newsfirstkannada.com

ಟೆಲಿಗ್ರಾಮ್ ಸಿಇಒ ಪಾವೆಲ್​ ದುರೊವ್​ಗೆ ಬಿಡುಗಡೆಯ ಭಾಗ್ಯ; ನ್ಯಾಯಾಲಯ ವಿಧಿಸಿದ ಷರತ್ತುಗಳೇನು..?

Share :

Published August 30, 2024 at 7:07am

    ಟೆಲಿಗ್ರಾಮ್ ಆ್ಯಪ್​ ಸಂಸ್ಥಾಪಕ ಪಾವೆಲ್ ದುರೊವ್​ಗೆ ಬಿಡುಗಡೆಯ ಭಾಗ್ಯ

    46 ಕೋಟಿ ರೂಪಾಯಿ ಬಾಂಡ್ ಬರೆಸಿಕೊಂಡು ರಿಲೀಸ್ ಮಾಡಿದ ಕೊರ್ಟ್​

    ಪಾವೆಲ್ ದರೊವ್​ಗೆ ಫ್ರೆಂಚ್ ಕೋರ್ಟ್​ ವಿಧಿಸಿದ ಷರತ್ತುಗಳೇನು ಗೊತ್ತಾ?

ಪ್ಯಾರಿಸ್​: ಕೆಲವು ದಿನಗಳ ಹಿಂದಷ್ಟೇ ಫ್ರಾನ್ಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದ ಟೆಲಿಗ್ರಾಮ್​ ಸಂಸ್ಥಾಪಕ ಪಾವೆಲ್ ದುರೊವ್​ಗೆ ಫ್ರೆಂಚ್​ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಕಳೆದ ಶನಿವಾರವಷ್ಟೇ ಫ್ರಾನ್ಸ್ ಪೊಲೀಸರು ದುರೊವ್​ನನ್ನ ಬಂಧಿಸಿ ಕಾರಾಗೃಹಕ್ಕೆ ತಳ್ಳಿದ್ದರು.

ಇದನ್ನೂ ಓದಿ: 1,257,828,750,000 ಕೋಟಿ ಆಸ್ತಿ ಒಡೆಯ​ ಅರೆಸ್ಟ್​; ಎಣ್ಣೆ ಹೊಡೆಯಲ್ಲ, ಮಾಂಸ ತಿನ್ನಲ್ಲ! ಈತನ ಹಿಸ್ಟ್ರಿ ವಿಚಿತ್ರ!

ದುರೊವ್​ ಸ್ಥಾಪಿತ ಟೆಲಿಗ್ರಾಮ್ ಆ್ಯಪ್​ನಲ್ಲಿ ಅಪ್ರಾಪ್ತರ ಲೈಂಗಿಕ ವಿಡಿಯೋಗಳು, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಪ್ರೇರಣೆ, ಡ್ರಗ್​ ಟ್ರಾಫಿಕಿಂಗ್ ಮತ್ತು ವಂಚನೆ ಸೇರಿದಂತೆ ಹಲವು ಆರೋಪಗಳ ಮೇಲೆ ದುರೊವರನ್ನ ಬಂಧಿಸಲಾಗಿತ್ತು. ಈಗ ಫ್ರೆಂಚ್​ ಕೊರ್ಟ್​ ಷರತ್ತುಬದ್ಧ ಜಾಮೀನು ನೀಡಿ ಅವರನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಸಾವಿನೊಂದಿಗೆ ಸಾಹಸ.. ಸುನೀತಾ ವಿಲಿಯಮ್ಸ್‌ರಂತ ಗಗನಯಾನಿಗಳ ಸಂಬಳ ಎಷ್ಟು ಕೋಟಿ ಗೊತ್ತಾ?

ಷರತ್ತು ಬದ್ಧ ಜಾಮೀನಿಗೆ 50 ಲಕ್ಷ ಯುರೋಸ್​ ಅಂದ್ರೆ ಭಾರತದ 46 ಕೋಟಿ ರೂಪಾಯಿಗಳ ಬಾಂಡ್​ ಮೇಲೆ ದುರೊವ್​ನನ್ನು ಬಿಡುಗಡೆ ಮಾಡಲಾಗಿದೆ.ಅದು ಅಲ್ಲದೇ ದುರೊವ್​ಗೆ ಫ್ರೆಂಚ್ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿದೆ. ಸದಾ ದೇಶದಿಂದ ದೇಶಕ್ಕೆ ಅಲೆದಾಡುವ ವಿಲಾಸಿ ಬದುಕಿನ ದುರೊವ್​ಗೆ ಫ್ರಾನ್ಸ್ ಬಿಟ್ಟು ಎಲ್ಲೂ ತೆರಳದಂತೆ ಹೇಳಿದೆ ಅಲ್ಲದೇ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗಿ ರುಜು ಹಾಕಬೇಕ ಎಂದು ಕೂಡ ಷರತ್ತು ವಿಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಲಿಗ್ರಾಮ್ ಸಿಇಒ ಪಾವೆಲ್​ ದುರೊವ್​ಗೆ ಬಿಡುಗಡೆಯ ಭಾಗ್ಯ; ನ್ಯಾಯಾಲಯ ವಿಧಿಸಿದ ಷರತ್ತುಗಳೇನು..?

https://newsfirstlive.com/wp-content/uploads/2024/08/PAVEL-DUVOR.jpg

Load More