newsfirstkannada.com

16 ವರ್ಷಕ್ಕೆ ಮದುವೆ 18ನೇ ವಯಸ್ಸಿಗೆ ಡಿವೋರ್ಸ್; ಇಂದಿಗೂ ಒಂಟಿಯಾಗೇ ಅವಳಿ ಮಕ್ಕಳ ಪಾಲನೆಯಲ್ಲಿದ್ದಾಳೆ ಈ ನಟಿ

Share :

Published September 6, 2024 at 1:19pm

Update September 7, 2024 at 7:05am

    ನೆಗೆಟೀವ್ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ

    ರೀಲ್​ನಲ್ಲಿ ವಿಲನ್, ನಿಜ ಜೀವನದಲ್ಲಿ ಮೃದು ಸ್ವಭಾವ

    ಇಬ್ಬರು ಟ್ವಿನ್ಸ್​ ಮಕ್ಕಳನ್ನ ಸಾಕುತ್ತಿದ್ದಾರೆ ಕೊಮೊಲಿಕಾ

ಊರ್ವಶಿ ಧೋಲಾಕಿಯಾ.. ಹೆಸರು ಕೇಳ್ತಿದ್ದಂತೆಯೇ ಅವರ ವಿಲನ್ ರೋಲ್​​ಗಳು ಕಣ್ಮುಂದೆ ಬರುತ್ತವೆ. ಬಣ್ಣದ ಬದುಕಿನಲ್ಲಿ ನೆಗೆಟೀವ್ ರೋಲ್​ಗಳ ಮೂಲಕ ಜನಪ್ರಿಯತೆ ಪಡೆದಿರುವ ಅವರು, ನಿಜ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.

‘ಕಸೌತಿ ಜಿಂದಗಿ ಕಿ’ (kasauti zindagi ki) ಎಂಬ ಟಿವಿ ಶೋನಲ್ಲಿ ಕೊಮೊಲಿಕಾ ಬಸು ಪಾತ್ರದ ಮೂಲಕ ಊರ್ವಶಿ ಜನಪ್ರಿಯರಾದರು. ಮೊದಲೇ ಹೇಳಿದಂತೆ ಊರ್ವಶಿ ಧೋಲಾಕಿಯಾ ನೆಗೆಟಿವ್ ಪಾತ್ರಗಳಿಗೆ ಹೆಸರುವಾಸಿ. ‘ಕಸೌತಿ ಜಿಂದಗಿ ಕಿ’ ನಲ್ಲಿ ಕೊಮೊಲಿಕಾ ಪಾತ್ರದಲ್ಲಿ ಪ್ರೇರಣಾಗೆ ತೊಂದರೆ ಕೊಟ್ಟರೆ ಮತ್ತು ನಂತರ ನಾಗಿನ್​ ಸೀರಿಸ್​ನಲ್ಲಿ ಸುದ್ದಿಯಾದರು.

ಇದನ್ನೂ ಓದಿ:ಭಾರೀ ದಂಡ ಕಟ್ಟಿದರೂ ಬುದ್ಧಿ ಕಲಿಯದ IPL ಸ್ಟಾರ್; ಈ ಬಾರಿ ಗಾಯಕ್ವಾಡ್​ಗೆ ಅವಮಾನ ಮಾಡಿದ ಬೌಲರ್..!

ಊರ್ವಶಿ ಕಿರುತೆರೆಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು. ಆದರೆ ನಿಜ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ. ರೀಲ್​ನಲ್ಲಿ ಆರ್ಭಟಿಸುವ ರೀತಿಯಲ್ಲಿ ಅವರು ಇಲ್ಲ. ತುಂಬಾ ಮೃದು ಸ್ವಭಾವದವರು. ಚಿಕ್ಕ ವಯಸ್ಸಿನಲ್ಲೇ ವಿಚ್ಛೇದನದ ನೋವನ್ನು ಅನುಭವಿಸಿದವರು. 16ನೇ ವಯಸ್ಸಿನಲ್ಲಿ ವಿವಾಹವಾಗಿ 18ನೇ ವರ್ಷಕ್ಕೆ ಡಿವೋರ್ಸ್ ಪಡೆದರು. ಒಮ್ಮೆ ಸಂದರ್ಶನವೊಂದರಲ್ಲಿ ವಿಚ್ಛೇದನಕ್ಕೆ ಕಾರಣ ನೀಡಿದ್ದಾರೆ. ತನ್ನ ಪತಿಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಹಾಗಾಗಿ ನಾನು ವಿಚ್ಛೇದನ ಪಡೆದುಕೊಂಡೆ ಎಂದಿದ್ದಾರೆ. ಇದೇ ಕಾರಣಕ್ಕೆ ಗಂಡನ ಮೇಲಿನ ಪ್ರೀತಿ ಕೊನೆಗೊಂಡಿತು ಎಂದಿದ್ದಾರೆ.

18ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದ ಊರ್ವಶಿ ಇನ್ನೂ ಒಂಟಿಯಾಗಿದ್ದಾರೆ. ಇಬ್ಬರು ಅವಳಿ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸುತ್ತಿದ್ದಾರೆ. ತಮ್ಮ ಮಾಜಿ ಪತಿ ಎಲ್ಲಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಮಕ್ಕಳು ಕೂಡ ತಮ್ಮ ತಂದೆಯನ್ನು ಇನ್ನೂ ಭೇಟಿ ಆಗಿಲ್ವಂತೆ. ಊರ್ವಶಿ ಪ್ರೀತಿಸಿ ಮದುವೆಯಾದವರು. ತಮಗಿಂತ 4 ವರ್ಷ ಚಿಕ್ಕವ ಅನುಜ್ ಸಚ್‌ದೇವಾ ಜೊತೆ ಡೇಟಿಂಗ್ ಮಾಡ್ತಿದ್ದರು. ಇಬ್ಬರೂ ಕೂಡ ಮದುವೆಯಾಗಲು ಯೋಚಿಸಿದ್ದರು. ಅದಕ್ಕೆ ಅನುಜ್ ಮನೆಯವರು ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಮದುವೆಯಾಗಿ, ಇಂದು ಸಿಂಗಲ್ ಆಗಿ ಬದುಕುತ್ತಿದ್ದಾರೆ.

ಇದನ್ನೂ ಓದಿ:ದುಲೀಪ್​ ಟ್ರೋಫಿಯಲ್ಲಿ ಮುಷೀರ್​​ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

16 ವರ್ಷಕ್ಕೆ ಮದುವೆ 18ನೇ ವಯಸ್ಸಿಗೆ ಡಿವೋರ್ಸ್; ಇಂದಿಗೂ ಒಂಟಿಯಾಗೇ ಅವಳಿ ಮಕ್ಕಳ ಪಾಲನೆಯಲ್ಲಿದ್ದಾಳೆ ಈ ನಟಿ

https://newsfirstlive.com/wp-content/uploads/2024/09/URVASI.jpg

Load More