newsfirstkannada.com

ಸೋನಲ್​​​, ತರುಣ್​ ಸುಧೀರ್​​​ ಕೋಟಿ ಕೋಟಿ ವೆಚ್ಚದ ದೈವಿಕ ಮಂಟಪ; ಏನಿದರ ವಿಶೇಷತೆ?

Share :

Published August 25, 2024 at 6:20am

    ಪ್ಯಾಲೇಸ್‌ನಲ್ಲಿ ಮಾಡಿದಂತ ಪ್ರತಿಯೊಂದು ಡಿಸೈನ್​ ಹೇಗಿದ್ವು?

    ಮದುವೆಗೆ ಬಂದ ಪ್ರತಿಯೊಬ್ಬರನ್ನ ಆಕರ್ಷಿಸಿದ್ದ ವಿನ್ಯಾಸಗಳು

    ತರುಣ್, ಸೋನಲ್ ಯಾವ ಪ್ಯಾಲೇಸ್​ನಲ್ಲಿ ಮದುವೆ ಆಗಿದ್ರು?

ಸ್ಯಾಂಡಲ್​ವುಡ್​ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ನವದಂಪತಿ ಮೊದಲ ಬಾರಿಗೆ ವರಮಹಾಲಕ್ಷ್ಮೀ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ತರುಣ್, ಸೋನಲ್ ಆಗಸ್ಟ್ 11ರಂದು ಸಿಲಿಕಾನ್ ಸಿಟಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ವಿವಾಹ ಸಂಭ್ರಮಕ್ಕಾಗಿ ಪ್ಯಾಲೇಸ್‌ನಲ್ಲಿ ಮಾಡಿದಂತ ಪ್ರತಿಯೊಂದು ಡಿಸೈನ್​ ದೈವಿಕ ಸ್ವರೂಪ ಹಾಗೂ ಪವಿತ್ರತೆ ಬಗ್ಗೆ ಹೇಳುತ್ತಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಜನಿಕಾಂತ್​​​ಗೆ ಠಕ್ಕರ್ ಕೊಡ್ತಾರಾ ಉಪೇಂದ್ರ..? ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಪಾತ್ರವೇನು?

ಡೈರೆಕ್ಟರ್ ತರುಣ್, ಸೋನಲ್ ವಿವಾಹ ಸಂಭ್ರಮಕ್ಕೆ ಪೂರ್ಣಿಮಾ ಪ್ಯಾಲೇಸ್​ ಅನ್ನು ಡಿಸೈನ್​ ಮಾಡುವುದಕ್ಕೂ ಮೊದಲು ಪ್ರತಿಯೊಂದನ್ನು ಕುಳಿತು ಚರ್ಚೆ ಮಾಡಲಾಗಿದೆ. ಕಂಪ್ಯೂಟರ್​ನಲ್ಲಿ ಮೊದಲು ಸ್ಕೆಚ್​ಗಳನ್ನ ಮಾಡಿ ಓಕೆ ಆದ ಮೇಲೆ ಅದನ್ನು ಪ್ಯಾಲೇಸ್​ನಲ್ಲಿ ವಿನ್ಯಾಸ ಮಾಡಲಾಗಿದೆ. ಆದರೆ ವಿವಾಹದ ಮಂಟಪಕ್ಕೆ ದೈವಿಕ ಸ್ವರೂಪ ಕೊಟ್ಟಿದ್ದೆ ವಿಶೇಷ ಎನಿಸಿದೆ.

ಮಂಟಪದ ಕಂಬಗಳು ನಿಜವಾದ ಕಲಾಕೃತಿಯಂತೆ ನಿರ್ಮಾಣ ಮಾಡಲಾಗಿದ್ದು, ದೈವಿಕ ಸ್ವರೂಪ ನೀಡಲಾಗಿದೆ. ದೇವಾಲಯಗಳಲ್ಲಿ ಕಂಬಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿತ್ತೋ ಅದೇ ರೀತಿ ಮಂಟಪದ ಕಂಬಗಳನ್ನು ವಿನ್ಯಾಸ ಮಾಡಲಾಗಿತ್ತು. ಪ್ರತಿ ಕಂಬವನ್ನು ಅತ್ಯಂತ ಸೂಕ್ಷ್ಮವಾಗಿ ರಚಿಸಲಾಗಿತ್ತು. ನವದಂಪತಿಗೆ ಯಾವುದೇ ಅಡ್ಡಿ, ಆತಂಕದಂತಹ ಸಮಸ್ಯೆಗಳು ಬರದಂತೆ ವಿನ್ಯಾಸದಲ್ಲಿ ಆಧ್ಯಾತ್ಮಿಕವಿತ್ತು. ರಕ್ಷಣೆ, ಆಶೀರ್ವಾದ ಹಾಗೂ ಸಮಾರಂಭದ ಪವಿತ್ರತೆ ಸಂಕೇತಿಸುವ ದೇವತೆಗಳ ಮೂರ್ತಿಗಳನ್ನ ಕೆತ್ತನೆ ಮಾಡಿರುವುದು ಎಲ್ಲರ ಕಣ್ಮನ ಸೆಳೆಯುತ್ತಿದ್ದವು.

ಇದನ್ನೂ ಓದಿ: ‘ದರ್ಶನ್​ರನ್ನ ಆ ತರ ನೋಡೋದಕ್ಕೆ ಕಷ್ಟ ಆಗ್ತಿದೆ, ನಿಮ್ಮಷ್ಟೇ ಮಿಸ್ ಮಾಡಿಕೊಳ್ತಿದ್ದೇನೆ’.. ನಟಿ ರಚಿತಾ ರಾಮ್ 

ತರುಣ್, ಸೋನಲ್ ವಿವಾಹ ಸಂಭ್ರಮಕ್ಕೆ ಪೂರ್ಣಿಮಾ ಪ್ಯಾಲೇಸ್​ ಅನ್ನು ತುಂಬಾ ಅದ್ಭುತವಾಗಿ ವಿನ್ಯಾಸ ಮಾಡಿದ್ದು ‘ಕಲಾಂಜನಿ ವೆಡ್ಡಿಂಗ್ಸ್​’ ನವರು. ಪ್ಯಾಲೇಸ್​ ಅನ್ನು ಯಾವ ರೀತಿ ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು ಎನ್ನುವ ಬಗೆಗಿನ ಫೋಟೋ, ವಿಡಿಯೋಗಳನ್ನು ಕಲಾಂಜನಿ ವೆಡ್ಡಿಂಗ್ಸ್ ತನ್ನ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದು ಎಲ್ಲ ಡಿಸೈನ್ಸ್​ ಮನಮೋಹಕವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನಲ್​​​, ತರುಣ್​ ಸುಧೀರ್​​​ ಕೋಟಿ ಕೋಟಿ ವೆಚ್ಚದ ದೈವಿಕ ಮಂಟಪ; ಏನಿದರ ವಿಶೇಷತೆ?

https://newsfirstlive.com/wp-content/uploads/2024/08/TARUN_SONAL.jpg

Load More