newsfirstkannada.com

ಆನ್​ಲೈನ್​ನಲ್ಲಿ iPhone ಆರ್ಡರ್​.. ಡೆಲಿವರಿ ಆಗಿದ್ದು ಮಾತ್ರ 3 ಪಾತ್ರೆ ಉಜ್ಜುವ ಸೋಪು; ನಡೆದಿದ್ದೆಲ್ಲಿ?

Share :

14-11-2023

    ನಾವೊಂದು ಆರ್ಡರ್ ಮಾಡಿದರೆ, ಬಾಕ್ಸ್​ನಲ್ಲಿ ಬರುವುದೇ ಇನ್ನೊಂದು

    ಆನ್​ಲೈನ್ ಮೂಲಕ ಆರ್ಡರ್ ಮಾಡುವಾಗ ಗ್ರಾಹಕರೇ ಎಚ್ಚರ..!

    46 ಸಾವಿರ ರೂಪಾಯಿ ಐಫೋನ್​ ಬದಲಿಗೆ ಬಂದಿದ್ದು 3 ಸೋಪುಗಳು

ಈಗೆಲ್ಲ ಡಿಜಿಟಲ್ ಯುಗ, ಕುಳಿತಲ್ಲಿಂದಲೇ ಆನ್​​ಲೈನ್ ಮೂಲಕ ಏನಾದರೂ ಆರ್ಡರ್​ ಮಾಡಿ ತರಿಸಿಕೊಳ್ಳಬಹುದು. ಬೆರಳ ತುದಿಯಿಂದ ಬೇಕಾದಷ್ಟು ವ್ಯಾಪಾರ-ವ್ಯವಹಾರ ಮಾಡುವುದು ಈಗಿನ ಜನರಿಗೆ ರೂಢಿಯಾಗಿ ಬಿಟ್ಟಿದೆ. ಆದ್ರೆ ಹೀಗೆ ಮಾಡುವಾಗ ಕೊಂಚ ಎಚ್ಚರದಿಂದ ಇರಬೇಕು. ಏಕೆಂದರೆ ಕೆಲವೊಬ್ಬ ಖತರ್ನಾಕ್ ಖದೀಮರು ಆನ್​ಲೈನ್​ ಮೂಲಕವೇ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ. ಇದೇ ರೀತಿ ಮುಂಬೈಯ ಗ್ರಾಹಕನೋರ್ವ ಐಫೋನ್ ಆರ್ಡರ್ ಮಾಡಿದ್ರೆ ಪಾತ್ರೆ ಉಜ್ಜುವ ಸೋಪುಗಳು ಬಂದಿದ್ದು ನೋಡಿ ಶಾಕ್ ಆಗಿದ್ದಾನೆ.

ಥಾಣೆ ನಗರದ ಭಯಾಂದರ್​ನಲ್ಲಿನ ಸ್ಟೇಷನರಿ ಅಂಗಡಿಯೊಂದನ್ನ ನಡೆಸುತ್ತಿರುವ ಯುವಕ ಆನ್​ಲೈನ್ ಮೂಲಕ ಐಪೋನ್- 13 ಅನ್ನು ಆರ್ಡರ್ ಮಾಡಿ, 46,000 ರೂ.ಗಳನ್ನು ಪಾವತಿ ಮಾಡಿದ್ದರು. ಹೊಸ ಮೊಬೈಲ್ ಬರುತ್ತದೆಂದು ಯುವಕ ಖುಷಿಯಲ್ಲಿದ್ದ, ಅದರಂತೆ ನಾಲ್ಕೈದು ದಿನ ತಡೆದು ಡೆಲಿವರಿಯವರು ಬಂದು ಮೊಬೈಲ್ ಕೊಟ್ಟು ಹೋಗಿದ್ದಾರೆ. ಬಳಿಕ ಮನೆಯಲ್ಲಿ ಬಾಕ್ಸ್​ ಅನ್ನು ಓಪನ್ ಮಾಡಿ ನೋಡಿದ್ದಾಗ ಐಪೋನ್ ಬದಲಿಗೆ 3 ಪಾತ್ರೆ ಉಜ್ಜುವ ಸೋಪ್​ಗಳು ಬಂದಿವೆ ಎಂದು ಹೇಳಲಾಗಿದೆ.

ಸದ್ಯ ಐಪೋನ್ ಬದಲಿಗೆ 3 ಪಾತ್ರೆ ಉಜ್ಜುವ ಸೋಪ್​ ಬಂದಿದ್ದಕ್ಕೆ ಯುವಕ ಬೇಸರಗೊಂಡಿದ್ದು ಕಸ್ಟಮರ್​ ಕೇರ್​ಗೆ ದೂರು ನೀಡಿದ್ದಾರೆ. ಇದಕ್ಕೆ ಕಸ್ಟಮರ್ ಕೇರ್ ರೆಸ್ಪಾನ್ಸ್ ಮಾಡದಿದ್ದಕ್ಕೆ ಭಯಾಂದರ್​ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ನಲ್ಲಿ iPhone ಆರ್ಡರ್​.. ಡೆಲಿವರಿ ಆಗಿದ್ದು ಮಾತ್ರ 3 ಪಾತ್ರೆ ಉಜ್ಜುವ ಸೋಪು; ನಡೆದಿದ್ದೆಲ್ಲಿ?

https://newsfirstlive.com/wp-content/uploads/2023/11/IPHONE_13.jpg

Load More