newsfirstkannada.com

ಈ ದೇವಾಲಯದಲ್ಲಿ ನಡೀತಿದೆ ‘ಹುತ್ತದ ಮಹಿಮೆ’; ‘ಕೆಂಪಮ್ಮಳ ಪವಾಡ’ ಎಂದು ಕೈಮುಗಿದ ಭಕ್ತರು..!

Share :

09-06-2023

    ಅಚ್ಚರಿಗೆ ಒಳಗಾಗಿದೆ ಚಿಕ್ಕಮಗಳೂರಿನ ಕುಂದೂರು ಗ್ರಾಮ..!

    ಮೂರ್ತಿ ವಿಸರ್ಜಿಸಿ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧಾರ

    ಅಚ್ಚರಿಯ ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಭಕ್ತರ ದಂಡು..!

ಕಾಡಲ್ಲೋ.. ಹೊಲದಲ್ಲೋ ಅಥವಾ ಬಯಲು ಖಾಲಿ ಜಾಗದಲ್ಲೋ ಹುತ್ತ ಬೆಳೆಯುವುದನ್ನ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗರ್ಭಗುಡಿಯ ದೇವರ ಮೂರ್ತಿಯ ಮೇಲೆ ಹುತ್ತ ಬೆಳೆಯುವುದನ್ನು ಎಲ್ಲಾದರೂ ಕೇಳಿದ್ದೀರಾ. ಇಂಥದೊಂದು ಅಚ್ಚರಿಗೆ ಕಾರಣವಾಗಿದೆ ಈ ಗ್ರಾಮದ ದೇವಾಲಯ. ಇಂಥದೊಂದು ಅಚ್ಚರಿಯ ಪವಾಡಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಂದೂರು ಗ್ರಾಮ ಸಾಕ್ಷಿಯಾಗಿದೆ.

ವಿಗ್ರಹದ ಮೇಲೆ ಬೆಳೆಯುತ್ತಿದೆ ಹುತ್ತ
ಕುಂದೂರು ಗ್ರಾಮದ ಕೆಂಪಮ್ಮ ಗರ್ಭಗುಡಿಯ ವಿಗ್ರಹದ ಮೇಲೆ ಹುತ್ತ ಬೆಳೆಯುತ್ತಿರುವುದು ಸಾವಿರಾರು ಭಕ್ತರ ಅಚ್ಚರಿಗೆ ಕಾರಣವಾಗಿದೆ. ಕಳೆದ ಹಲವು ದಶಕಗಳಿಂದ ಗ್ರಾಮದಲ್ಲಿ ಕೆಂಪಮ್ಮ ದೇವಿಯನ್ನು ಗ್ರಾಮಸ್ಥರು ಭಯ ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಮೂರ್ತಿಯ ಮೇಲೆ ಹಾಗೂ ಇಡೀ ದೇವಾಲಯವನ್ನು ಹುತ್ತ ಆವರಿಸಿರುವುದು ನಿಜಕ್ಕೂ ಪವಾಡ ಎನಿಸಿದೆ.

ಈ ಮೊದಲು 15, 20 ವರ್ಷಕ್ಕೊಮ್ಮೆ ಹುತ್ತ ಬೆಳೆಯುತ್ತಿತ್ತು. ಪ್ರತಿಷ್ಠಾಪನೆ ಮಾಡಿದ ಮೇಲೆ ಐದು ವರ್ಷಕ್ಕೇ ಹುತ್ತ ಬೆಳೆಯುತ್ತಿದೆ. ದೇವರ ಮೇಲೆ ಪೂರ್ತಿ ಹುತ್ತ ಬೆಳೆಯುತ್ತದೆ.

-ಚಿಕ್ಕೇಗೌಡ್ರು, ದೇವಸ್ಥಾನದ ಕಮಿಟಿ ಅಧ್ಯಕ್ಷ

ದೇವಿಯ ಮೂರ್ತಿ ವಿಸರ್ಜಿಸಿ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧಾರ
ಅಂದಾಗೆ 1928ರಲ್ಲಿ ಕೇವಲ ಸಣ್ಣ ಮಣ್ಣಿನ ಗೋಡೆಯಂತಿದ್ದ ದೇವಾಲಯ ಇದೀಗ ಕೆಂಪಮ್ಮ ದೇವಿಯ ಮಹಿಮೆಯಿಂದ ಬೆಳೆದು ನಿಂತಿದೆ. ಕೆಂಪಮ್ಮ ದೇವಿಯ ಮೇಲೆ ಇದ್ದಕ್ಕಿದ್ದಂತೆ ಹುತ್ತ ಬೆಳೆಯುತ್ತಿರುವುದನ್ನು ನೋಡಿದ ಗ್ರಾಮಸ್ಥರು ದೇವಿಯನ್ನು ವಿಸರ್ಜನೆ ಮಾಡಿ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಒಂದು ವರ್ಷದಿಂದ ದೇವಿಯ ಎಡಗೈ ಸೇರಿದಂತೆ ವಿವಿಧ ಭಾಗಗಳಲ್ಲಿ ಹುತ್ತ ಬೆಳೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಜನರ ಬಾಯಲ್ಲಿ ಹುತ್ತದ ಕೆಂಪಮ್ಮ ಎಂದೇ ದೇವಿ ಪ್ರಸಿದ್ಧಿ ಪಡೆದಿದ್ದಾಳೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ದೇವಿಯ ದರ್ಶನಕ್ಕಾಗಿ ಜನರು ಆಗಮಿಸುತ್ತಿದ್ದಾರೆ.

ಹುತ್ತ ಬಂದ ಮೇಲೆ ವಿಸರ್ಜನೆ ಮಾಡ್ತೀವಿ.. ಅದರಂತೆ ಇದೀಗ ದೇವಿಯ ಮೂರ್ತಿಯನ್ನು ವಿಸರ್ಜನೆ ಮಾಡ್ತೀವಿ. ಇದೀಗ ಕಲ್ಲಿನ ವಿಗ್ರಹ ಮಾಡಿಸಲು ದೇವರು ಅಪ್ಪಣೆ ಕೊಟ್ಟಿದೆ. ಅದರ ಕೆಲಸ ಶುರುವಾಗಿದೆ
-ನೀಲಕಂಠಪ್ಪ, ಗ್ರಾಮಸ್ಥರು

ಕೆಂಪಮ್ಮ ದೇವಿ ದೇವಾಲಯ ಪ್ರತಿಷ್ಠಾಪನೆ ಆದ ಬಳಿಕ ಇದುವರೆಗೂ ಬರೋಬ್ಬರಿ ಐದು ಬಾರಿ ದೇವರ ಮೂರ್ತಿಯ ಮೇಲೆ ಪದೇ ಪದೆ ಹುತ್ತ ಬೆಳೆಯುತ್ತಿರುವುದು ನಿಜಕ್ಕೂ ಕೌತುಕವೇ ಸರಿ. ಇದರ ಹಿಂದಿನ ಸತ್ಯಾಂಶವೇನು ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರೂ ದೇವಿಯ ಮಹಿಮೆ ಮುಂದೆ ಉತ್ತರ ಸಿಕ್ಕಿಲ್ಲ. ಜೊತೆಗೆ ಇದು ಕೆಡುಕೋ ಶುಭವೋ ಅನ್ನೋದು ಆತಂಕವೂ ಮೂಡಿದೆ.

ಒಟ್ಟಾರೆ ವೈಜ್ಞಾನಿಕವೋ ಅಥವಾ ಭಕ್ತರ ನಂಬಿಕೆಯೋ. ಅಚ್ಚರಿಯ ಬೆಳವಣಿಗೆಗಂತೂ ಕಡೂರು ತಾಲೂಕಿನ ಕುಂದೂರು ಗ್ರಾಮ ಸಾಕ್ಷಿಯಾಗಿದೆ. ಹುತ್ತದ ಬೆಳವಣಿಗೆಯ ಹಿಂದಿನ ಸತ್ಯ ಹಾಗೂ ಸಾವಿರಾರು ಭಕ್ತರ ನಂಬಿಕೆಗೆ ಹುಸಿಯಾಗದಂತೆ ಸಂಬಂಧಪಟ್ಟವರು ಸಾಕ್ಷಿಕರಿಸಬೇಕಿದೆ. ಸದ್ಯ ಕೆಂಪಮ್ಮ ಕಾಫಿನಾಡಿನ ಕೇಂದ್ರ ಬಿಂದುವಾಗಿದ್ದು ನೂರಾರು ಭಕ್ತರನ್ನು ಸೆಳೆಯುವಲ್ಲಿ ಹುತ್ತದ ಮಹಿಮೆ ಅಚ್ಚರಿ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ದೇವಾಲಯದಲ್ಲಿ ನಡೀತಿದೆ ‘ಹುತ್ತದ ಮಹಿಮೆ’; ‘ಕೆಂಪಮ್ಮಳ ಪವಾಡ’ ಎಂದು ಕೈಮುಗಿದ ಭಕ್ತರು..!

https://newsfirstlive.com/wp-content/uploads/2023/06/CKM_TEMPLE1.jpg

Load More