newsfirstkannada.com

ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಗ್ರೀನ್‌ಸಿಗ್ನಲ್‌; ಬರೋಬ್ಬರಿ 20 ಲಕ್ಷ ರೂಪಾಯಿ ಕಾರಿನ ಫೀಚರ್‌ ಏನು?

Share :

13-07-2023

  ಅತ್ಯಂತ ದುಬಾರಿ, ಎಕ್ಸ್‌ಕ್ಲೂಸಿವ್ ಫೀಚರ್‌ಗಳ ಟೆಸ್ಲಾ ಕಾರು

  ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದಿಸಲು ನಿರ್ಧಾರ

  5 ಲಕ್ಷ ಎಲೆಕ್ಟ್ರಿಕ್ ಕಾರು ಉತ್ಪಾದನೆ ಜೊತೆ ವಿದೇಶಕ್ಕೂ ರಫ್ಟು

ನವದೆಹಲಿ: ಅತ್ಯಂತ ದುಬಾರಿ, ಎಕ್ಸ್‌ಕ್ಲೂಸಿವ್ ಫೀಚರ್‌ಗಳನ್ನು ಒಳಗೊಂಡಿರೋ ಟೆಸ್ಲಾ ಕಾರು ಭಾರತಕ್ಕೆ ಬರೋದು ಪಕ್ಕಾ ಆಗಿದೆ. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿ ಹಾಗೂ ಭಾರತ ಸರ್ಕಾರದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನ ಕೊನೆಗೂ ಭಾರತದಲ್ಲೇ ಉತ್ಪಾದಿಸಲು ಟೆಸ್ಲಾ ಕಂಪನಿ ಒಪ್ಪಿದೆ.

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾಗ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಾನು ಮೋದಿಯ ಫ್ಯಾನ್ ಎಂದಿದ್ದ ಎಲಾನ್ ಮಸ್ಕ್‌ ಅವರು ಭಾರತಕ್ಕೆ ಟೆಸ್ಲಾ ಕಾರುಗಳನ್ನು ಪರಿಚಯಿಸಲು ಒಪ್ಪಿಕೊಂಡಿದ್ದರು. ನರೇಂದ್ರ ಮೋದಿ ಹಾಗೂ ಎಲಾನ್ ಮಸ್ಕ್ ನಡುವೆ ನಡೆದ ಈ ಮಾತುಕತೆ ಬಳಿಕ ಟೆಸ್ಲಾ ಕಂಪನಿ ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಲು ಮುಂದಾಗಿದೆ.

ಎಲಾನ್ ಮಸ್ಕ್, ಮೋದಿ ಈ ಮಾತುಕತೆ ಬಳಿಕ ಟೆಸ್ಲಾ ಕಂಪನಿ ಮತ್ತೊಂದು ಬೇಡಿಕೆ ಮುಂದಿಟ್ಟಿತ್ತು. ಭಾರತಕ್ಕೆ ವಿದೇಶಗಳಿಂದ ಟೆಸ್ಲಾ ಕಾರ್ ರಫ್ತುಗೆ ಆಮದು ಸುಂಕ ಕಡಿತ ಕೋರಿತ್ತು. ಆದರೆ ಭಾರತದಲ್ಲೇ ಟೆಸ್ಲಾ ಕಾರ್ ಉತ್ಪಾದಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇಂದು ಭಾರತದ ವಾಣಿಜ್ಯ, ಕೈಗಾರಿಕಾ ಇಲಾಖೆಯಿಂದ ಎಲಾನ್ ಮಸ್ಕ್ ಜೊತೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಅಂತೂ ಇಂತೂ ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಆಗಲು ಒಪ್ಪಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಕರ್ನಾಟಕದಲ್ಲೇ ಸಿಗುತ್ತಾ ಟೆಸ್ಲಾ ಕಾರ್​​..? ಎಲಾನ್​​​ ಮಸ್ಕ್​​​ಗೆ ಸಿದ್ದು ಸರ್ಕಾರ ಕೊಟ್ಟ ಆಫರ್​​ ಏನು?

ಕೊನೆಗೂ ಎಲಾನ್ ಮಸ್ಕ್ ಅವರು ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಉತ್ಪಾದಿಸಲು ನಿರ್ಧಾರ ಮಾಡಿದ್ದಾರೆ. ಎಲಾನ್ ಮಸ್ಕ್‌ ಅವರು ಮುಂದಿನ ದಿನಗಳಲ್ಲಿ ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಾರ್ಖಾನೆ ತೆರೆಯಲಿದ್ದಾರೆ.

ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಆರಂಭಿಕ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ. ಟೆಸ್ಲಾ ಕಂಪನಿಯು ಭಾರತದಲ್ಲಿ ವಾರ್ಷಿಕ 5 ಲಕ್ಷ ಎಲೆಕ್ಟ್ರಿಕ್ ಕಾರ್ ಉತ್ಪಾದನೆಯ ಗುರಿ ಹೊಂದಿದೆ. ಭಾರತದಲ್ಲಿ ಉತ್ಪಾದಿಸಿದ ಎಲೆಕ್ಟ್ರಿಕ್ ಕಾರುಗಳು ವಿದೇಶಗಳಿಗೂ ರಫ್ತಾಗಲಿದೆ. ಅಮೆರಿಕಾ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಟೆಸ್ಲಾ ಕಾರುಗಳು ತನ್ನ ಬ್ರಾಂಡ್‌ನಿಂದಲೇ ಪ್ರಸಿದ್ಧಿಯಾಗಿದೆ. ಟೆಸ್ಲಾ ಕಾರನ್ನು ಒಮ್ಮೆ ಚಾರ್ಜ್‌ ಮಾಡುವುದರಿಂದ ಸುಮಾರ್ 400-500 ಕಿಲೋ ಮೀಟರ್ ಸಂಚರಿಸಬಹುದಾಗಿದೆ. ವಿನೂತನ ಶೈಲಿ, ಸೆಕ್ಯೂರಿಟಿ, ಎಕ್ಸ್‌ಕ್ಲೂಸಿವ್ ಫೀಚರ್‌ಗಳಿಗೆ ಇದು ಹೆಸರುವಾಸಿಯಾಗಿದೆ. ಟೆಸ್ಲಾ ಕಾರು ಭಾರತದಲ್ಲಿ ಯಾವ ಫೀಚರ್‌ಗಳನ್ನ ಪರಿಚಯಿಸುತ್ತೆ ಅನ್ನೋದು ಪ್ರಮುಖವಾಗಿದೆ. ಇದರ ಜೊತೆಗೆ ಭಾರತದಲ್ಲಿ ಯಾವ ರಾಜ್ಯದಲ್ಲಿ ಮೊದಲಿಗೆ ಟೆಸ್ಲಾ ಕಾರು ಉತ್ಪಾದನಾ ಘಟಕ ಆರಂಭಿಸಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಗ್ರೀನ್‌ಸಿಗ್ನಲ್‌; ಬರೋಬ್ಬರಿ 20 ಲಕ್ಷ ರೂಪಾಯಿ ಕಾರಿನ ಫೀಚರ್‌ ಏನು?

https://newsfirstlive.com/wp-content/uploads/2023/06/Elon-Musk-Twitter.jpg

Load More