newsfirstkannada.com

ನಿನ್ನೆ ಹಮಾಸ್ ಉಗ್ರನ ಭಾಷಣ ಇಂದು ಭಯಾನಕ ಸ್ಫೋಟ.. ವಿಧ್ವಂಸಕ ಕೃತ್ಯಕ್ಕೆ ಬೆಚ್ಚಿ ಬಿದ್ದ ಕೇರಳ; ದೇಶಾದ್ಯಂತ ಹೈಅಲರ್ಟ್‌!

Share :

29-10-2023

  ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಫೋಟ

  IED ಅಂದ್ರೆ ಸುಧಾರಿತ ಸ್ಫೋಟಕ ಸಾಧನವನ್ನ ಈ ವಿಧ್ವಂಸಕ ಕೃತ್ಯ?

  ಕೇರಳದ ಮಲಪ್ಪುರಂನಲ್ಲಿ ನಿನ್ನೆ ಹಮಾಸ್ ಬೆಂಬಲಿಗರ ಕಾರ್ಯಕ್ರಮ

ಕೇರಳದ ಎರ್ನಾಕುಲಂ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ನಡೆದಿರೋ ಸರಣಿ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. IED ಅಂದ್ರೆ ಸುಧಾರಿತ ಸ್ಫೋಟಕ ಸಾಧನವನ್ನ ಈ ವಿಧ್ವಂಸಕ ಕೃತ್ಯಕ್ಕೆ ಬಳಸಿರೋ ಅನುಮಾನ ವ್ಯಕ್ತವಾಗಿದೆ. ಈ ಘಟನೆಗೆ ಭಯೋತ್ಪಾದನೆಯ ನಂಟು ಇದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಸರಣಿ ಸ್ಫೋಟ ಸಂಭವಿಸಿದಾಗ ಎರ್ನಾಕುಲಂ ಕನ್ವೆಷನ್ ಸೆಂಟರ್‌ನಲ್ಲಿ 2000ಕ್ಕೂ ಹೆಚ್ಚು ಮಂದಿ ಪ್ರಾರ್ಥನೆಗೆ ಆಗಮಿಸಿದ್ದರು. ಸಮುದಾಯದ ಪ್ರಾರ್ಥನೆ ನಡೆಯುವ ಮಧ್ಯ ಭಾಗದಲ್ಲೇ ಈ ಘಟನೆ ನಡೆದಿರೋದು ಆತಂಕವನ್ನು ಹೆಚ್ಚಿಸಿದೆ. ಸರಣಿ ಸ್ಫೋಟಕಗಳ ಕೃತ್ಯಕ್ಕೆ ಒಬ್ಬರು ಸಾವನ್ನಪ್ಪಿದ್ದು, 36ಕ್ಕೂ ಹೆಚ್ಚು ಮಂದಿ ಸಾವನ್ನಪಿದ್ದರು.

ನಿನ್ನೆಯಷ್ಟೇ ಹಮಾಸ್ ಉಗ್ರರ ಭಾಷಣ!

ಪ್ಯಾಲಿಸ್ತೈನ್‌ ಮುಸ್ಲಿಂರನ್ನ ಬೆಂಬಲಿಸಿ ನಿನ್ನೆಯಷ್ಟೇ ಕೇರಳದ ಮಲಪ್ಪುರಂನಲ್ಲಿ ಱಲಿ ಹಮ್ಮಿಕೊಳ್ಳಲಾಗಿತ್ತು. ಹಮಾಸ್ ಬೆಂಬಲಿಗರ ಕಾರ್ಯಕ್ರಮದಲ್ಲಿ ಪ್ಯಾಲೆಸ್ತೈನ್‌ನಿಂದ ಹಮಾಸ್ ಸಂಘಟನೆಯ ಮುಖಂಡ ಭಾಷಣ ಮಾಡಿದ್ದರು. ವಿಡಿಯೋ ಕಾನ್ಫ್‌ರೆನ್ಸ್‌ ಮೂಲಕ ಹಮಾಸ್ ಉಗ್ರ ಭಾಷಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಮಾಸ್ ಉಗ್ರರು ಭಾಷಣ ಮಾಡಿದ ಮರುದಿನವೇ ಕಾಕತಾಳೀಯವೆಂಬಂತೆ ಕೇರಳದಲ್ಲಿ ವಿಧ್ವಂಸಕ ಕೃತ್ಯ ನಡೆದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಕೇರಳದ ಸರಣಿ ಸ್ಫೋಟ ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಜೊತೆ ಈ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸರಣಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆ ಹಮಾಸ್ ಉಗ್ರನ ಭಾಷಣ ಇಂದು ಭಯಾನಕ ಸ್ಫೋಟ.. ವಿಧ್ವಂಸಕ ಕೃತ್ಯಕ್ಕೆ ಬೆಚ್ಚಿ ಬಿದ್ದ ಕೇರಳ; ದೇಶಾದ್ಯಂತ ಹೈಅಲರ್ಟ್‌!

https://newsfirstlive.com/wp-content/uploads/2023/10/Kerala-hamas-Terrorist.jpg

Load More