newsfirstkannada.com

ಅರ್ಚಕ ಪೂಜೆ ಮಾಡುತ್ತಿರುವಾಗಲೇ ಗಂಗಾಧರೇಶ್ವರ ದೇಗುಲದ ಗೋಡೆ ಕೆಡವಿದ ಬಿಬಿಎಂಪಿ; ಭಕ್ತರ ಆಕ್ರೋಶ

Share :

02-08-2023

    ದೇಗುಲ ಕೆಡವಿದ ಬಿಬಿಎಂಪಿ

    ಬಿಬಿಎಂಪಿ ಭಾರೀ ಎಡವಟ್ಟು

    ಭಕ್ತರಿಂದ ತೀವ್ರ ಆಕ್ರೋಶ..!

ಬೆಂಗಳೂರು: ಕರಗ ಎಂದರೆ ಧರ್ಮರಾಯ ದೇವಸ್ಥಾನ. ಇದರ ಬಗ್ಗೆ ಗೊತ್ತಿರುವ ಎಲ್ಲರಿಗೂ ಈ ದೇವಸ್ಥಾನದ ಬಗ್ಗೆ ಗೊತ್ತೇ ಇರುತ್ತೆ. ಅದುವೇ ಗಂಗಾಧರೇಶ್ವರ ದೇವಾಲಯ. ಸುಮಾರು 700 ವರ್ಷಗಳಷ್ಟು ಹಳೆಯದು ಎನ್ನಲಾದ ಈ ದೇವಾಲಯದ ಗೋಡೆಯೇ ಕೆಡವಿ ಹಾಕಿದ್ದಾರೆ. ಅದೂ ಅರ್ಚಕರು ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿರುವಾಗಲೇ ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ತಂದು ಗೋಡೆ ಕೆಡವಿದ್ದಾರೆ.

ಪಾಲಿಕೆ ಅಧಿಕಾರಿಗಳ ತೆರವು ಕಾರ್ಯಾಚರಣೆಯ ಎಫೆಕ್ಟ್‌ ಇದು. ತೆರವು ಮಾಡಬೇಕು ಎಂದು ಹೋಗಿದ್ದು ದೇಗುಲ ಅಲ್ಲ. ಪಕ್ಕದಲ್ಲಿ ಹಾಕಿದ್ದ ಅನಧಿಕೃತ ಶೀಟ್ಸ್‌. ಅವುಗಳನ್ನ ತೆರವು ಮಾಡೋಕೆ ಜೆಸಿಬಿ ತಂದ ಪಾಲಿಕೆ ಶತಮಾನಗಳಷ್ಟು ಹಳೆಯ ದೇಗುಲದ ಗೋಡೆಯನ್ನೇ ಕೆಡವಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ ಬಿಟ್ಟಿದೆ.

ಧರ್ಮರಾಯ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಈಗಾಗಲೇ ಬಿಡಬ್ಲ್ಯೂಡಿ ಕಾಮಗಾರಿ ನಡೆಯುತ್ತಿದ್ದು, ಟ್ರಾಫಿಕ್ ಸಮಸ್ಯೆಯಾಗಿದೆ. ಹೀಗಾಗಿ ಅನಧಿಕೃತ ಶೀಟ್​ಗಳನ್ನ ತೆಗೆಯಲು ಪಾಲಿಕೆ ಮುಂದಾಗಿತ್ತು. ತೆರವು ಕಾರ್ಯಾಚರಣೆ ನಡೆಸೋರು ನೋಟಿಸ್‌ ಕೊಡಬೇಕಿತ್ತು. ಅದನ್ನ ಕೊಟ್ಟಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸ್ಥಳೀಯರು ಹೇಳಿದ್ದೇನು?

ತೆರವು ಮಾಡಿದ್ದು ಓಕೆ. ಬಟ್‌ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕಲ್ಲ. ಅದ್ಯಾವುದು ತೆಗೆದುಕೊಳ್ಳದೆ ಪುರಾತನ ದೇಗುಲಕ್ಕೆ ಧಕ್ಕೆ ತಂದಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟಾಗುತ್ತಿದ್ದಂತೆ ಸ್ಥಳಕ್ಕೆ ಶಾಸಕ ಉದಯ್​ ಗರುಡಾಚಾರ್, ಮಾಜಿ ಶಾಸಕ ಆರ್‌.ವಿ ದೇವರಾಜ್‌ ದೌಡಾಯಿಸಿ ಬಂದ್ರು. ಉದಯ್ ಗರುಡಾಚಾರ್‌ ಅಧಿಕಾರಿಗಳ ಯಡವಟ್ಟನ್ನ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದು, ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ದೇಗುಲದ ಗೋಡೆ ಒಡೆದಿದ್ದು ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ರು. ಅದೇನೇ ಇದ್ರೂ ಗಣೇಶನ್ನ ಮಾಡೋಕೆ ಹೋಗಿ ಅವ್ರಪ್ಪನ್ನ ಮಾಡಿದ್ರಂತೆ ಅನ್ನೋ ಮಾತಿನಂತೆ ಪಾಲಿಕೆ ಬ್ರ್ಯಾಂಡ್‌ ಬೆಂಗಳೂರು ಮಾಡೋ ಅವಸರದಲ್ಲಿ ಶತಮಾನಗಳಷ್ಟು ಹಳೆಯ ದೇಗುಲದ ಗೋಡೆ ಒಡೆದು ಹಾಕಿದ್ದು ವಿಪರ್ಯಾಸ. ಈ ಬಗ್ಗೆ ಏನ್‌ ಕ್ರಮ ಆಗುತ್ತೆ ಅಂತ ಕಾದು ನೋಡ್ಬೇಕು.

ಅರ್ಚಕ ಪೂಜೆ ಮಾಡುತ್ತಿರುವಾಗಲೇ ಗಂಗಾಧರೇಶ್ವರ ದೇಗುಲದ ಗೋಡೆ ಕೆಡವಿದ ಬಿಬಿಎಂಪಿ; ಭಕ್ತರ ಆಕ್ರೋಶ

https://newsfirstlive.com/wp-content/uploads/2023/08/Temple_12.jpg

Load More