newsfirstkannada.com

ಫೋಟೋಗ್ರಾಫರ್ ಐಡಿಯಾಗೆ ಮನಸೋತ ಗ್ರಾಹಕರು; ಟೊಮ್ಯಾಟೋದಿಂದ ಸಖತ್ ಆದಾಯ ಗಳಿಸಿದ ಸ್ಟೋರಿ ಇದು

Share :

03-08-2023

  ಫೋಟೋಗ್ರಾಫರ್ ವಿನೂತನ ಐಡಿಯಾಗೆ ಅಚ್ಚರಿಗೊಂಡ ಗ್ರಾಹಕರು

  ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಭರ್ಜರಿ ಗಿಫ್ಟ್​

  ಫೋಟೋಗ್ರಾಫರ್ ಆನಂದ್​​ ಮಾಡಿದ ಬೊಂಬಾಟ್​ ಪ್ಲಾನ್ ಏನು ಗೊತ್ತಾ?

ಇತ್ತೀಚಿನ ಕಾಲದಲ್ಲಿ ವ್ಯಾಪಾರ ಮಾಡೋದು ಬಹಳ ಕಷ್ಟ. ಹೀಗಿರುವಾಗ ತೆಲಂಗಾಣದಲ್ಲಿ ಫೋಟೋಗ್ರಾಫರ್ ಮಾಡಿದ ಒಂದು ಉಪಾಯ ಸಖತ್ ಕ್ಲಿಕ್ ಆಗಿದೆ. ಫೋಟೋ ಜೊತೆಗೆ ಒಂದು ಪ್ಯಾಕೆಟ್ ಟೊಮ್ಯಾಟೋ ಉಚಿತವಾಗಿ​​ ಪಡೆಯಿರಿ ಎಂದರೆ ಯಾರು ತಾನೇ ಸುಮ್ಮನೆ ಇರುತ್ತಾರೆ. ಹೀಗೆ ಭದ್ರಾದ್ರಿ ಕೊತಗುಡೆಂ ಪಟ್ಟಣದ ಫೋಟೋಗ್ರಾಫರ್ ಆನಂದ್ ಎಂಬುವವರು ಗ್ರಾಹಕರಿಗೆ ಹೀಗೊಂದು ಆಫರ್ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಳ್ಳಲು ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಫೋಟೋಗ್ರಾಫರ್​ ಒಬ್ಬರು ಹೊಸ ಐಡಿಯಾ ಮಾಡಿದ್ದಾರೆ.

ದೇಶಾದ್ಯಂತ ದಿನೇ ದಿನೇ ಟೊಮ್ಯಾಟೋ ರೇಟ್ ಮತ್ತಷ್ಟು ದುಬಾರಿಯಾಗುತ್ತಿದೆ. ಈಗಾಗಲೇ ಶತಕ ಬಾರಿಸಿದ ಟೊಮ್ಯಾಟೋ ದ್ವಿಶತಕದತ್ತ ಹೋಗುತ್ತಿದೆ. ಇನ್ನು ಅಡುಗೆ ಮಾಡಲು ಟೊಮ್ಯಾಟೋ ಬೇಕೇ ಬೇಕು. ಹೀಗಿದ್ದರೂ ಜನ ತರಕಾರಿ ಅಂಗಡಿಗೆ ಹೋದರೆ ಟೊಮ್ಯಾಟೋ ಕಡೆ ಮಾತ್ರ ತಲೆ ಹಾಕುತ್ತಿಲ್ಲ. ಕಾರಣ ಒಂದು ಕಿಲೋ ಟೊಮ್ಯಾಟೋಗೆ 150 ರಿಂದ 200 ರೂಪಾಯಿ ಇದೆ. ಇದೀಗ ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಭರ್ಜರಿ ಗಿಫ್ಟ್​ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಸೀಮಾಗೆ ಅದೃಷ್ಟವೋ ಅದೃಷ್ಟ; Raw ಏಜೆಂಟ್ ಪಾತ್ರದಲ್ಲಿ ಅಭಿನಯಿಸಲು ಬಾಲಿವುಡ್ ಆಫರ್‌!

ಫೋಟೋಗ್ರಾಫರ್ ಮಾಡಿದ ಬೊಂಬಾಟ್​ ಪ್ಲಾನ್ ಏನು..?

ಇತ್ತೀಚೆಗಷ್ಟೇ ಫೋಟೋಗ್ರಾಫರ್ ಆನಂದ್​ ಅವರು ತಮ್ಮ ಫೋಟೋ ಸ್ಟುಡಿಯೋವನ್ನು ಬೇರೆ ಕಡೆ ಸ್ಥಳಾಂತರಿಸಿದ್ದರು. ಈ ಹಿಂದೆ ಇದ್ದ ಫೋಟೋ ಸ್ಟುಡಿಯೋಗೆ ಪ್ರತಿದಿನ 20 ರಿಂದ 30 ಗ್ರಾಹಕರು ಭೇಟಿ ನೀಡುತ್ತಿದ್ದರು. ಇದೀಗ ಫೋಟೋ ಸ್ಟುಡಿಯೋವನ್ನು ಬೇರೆ ಕಡೆ ಸ್ಥಳಾಂತರಿಸಿದ್ದಕ್ಕೆ ಫೋಟೋ ಸ್ಟುಡಿಯೋಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜನರು ನಮ್ಮ ಫೋಟೋ ಸ್ಟುಡಿಯೋಗೆ ಬರಬೇಕಾದರೆ ಏನು ಮಾಡಬೇಕೆಂದು ಉಪಾಯ ಮಾಡಿದ್ದಾಗ ಅವರ ತಲೆಗೆ ಮೊದಲು ಬಂದಿದ್ದೇ ಟೊಮ್ಯಾಟೋ.

ಹೀಗೆ ಜನರನ್ನು ತನ್ನತ್ತ ಸೆಳೆಯುವುದಕ್ಕಾಗಿ ನಮ್ಮ ಅಂಗಡಿಯಲ್ಲಿ 100 ರೂಪಾಯಿ ಖರ್ಚು ಮಾಡಿ ಪಾಸ್ ಪೋರ್ಟ್ ಸೈಜ್ 8 ಫೋಟೋ ತೆಗೆದುಕೊಳ್ಳುವವರಿಗೆ 1/4 ಕೆ ಜಿ ಟೊಮ್ಯಾಟೋ ಉಚಿತವಾಗಿ ನೀಡಲಾಗುವುದು ಎಂದು ಬೀದಿ ಬಿದಿಯಲ್ಲೂ ಫ್ಲೆಕ್ಸ್​ ಅಳವಡಿಸಿದ್ದರು. ಈ ಫ್ಲೆಕ್ಸ್​​​ ನೋಡಿದ ಅದೇಷ್ಟೋ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಕೆಂಪು ರಾಣಿಗಾಗಿ ಗ್ರಾಹಕರು ಅವರ ಅಂಗಡಿ ಬಳಿ ಬರುತ್ತಿದ್ದಾರೆ. ಇದುವರೆಗೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಫೋಟೋ ಸ್ಟುಡಿಯೋ ಈಗ ಜನರಿಂದ ತುಂಬಿ ತುಳುಕುತ್ತಿದೆ. ಕೊನೆಗೂ​ ಸಖತ್​ ಉಪಾಯ ಮಾಡಿದ್ದರಿಂದ ಫೋಟೋಗ್ರಾಫರ್ ಆನಂದ್ ಅವರು ಡಬಲ್ ಲಾಭ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೋಟೋಗ್ರಾಫರ್ ಐಡಿಯಾಗೆ ಮನಸೋತ ಗ್ರಾಹಕರು; ಟೊಮ್ಯಾಟೋದಿಂದ ಸಖತ್ ಆದಾಯ ಗಳಿಸಿದ ಸ್ಟೋರಿ ಇದು

https://newsfirstlive.com/wp-content/uploads/2023/08/tamato-5.jpg

Load More