ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೊಲೀಸ್ ಅಧಿಕಾರಿ
ಮೊಹಮ್ಮದ್ ಫಜಲ್ ಅಲಿ (60) ಮೃತ ಎಸ್ಕಾರ್ಟ್ಸ್ ಉಸ್ತುವಾರಿ!
ಘಟನಾ ಸ್ಥಳಕ್ಕೆ ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಭೇಟಿ
ತೆಲಂಗಾಣ: ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಅವರ ಎಸ್ಕಾರ್ಟ್ ಉಸ್ತುವಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೊಹಮ್ಮದ್ ಫಜಲ್ ಅಲಿ (60) ಮೃತ ಎಸ್ಕಾರ್ಟ್ಸ್ ಉಸ್ತುವಾರಿ.
ಆತ್ಮಹತ್ಯೆ ಮಾಡಿಕೊಂಡ ಮೊಹಮ್ಮದ್ ಫಜಲ್ ಅಲಿ ಅವರು ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರ ಬೆಂಗಾವಲು ಉಸ್ತುವಾರಿಯಾಗಿದ್ದರು. ಈ ಘಟನೆ ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೈದರಾಬಾದ್ ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ಮೊಹಮ್ಮದ್ ಫಜಲ್ ಅಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ಇನ್ನೂ ದಾಖಲಾಗಿಲ್ಲ, ದೂರು ದಾಖಲಿಸಲಾಗುತ್ತಿದೆ ಎಂದು ಡಿಸಿಪಿ, ಪಶ್ಚಿಮ ವಲಯ ಹೈದರಾಬಾದ್ ನಗರ ಪೊಲೀಸ್ ಡಿ ಜೋಯಲ್ ಡೇವಿಸ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ