/newsfirstlive-kannada/media/post_attachments/wp-content/uploads/2024/08/tharun-sudir1-1.jpg)
ಸ್ಯಾಂಡಲ್​ವುಡ್​​ ಸ್ಟಾರ್​​ ನಿರ್ದೇಶಕ ತರುಣ್​ ಸುಧೀರ್​ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ನಟಿ ಸೋನಲ್​ ಮೊಂಥೆರೊ ಅವರನ್ನು ವರಿಸುವ ಮೂಲಕ ವಿವಾಹಿತನೆಂದೆನಿಸಿಕೊಂಡಿದ್ದಾರೆ. ಅಂದಹಾಗೆಯೇ ಇವರ ಮದುವೆಗೆ ಸ್ಯಾಂಡಲ್​ವುಡ್​ನ ಅನೇಕರ ತಾರೆಯರು ಭಾಗಿಯಾಗಿದ್ದು, ನವ ವಧು-ವರರಿಗೆ ಆಶೀರ್ವಾದಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/tharun-sudir2-1.jpg)
ಇದನ್ನೂ ಓದಿ: ತಾಳಿ ಕಟ್ಟುತ್ತಿದ್ದಂತೆ ಸೋನಲ್ ಮೊಂತೆರೊ​ ಕಣ್ಣೀರು.. ಸತಿ-ಪತಿಗಳಾದ ನಿರ್ದೇಶಕ ಮತ್ತು ನಟಿ
ತರುಣ್​ ವಿವಾಹವನ್ನು ಕಾಣೋದು ಅವರ ತಾಯಿಯ ಕನಸಾಗಿತ್ತು. ಈ ವಿಚಾರವನ್ನು ಅವರ ತಾಯಿ ಹಲವು ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಅದರಂತೆಯೇ ಇದೀಗ ತರುಣ್​ ನಟಿ ಸೋನಲ್​ ಪ್ರೀತಿಗೆ ಬೀಳುವ ಮೂಲಕ ಅವರನ್ನು ವಿವಾಹವಾಗಿದ್ದಾರೆ. ಸಿನಿಮಾ ಶೂಟಿಂಗ್​ ವೇಳೆ ಇವರಿಬ್ಬರ ಪರಿಚಯವಾಗಿ ಸ್ನೇಹ ಬೆಳೆದು ಕೊನೆಗೆ ಪ್ರೀತಿಗೆ ತಿರುಗಿದೆ. ಅಂದಹಾಗೆಯೇ ಈ ಜೋಡಿ ಲವ್​ ಸ್ಟೋರಿ ಸಖತ್ತಾಗಿದೆ.
/newsfirstlive-kannada/media/post_attachments/wp-content/uploads/2024/08/tharun-sudir5-1.jpg)
ಅಲ್ಲೇ ಆರಂಭ ಪ್ರೇಮ
ರಾಬರ್ಟ್ ಚಿತ್ರದ ವೇಳೆ ತರುಣ್​ ಸುಧೀರ್ ಮತ್ತು ಸೋನಲ್​​ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಚಿತ್ರೀಕರಣ ಸಮಯದಲ್ಲಿ ತರುಣ್ ಮತ್ತು ಸೋನಲ್​ಗೆ ನಟ ದರ್ಶನ್ ತಮಾಷೆಗೆ ರೇಗಿಸ್ತಿದ್ದರಂತೆ. ಹೀಗೆ ದಿನಗಳು ಕಳೆದಂತೆ ಈ ತಮಾಷೆಯೇ ಸಿರೀಯಸ್ ಆಯ್ತು ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/tharun-sudir3-1.jpg)
ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಂತೆ ಪ್ರೀತಿಯ ಬಂಧನ ಬೆಸೆದಿದೆ. ಆದರೆ ಆ ಪ್ರೀತಿ ಬಹಳ ಗುಟ್ಟಾಗಿ ಉಳಿದಿತ್ತಂತೆ. ಕೊನೆಗೆ ತರುಣ್ ಮತ್ತು ಸೋನಲ್ ಮನಬಿಚ್ಚಿ ಪ್ರೀತಿ ಹಂಚಿಕೊಂಡಿದ್ದಾರೆ. ತದನಂತರ ಎರಡು ಮನೆಯವರ ಭೇಟಿ ಮಾಡಿ ಮಾತುಕತೆ ಮಾಡಿದ್ದಾರೆ. ಎರಡು ಕುಟುಂಬದಿಂದಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇಂದು ಈ ಜೋಡಿ ವಿವಾಹವಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us