್ನು ಕೆಟಿ ರಾಮರಾವ್ ದೇವರಿಗೆ ನಮಸ್ಕಾರ ಮಾಡುವ ವೇಳೆ ಇಬ್ಬರು ಪೂಜಾರಿಗಳು ಬಂದಿದ್ದಾರೆ. ಅವರಿಗೆ ನಮಸ್ಕಾರ ಮಾಡಲೆಂದು ಬರುವಾಗ ದೇವರ ಫೋಟೋ ಬಳಿಯೇ ಚಪ್ಪಲಿಗಳನ್ನು ಬಿಟ್ಟು ಬಂದು ಪೂಜಾರಿಗಳಿಗೆ ನಮಸ್ಕಾರ ಮಾಡಿದ್ದಾರೆ. ಇದಕ್ಕಾಗಿಯೇ ಕೆಟಿಆರ್ ಮೇಲಿನಿಂದ ಬಿದ್ದಿದ್ದಾರೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ