newsfirstkannada.com

WATCH: ಸಿಎಂ ಪುತ್ರನ ಮುಂದೆಯೇ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಸಚಿವ.. ಕಾರಣವೇನು?

Share :

20-08-2023

  ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯನ್ನ ಎಳೆದು ಬಾರಿಸಿದ ಸಚಿವ

  ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ ಎಂದ ಬಿಜೆಪಿ ನಾಯಕರು

  ಬ್ರಿಡ್ಜ್​ ಉದ್ಘಾಟನೆ ಸಮಾರಂಭದಲ್ಲಿ ಸಚಿವನ ಕಪಾಳಮೋಕ್ಷ

ಹೈದರಾಬಾದ್: ಬಿಆರ್​ಎಸ್​ ಪಕ್ಷದ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರು ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನ ಹಿಂಬದಿಯಿಂದ ಎಳೆದು ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದ ಆರ್​ಟಿಸಿ ಕ್ರಾಸ್​ನಲ್ಲಿ ನಿರ್ಮಾಣ ಮಾಡಲಾಗಿರುವ ಐಕಾನಿಕ್​ ಸ್ಟೀಲ್​ ಬ್ರಿಡ್ಜ್​ನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ತೆಲಂಗಾಣ ಸಿಎಂ ಪುತ್ರ ಹಾಗೂ ಸಚಿವ ಕೆ.ಟಿ ರಾಮರಾವ್​, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ಕೆ.ಟಿ ರಾಮರಾವ್​ ಮುಂದೆ ಹೋಗುತ್ತಿದ್ದರು. ಇವರ ಹಿಂದೆ ವ್ಯಕ್ತಿ, ವ್ಯಕ್ತಿ ಹಿಂದೆ ತಲಸಾನಿ ಶ್ರೀನಿವಾಸ್ ತೆರಳುತ್ತಿದ್ದರು. ಆದ್ರೆ ಕೆ.ಟಿ ರಾಮರಾವ್ ಪಕ್ಕದಲ್ಲಿ ಹೋಗಲು ನನಗೆ ಅಡ್ಡಿ ಮಾಡುತ್ತಿದ್ದಾನೆಂದು ಸಚಿವ ತಲಸಾನಿ ಶ್ರೀನಿವಾಸ್ ಕೋಪಗೊಂಡು ಸಾರ್ವಜನಿಕರ ಮಧ್ಯದಲ್ಲೇ ಆ ವ್ಯಕ್ತಿಯನ್ನು ಹಿಂಬದಿಯಿಂದ ಎಳೆದು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಚಿವರು ವ್ಯಕ್ತಿಗೆ ಹೊಡೆಯುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಚಿವರ ಅಸಭ್ಯ ವರ್ತನೆಯ ವಿಡಿಯೋವನ್ನು ಶೇರ್ ಮಾಡಿದೆ. ಸಚಿವರ ವರ್ತನೆ ಬೇಸರ ತರಿಸುತ್ತದೆ ಎಂದು ಹೇಳಿದೆ. ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಸಚಿವರ ದುರ್ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಸಿಎಂ ಪುತ್ರನ ಮುಂದೆಯೇ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಸಚಿವ.. ಕಾರಣವೇನು?

https://newsfirstlive.com/wp-content/uploads/2023/08/TELANGANA_MINISTER.jpg

Load More